೨೦೩೦ ರ ವರೆಗೆ ಚೀನಾ ಒಂದು ಸಾವಿರ ಅಣ್ವಸ್ತ್ರಗಳನ್ನು ಉತ್ಪಾದಿಸಲಿದೆ ! – ಅಮೇರಿಕಾ

ಬೀಚಿಂಗ್ – ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ. ಅಮೇರಿಕಾದ ಒಂದು ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಪೆಂಟಾಗಾನಿನ ಪ್ರಸಿದ್ಧ ಗೊಳಿಸಿರುವ ವರದಿಯಲ್ಲಿ, ಚೀನಾ ಹೊಸ ಅಂತರಿಕಾಖಂಡಿಯ ಕ್ಷಿಪಣಿ ಪ್ರಣಾಳಿ ಅಭಿವೃದ್ಧಿ ಗೋಳಿಸಬಹುದು. ಇದರಲ್ಲಿ ಪರಂಪರಗಾತವಾದ ಶಸ್ತ್ರಗಳು ಕೂಡ ಉಪಯೋಗಿಸಲಾಗುವುದು. ಇದರಿಂದ ಚೀನಾ ಅಮೇರಿಕಾಗೆ ಗುರಿ ಮಾಡುವ ಬೆದರಿಕೆ ನೀಡಬಹುದು.

(ಸೌಜನ್ಯ – arirang NEWS)

೧. ಮುಂದಿನ ತಿಂಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಏಶಿಯಾ ಪ್ಯಾಸಿಪೀಕ್ ಆರ್ಥಿಕ ಸಹಕಾರ್ಯ ಶಿಖರ ಸಮ್ಮೇಳನದ ಹಿನ್ನೆಲೆಯಲ್ಲಿ ಶೀ ಜೀನಪಿಂಗ್ ಮತ್ತು ಜೋ ಬಾಯಡೆನ್ ಇವರ ಅಪೇಕ್ಷಿತ ಸಭೆಗೆ ಒಂದು ತಿಂಗಳ ಮೊದಲು ಈ ವರದಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಪ್ರಸಿದ್ಧವಾಗುವ ಈ ವರದಿಯಲ್ಲಿ ಎಂದರೆ ಚೀನಾದ ಹೆಚ್ಚುತ್ತಿರುವ ಸೈನ್ಯದ ಕ್ಷಮತೆ ಅಳೆಯುವ ಪೆಂಟಾಗಾನಿನ ರೂಢಿಯಾಗಿದೆ.

೨. ‘ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ದ ಅಭಿಪ್ರಾಯದ ಪ್ರಕಾರ, ರಷ್ಯಾದ ಬಳಿ ೫ ಸಾವಿರದ ೮೮೯ ಅಣ್ವಸ್ತ್ರಗಳು ಇವೆ. ಅಮೇರಿಕಾದ ಬಳಿ ೩ ಸಾವಿರ ೭೫೦ ಅಣ್ವಸ್ತ್ರಗಳು ಇವೆ ಹಾಗೂ ಚೀನಾದ ಬಳಿ ಈಗ ೫೦೦ ಅಣ್ವಸ್ತ್ರಗಳು ಇವೆ.

ಸಂಪಾದಕೀಯ ನಿಲುವು

ಚೀನಾದ ಹೆಚ್ಚುತ್ತಿರುವ ಅಣ್ವಸ್ತ್ರಗಳ ಕ್ಷಮತೆ ಗಮನಿಸಿದರೆ ಭಾರತ ಅಲ್ಪಸಮಯದಲ್ಲಿ ಯುದ್ಧಕ್ಕೆ ಸಜ್ಜಾಗುವುದು ಅವಶ್ಯಕ !