ಪಾಕಿಸ್ತಾನಿ ಮುಸಲ್ಮಾನ ಆಟಗಾರರು ಮತಾಂತರಕ್ಕೆ ನನ್ನ ಮೇಲೆ ಒತ್ತಡ ಹೇರುತ್ತಿದ್ದರು ! – ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ದಾನಿಶ ಕನೇರಿಯಾ

ಪಾಕಿಸ್ತಾನದ ಹಿಂದೂ ಮಾಜಿ ಕ್ರಿಕೆಟ್ ಆಟಗಾರ ದಾನಿಶ ಕನೇರಿಯಾ ಇವರ ಗಂಭೀರ ಆರೋಪ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಹಿಂದೂ ಮಾಜಿ ಕ್ರಿಕೆಟಿಗ ದಾನಿಶ ಕನೇರಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪ್ರಸಾರ ಮಾಡಿದ್ದು, ಅದರಲ್ಲಿ ಅವರು ಅಂದಿನ ಪಾಕಿಸ್ತಾನಿ ಮುಸಲ್ಮಾನ ಕ್ರಿಕೆಟಿಗರು ಅವರ ಮೇಲೆ ಇಸ್ಲಾಂ ಸ್ವೀಕರಿಸುವಂತೆ ಯಾವಾಗಲೂ ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದಾರೆ.

ಶ್ರೀಲಂಕಾ ಆಟಗಾರರನ್ನು ಕೂಡ ಮತಾಂತರಕ್ಕೆ ಪ್ರೋತ್ಸಾಹಿಸಲು ಪ್ರಯತ್ನ !

ದಾನಿಶ ಕನೇರಿಯಾ ಇವರು ಪಾಕಿಸ್ತಾನಿ ಕ್ರಿಕೆಟಿಗ ಅಹ್ಮದ್ ಶಹಜಾದ್ ಅವರ ಒಂದು ಹಳೆಯ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಈ ವಿಡಿಯೋ 2014 ರಲ್ಲಿ ಶ್ರೀಲಂಕ ವಿರುದ್ಧದ ಪಂದ್ಯದ ಕಾಲಾವಧಿಯದ್ದಾಗಿದೆ. ಇದರಲ್ಲಿ ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲಶಾನ ಮತ್ತು ಅಹ್ಮದ್ ಶಹಜಾದ ಕಾಣಿಸುತ್ತಿದ್ದಾರೆ. ಇದರಲ್ಲಿ ಶಹಜಾದ್ ದಿಲಶಾನ ಇವರಿಗೆ, ‘ಒಂದು ವೇಳೆ ನೀನು ಮುಸ್ಲಿಮೇತರನಾಗಿದ್ದರೆ, ನೀನು ಮುಸಲ್ಮಾನನಾಗು. ಇದರಿಂದಾಗಿ ನೀನು ಜೀವನದಲ್ಲಿ ಏನೇ ಮಾಡಿದರೂ ನೇರ ಸ್ವರ್ಗಕ್ಕೆ ಹೋಗುತ್ತೀಯಾ.’ ಎಂದಿದೆ ಈ ವಿಡಿಯೋವನ್ನು ಟ್ವೀಟ್ ಮಾಡುವಾಗ, ಕನೇರಿಯಾ, ಸ್ಟೇಡಿಯಂ ಕೋಣೆಯಲ್ಲಿ, ಮೈದಾನದಲ್ಲಿ ಅಥವಾ ಊಟದ ಮೇಜಿನ ಮೇಲೆ ನನ್ನೊಂದಿಗೆ ಯಾವಾಗಲೂ ಇದು (ಮತಾಂತರಕ್ಕೆ ಒತ್ತಡ) ಆಗುತ್ತಿತ್ತು’. ತಿಲಕರತ್ನೆ ದಿಲಶಾನರ ತಂದೆ ಮುಸ್ಲಿಂ ಮತ್ತು ತಾಯಿ ಬೌದ್ಧ ಧರ್ಮದರಾಗಿದ್ದರು. ದಿಲಶಾನ ತಾಯಿಯ ಧರ್ಮವನ್ನು ಪಾಲಿಸುತ್ತಿದ್ದರು.

ಶಾಹಿದ್ ಅಫ್ರಿದಿಗೆ ನಾನು ತಂಡದಲ್ಲಿರುವುದು ಬೇಡವಾಗಿತ್ತು !

ದಾನಿಶ ಕನೇರಿಯಾ ಇವರು ಪಾಕಿಸ್ತಾನದ ಮಾಜಿ ನಾಯಕ ಶಾಹಿದ ಆಫ್ರಿದಿ ಬಗ್ಗೆ, `ನಾನು ಪಾಕಿಸ್ತಾನ ತಂಡದಲ್ಲಿ ಇರಬೇಕು’, ಎಂದು ಆಫ್ರಿದಿಗೆ ಅನಿಸುತ್ತಿರಲಿಲ್ಲ. ನಾನು ಅದನ್ನು ನಿರ್ಲಕ್ಷಿಸುತ್ತಿದ್ದೆ. ಅಫ್ರಿದಿ ಇತರ ಆಟಗಾರರನ್ನು ನನ್ನ ವಿರುದ್ಧ ಪ್ರಚೋದಿಸುತ್ತಿದ್ದರು. ನಾನು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಅವರಿಗೆ ನನ್ನ ಬಗ್ಗೆ ಅಸೂಯೆಯೆನಿಸುತ್ತಿತ್ತು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಮುಸಲ್ಮಾನ ಕ್ರಿಕೆಟಿಗರ ನೈಜ ಮನಃಸ್ಥಿತಿ ಇದೇ ಆಗಿದೆ; ಆದರೆ ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿ ರಾಜಕೀಯ ನಾಯಕರು, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಯಾವಾಗಲೂ ‘ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬೇಕು’ ಎಂಬ ಮನಃಸ್ಥಿತಿಯನ್ನು ಹೊಂದಿದ್ದಾರೆ. ಈಗ ಅವರು ಈ ಘಟನೆಯ ಬಗ್ಗೆ ಬಾಯಿ ಬಿಡುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ !