ಪುಣೆಯಲ್ಲಿ ರಸ್ತೆಯ ಮೇಲೆ ಇಸ್ರೇಲ್ ರಾಷ್ಟ್ರಧ್ವಜದ ಸ್ಟಿಕರ್ಸ್ ಅಂಟಿಸಿ ವಿಡಂಬನೆ !

ಪರೋಕ್ಷವಾಗಿ ಹಮಾಸಗೆ ಬೆಂಬಲ !

ಪುಣೆ – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ. ಇಸ್ರೇಲಿನ ರಾಷ್ಟ್ರಧ್ವಜದ ವಿಡಂಬನೆ ಮಾಡಿ ಪರೋಕ್ಷವಾಗಿ ಹಮಾಸಗೆ ಬೆಂಬಲ ಮಾಡಲಾಗಿದೆ. ’ಪುಣೆಯ ವಾತಾವರಣ ಕದಡುವ ಪ್ರಯತ್ನ ಮಾಡಲಾಗುತ್ತಿದೆ’, ಎಂದು ಜನರ ಅಭಿಪ್ರಾಯವಾಗಿದೆ. ಈ ಪ್ರಕರಣದಲ್ಲಿ ಪುಣೆ ನಗರದಲ್ಲಿನ ಲಷ್ಕರ್, ಸಮರ್ಥ, ಕೊಂಢವ ಮತ್ತು ಖಡಕ್ ಈ ೪ ಪೊಲೀಸ ಠಾಣೆಯಲ್ಲಿ ಬೇರೆ ಬೇರೆ ದೂರು ದಾಖಲಿಸಲಾಗಿದೆ. ಈ ಕೃತ್ಯ ಮಾಡುವುದರ ಹಿಂದೆ ಒಟ್ಟು ೬ ಜನರು ಇರುವುದಾಗಿ ತಿಳಿದಿದೆ. ಪೊಲೀಸರು ರಸ್ತೆಯಲ್ಲಿ ಅಂಟಿಸಿರುವ ಸ್ಟಿಕ್ಕರ್ಸ್ ತೆಗೆದಿದ್ದಾರೆ.

ಸಂಪಾದಕೀಯ ನಿಲುವು

ಕಳೆದ ಕೆಲವು ದಿನಗಳಲ್ಲಿ ಪುಣೆಯಲ್ಲಿ ಭಯೋತ್ಪಾದಕರು ಸಿಕ್ಕಿರುವ ಘಟನೆ ನೋಡಿದರೆ ಇಸ್ರೇಲ್ ವಿರೋಧ ಮತ್ತು ಹಮಾಸಅನ್ನು ಪರೋಕ್ಷವಾಗಿ ಬೆಂಬಲಿಸುವವರು ಪುಣೆಯಲ್ಲಿ ಇರುವುದು ಅಪಾಯಕಾರಿ !

ಇಂದು ಹಮಾಸಗಾಗಿ ಪ್ರತಿಭಟನೆ ಮಾಡುವವರು ನಾಳೆ ’ಗಜವಾ-ಎ-ಹಿಂದಗಾಗಿ (ಭಾರತವನ್ನು ಇಸ್ಲಾಮಿಸ್ತಾನ ಮಾಡುವುದಕ್ಕಾಗಿ) ರಸ್ತೆಗೆ. ಇಳಿಯುವರು. ಅದಕ್ಕಾಗಿ ಇಂತಹವರ ಮೇಲೆ ಸಮಯದಲ್ಲಿಯೇ ಕಠಿಣ ಕ್ರಮ ಕೈಗೊಳ್ಳುತ್ತ ಮತ್ತು ಅವರನ್ನು ಬೇರು ಸಹಿತ ನಾಶ ಮಾಡುವುದು ಅವಶ್ಯಕವಾಗಿದೆ !