ಗೋಹತ್ಯೆ ಸೇರಿದಂತೆ 34 ಅಪರಾಧಗಳಲ್ಲಿ ಭಾಗಿ
ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಮುಝಫ್ಫರನನ್ನು ಬುರಖಾ ಧರಿಸಿ ಓಡುತ್ತಿದ್ದಾಗ ಬಂಧಿಸಲಾಯಿತು. ಮಹಮ್ಮದ ಮುಝಪ್ಫರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಗೋಹತ್ಯೆ ಸೇರಿದಂತೆ 34 ಪ್ರಕರಣಗಳು ದಾಖಲಾಗಿವೆ. ಮುಝಫ್ಫರ ಬಂಧನವನ್ನು ತಪ್ಪಿಸಲು ಬುರಖಾ ಹಾಕಿಕೊಂಡು ಪಲಾಯನ ಮಾಡುತ್ತಿದ್ದನು; ಆದರೆ ಪೊಲೀಸರು ಆತನನ್ನು ಗುರುತಿಸಿ ಬಂಧಿಸಿದ್ದಾರೆ. (ಅಪರಾಧಿಗಳಿಂದಲೇ ತುಂಬಿರುವ ಸಮಾಜವಾದಿ ಪಕ್ಷವನ್ನು ನಿಷೇಧಿಸುವುದೇ ಸೂಕ್ತವಾಗುತ್ತದೆ ! – ಸಂಪಾದಕರು)
1. ಮುಝಪ್ಪರ ಒಂದು ಮದುವೆಯಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ಬಂದಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ‘ಪೊಲೀಸರು ಬಂಧಿಸುತ್ತಾರೆ’ ಎಂಬ ಮಾಹಿತಿ ಸಿಕ್ಕ ತಕ್ಷಣ ತಪ್ಪಿಸಿಕೊಳ್ಳಲು ಈತನು ಪ್ರಯತ್ನಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮುಝಪ್ಫರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.
2. ಮುಝಪ್ಪರ ವಿರುದ್ಧ ಪ್ರಯಾಗರಾಜ್, ಚಂದೌಲಿ, ವಾರಣಾಸಿ, ಭದೋಹಿ ಆಶಿ ಕೊಶಾಂಬಿ ಮುಂತಾದ ಜಿಲ್ಲೆಗಳಲ್ಲಿ 34 ಪ್ರಕರಣಗಳು ದಾಖಲಾಗಿವೆ. ಆಡಳಿತವು ಮುಝಪ್ಪರನ ಅನೇಕ ಲೆಕ್ಕವಿಲ್ಲದ ಆಸ್ತಿಪಾಸ್ತಿಗಳನ್ನು ಪತ್ತೆ ಮಾಡಿದೆ. ನವೆಂಬರ್ 2022 ರಲ್ಲಿ, ಮುಝಪ್ಪರನ 10 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು.