ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್, ಅವನ ಪತ್ನಿ ಮತ್ತು ಪುತ್ರನು ಸೇರಿ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ !

ಚುನಾವಣೆ ಸ್ಪರ್ಧೆಗಾಗಿ ಪುತ್ರ ಅಬ್ದುಲ್ಲ ಇವನು ನಕಲಿ ಜನನ ಪ್ರಮಾಣ ಪತ್ರ ತಯಾರಿಸಿದ್ದನು !

ರಾಮಪುರ (ಉತ್ತರಪ್ರದೇಶ ) – ಸ್ಥಳೀಯ ನ್ಯಾಯಾಲಯವು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಆಜಮ್ ಖಾನ್, ಅವನ ಪತ್ನಿ ತಂಜಿನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲ ಇವರಿಗೆ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಪುತ್ರ ಅಬ್ದುಲ್ಲ ಇವನು ನಕಲಿ ಜನನ ಪ್ರಮಾಣ ಪತ್ರ ತಯಾರಿಸಿರುವ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಇಲ್ಲಿಯವರೆಗೆ ಮೂವರು ಜಾಮೀನಿನ ಮೇಲೆ ಹೊರಗೆ ಇದ್ದರು. ನ್ಯಾಯಾಲಯದ ತೀರ್ಪಿನ ನಂತರ ಮೂವರನ್ನು ನ್ಯಾಯಾಲಯದಲ್ಲಿಯೆ ಬಂಧಿಸಲಾಗಿದೆ.

(ಸೌಜನ್ಯ – ಇಂಡಿಯಾ ಟುಡೆ)

೧. ಆಜಮ್ ಖಾನ್ ಇವನ ಪುತ್ರ ಅಬ್ದುಲ್ಲ ಇವನ ಬಳಿ ಎರಡು ಜನನ ಪ್ರಮಾಣ ಪತ್ರಗಳಿದ್ದವು. ರಾಮಪುರದಲ್ಲಿ ಜನನ ಪ್ರಮಾಣ ಪತ್ರ ತಯಾರಿಸಲಾಗಿದೆ. ಇನ್ನೊಂದು ಪ್ರಮಾಣ ಪತ್ರ ಲಕ್ಷ್ಮಣಪುರಿಯಲ್ಲಿ ತಯಾರಿಸಲಾಗಿದೆ. ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಅಬ್ದುಲ್ಲ ಇವನ ಜನ್ಮ ದಿನಾಂಕ ಜನವರಿ ೧.೧೯೯೩ ಎಂದಾಗಿದೆ ಹಾಗೂ ಜನನ ಪ್ರಮಾಣ ಪತ್ರದ ಆಧಾರವಾಗಿ ಈ ಜನ್ಮ ದಿನಾಂಕ ಸಪ್ಟೆಂಬರ್ ೩೦.೧೯೯೦ ಆಗಿರುವುದು ನಮೂದಿಸಲಾಗಿದೆ. ಚುನಾವಣಾ ಸ್ಪರ್ಧೆಯಲ್ಲಿ ಇದು ಬೆಳಕಿಗೆ ಬಂದಿದೆ. ಇದರ ನಂತರ ಈ ಪ್ರಕರಣ ನ್ಯಾಯಾಲಯಕ್ಕೆ ತಲುಪಿದ ನಂತರ ಅಬ್ದುಲ್ಲ ಇವನು ಪ್ರಸ್ತುತಪಡಿಸಿರುವ ಜನನ ಪ್ರಮಾಣ ಪತ್ರ ನಕಲಿ ಆಗಿರುವುದು ಕಂಡು ಬಂದಿದೆ. ಇದರ ನಂತರ ಅವರ ಮತದಾರ ಕ್ಷೇತ್ರದಲ್ಲಿ ಚುನಾವಣೆ ಕೂಡ ರದ್ದುಪಡಿಸಲಾಗಿತ್ತು. ಚುನಾವಣೆ ಸ್ಪರ್ಧೆಗಾಗಿ ಅವನು ಜನ್ಮ ದಿನಾಂಕ ಹೆಚ್ಚಿಸಿರುವುದು ಕಂಡು ಬಂದಿದೆ.

೨. ಭಾಜಪದ ನಾಯಕ ಮತ್ತು ಸಂಸದ ಆಕಾಶ ಸಕ್ಸೆನ ಇವರು ೨೦೧೯ ರಲ್ಲಿ ರಾಮಪುರದ ಗಂಜ ಪೊಲೀಸ ಠಾಣೆಯಲ್ಲಿ ಅಬ್ದುಲ್ಲ ವಿರುದ್ಧ ದೂರು ನೀಡಿದ ನಂತರ ದೂರು ದಾಖಲಿಸಲಾಯಿತು. ಶಿಕ್ಷೆಯ ತೀರ್ಪಿನ ಮೇಲೆ ಸಂಸದ ಆಕಾಶ ಸಕ್ಸೆನ ಇವರು, ಇದು ಸತ್ಯದ ವಿಜಯವಾಗಿದೆ ಎಂದು ಅವರಿಗೆ ಅವರ ಕೃತ್ಯದ ಶಿಕ್ಷೆ ಆಗಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಕೂಡ ಅವರ ವಿರುದ್ಧ ಬಾಕಿ ಇರುವ ಮೊಕ್ಕಾದಮೆಯಲ್ಲಿ ಅವರಿಗೆ ಶಿಕ್ಷೆ ಆಗುವುದು ಎಂಬುದು ನನಗೆ ನಂಬಿಕೆ ಇದೆ. ಸತ್ಯದ ಹೋರಾಟದಲ್ಲಿ ವಿಜಯ ಸತ್ಯದ್ದೆ ಆಗಿರುತ್ತದೆ ಎಂದು ಹೇಳಿದರು.