‘ಲಿವ್ ಇನ್ ರಿಲೇಶನಶಿಪ್’ ಎಂದರೆ ‘ಟೈಂಪಾಸ್’ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಇಂತಹ ಸಂಬಂಧಗಳಲ್ಲಿ ಪ್ರಾಮಾಣಿಕತೆಗಿಂತಲೂ ಆಕರ್ಷಣೆಯೇ ಹೆಚ್ಚು; ನ್ಯಾಯಾಲಯದ ಅಭಿಪ್ರಾಯ !

ಪ್ರಯಾಗರಾಜ (ಉತ್ತರಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯವು ‘ಲಿವ್ ಇನ್ ರಿಲೇಶನಶಿಪ್’ನಲ್ಲಿ ಇರುವ ಒಂದು ಜೋಡಿಗೆ ಪೊಲೀಸರ್ ರಕ್ಷಣೆ ಬೇಕೆಂದು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸದೆ. ನ್ಯಾಯಾಲಯವು ‘ಈ ರೀತಿಯ ಸಂಬಂಧ ಕೇವಲ ‘ಟೈಮ್ ಪಾಸ್’ ಎಂದರೆ ಕಾಲಹರಣಕ್ಕಾಗಿ ಇರುತ್ತದೆ’, ಎಂದು ಟಿಕಿಸಿದೆ. ಇದೇ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ‘ಲಿವ್ ಇನ್ ರಿಲೇಶನಶಿಪ್’ ಬಗ್ಗೆ ನೀಡಿರುವ ವಿವಿಧ ತೀರ್ಪುಗಳನ್ನು ಯೋಗ್ಯ ಎಂದೂ ನಿರ್ಧರಿಸಿದೆ.

ಈ ಘಟನೆಯಲ್ಲಿ ಯುವತಿ ಹಿಂದೂ ಆಗಿದ್ದು ಯುವಕ ಮುಸಲ್ಮಾನನಾಗಿದ್ದಾನೆ. ಯುವತಿಯ ದೊಡ್ಡಮ್ಮ ಈ ಯುವಕನ ವಿರುದ್ಧ ದೂರು ನೀಡಿರುವುದರಿಂದ ಆರೋಪ ದಾಖಲವಾಗಿದೆ. ಇದರ ಬಗ್ಗೆ ಯುವಕ ಮತ್ತು ಯುವತಿಯರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಅವರಿಗೆ ಪೊಲೀಸ ರಕ್ಷಣೆ ನೀಡಲು ಒತ್ತಾಯಿಸಿದರು. ನ್ಯಾಯಾಲಯದಲ್ಲಿ ಯುವತಿಯ ನ್ಯಾಯವಾದಿ, ಯುವತಿ ೨೦ ವರ್ಷದ ಪ್ರಜ್ಞಾನಂತಳಾಗಿದ್ದಾಳೆ ಮತ್ತು ಆಕೆಗೆ ಆಕೆಯ ಭವಿಷ್ಯದ ನಿರ್ಣಯ ತೆಗೆದುಕೊಳ್ಳಲು ಸಂಪೂರ್ಣ ಅಧಿಕಾರವಿದೆ. ಆಕೆ ಯುವಕನನ್ನು ಆಯ್ಕೆ ಮಾಡಿಕೊಂಡು ಅವನ ಜೊತೆಗೆ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ವಾಸಿಸುತ್ತಿದ್ದಾಳೆ ಎಂದು ಹೇಳಿದರು. ಇದರ ಬಗ್ಗೆ ಯುವತಿಯ ದೊಡ್ಡಮ್ಮನ ನ್ಯಾಯವಾದಿ, ಯುವಕನ ಮೇಲೆ ಗೂಂಡಾ ಕಾನೂನಿನಂತರ್ಗತ ಮೊದಲೇ ದೂರು ದಾಖಲವಾಗಿದೆ. ಅವನು ಗೂಂಡಾ ಆಗಿದ್ದು ಅವನಿಗೆ ಯಾವುದೇ ಭವಿಷ್ಯವಿಲ್ಲ ಅವನು ಈ ಯುವತಿಯ ಜೀವನ ಹಾಳ ಮಾಡಬಹುದು ಎಂದು ಹೇಳಿದರು.

ಉಚ್ಚ ನ್ಯಾಯಾಲಯವು ಮಂಡಿಸಿರುವ ಅಂಶಗಳು

೧. ಕೇವಲ ೨ ತಿಂಗಳ ಕಾಲಾವಧಿಯಲ್ಲಿ ಮತ್ತು ೨೦ ರಿಂದ ೨೨ ವರ್ಷ ವಯಸ್ಸು ಇರುವ ಜೋಡಿಗಳಿಂದ ಈ ರೀತಿಯ ಅಪೇಕ್ಷೆ ಕೂಡ ಮಾಡಲಾಗದು ಅವರು ಈ ರೀತಿಯ ತತ್ಕಾಲಿನ ಸಂಬಂಧದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿರಬಹುದು.

೨. ನ್ಯಾಯಾಲಯಕ್ಕೆ, ಈ ರೀತಿಯ ಸಂಬಂಧದಲ್ಲಿ ಸ್ಥಿರತೆ ಮತ್ತು ಪ್ರಾಮಾಣಿಕತೆಗಿಂತಲೂ ಮೋಹ ಮತ್ತು ಆಕರ್ಷಣೆ ಹೆಚ್ಚಾಗಿರುತ್ತದೆ ಎಂದು ಅನಿಸುತ್ತದೆ ಎಂದು ಹೇಳಿದೆ.

೩. ಎಲ್ಲಿಯವರೆಗೆ ಈ ಜೋಡಿ ವಿವಾಹ ಮಾಡಿಕೊಳ್ಳುವ ನಿರ್ಣಯ ತೆಗೆದುಕೊಳ್ಳುವುದಿಲ್ಲ, ಅವರ ಸಂಬಂಧಕ್ಕೆ ಹೆಸರು ಇರುವುದಿಲ್ಲ ಅಥವಾ ಪರಸ್ಪರರ ಬಗ್ಗೆ ಪ್ರಾಮಾಣಿಕವಾಗಿರುವುದಿಲ್ಲ, ಅಲ್ಲಿಯವರೆಗೆ ನ್ಯಾಯಾಲಯ ಈ ರೀತಿಯ ಸಂಬಂಧದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದರ ಕುರಿತು ತನ್ನನ್ನು ತಡೆಯುವುದು.

೪. ನಮ್ಮ ವಿಚಾರಗಳನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದೆ.