ನವದೆಹಲಿ – ದೆಹಲಿಯ ತೀಸಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನಸಿಂಗ್ ರಾಜಾವತ್ ಅವರು ‘ದಿ ವಾಯರ್’ ಈ ವಾರ್ತಾ ಜಾಲತಾಣದ ಸಂಪಾದಕರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮುಂತಾದವುಗಳನ್ನು ಜಪ್ತಿ ಮಾಡಿದ ಸಲಕರಣೆಗಳನ್ನು ಹಿಂದಿರುಗಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದ್ದರೆ. ಈ ವೇಳೆ ನ್ಯಾಯಮೂರ್ತಿ ರಾಜಾವತ್ ಇವರು, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಪತ್ರಿಕೆಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದೆ. “ಪತ್ರಕರ್ತರನ್ನು ಮುಕ್ತವಾಗಿ ಕೆಲಸ ಮಾಡಲು ಬಿಡದಿದ್ದರೆ, ಅದು ಪ್ರಜಾಪ್ರಭುತ್ವದ ಬೇರುಗಳಿಗೆ ಆಳವಾದ ಹೊಡೆತವಾಗಿದೆ” ಎಂದು ಲಿಖಿತ ನಿರೀಕ್ಷಣೆಯನ್ನು ನೊಂದಾಯಿಸಿದೆ.
ಕಳೆದ ವರ್ಷ, ಭಾಜಪ ನಾಯಕ ಅಮಿತ್ ಮಾಳವಿಯಾ ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ‘ವಾಯರ್’ ಸಂಪಾದಕರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡರು. ನ್ಯಾಯಾಲಯವು ತನ್ನ ಆದೇಶದಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳುವುದರಿಂದ ಸಂಪಾದಕರು ಕೆಲಸ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ಪೊಲೀಸರ ಈ ಕ್ರಮ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಮದು ಹೇಳಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ನ್ಯಾಯಾಲಯದ ಅಭಿಪ್ರಾಯ
ನ್ಯಾಯಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಂಡಿಸಿದ ಅಭಿಪ್ರಾಯ ಸರಿಯಾಗಿದೆ; ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ‘ದಿ ವಾಯರ್’ ನಂತಹ ದೇಶವಿರೋಧಿ ಮಾಧ್ಯಮಗಳು ಮಾಡುತ್ತಿರುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ನ್ಯಾಯಾಲಯ ಗಮನ ಹರಿಸಿ ಸಾಮಾನ್ಯ ನಾಗರಿಕರಿಗೆ ಧೈರ್ಯ ತುಂಬಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ.
ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರಕಾರವು ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಹೊರತರಲು ಉನ್ನತ ನ್ಯಾಯಾಲಯಕ್ಕೆ ಮನವಿ ಮಾಡಬೇಕು ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !