ಪ್ಯಾರಿಸ್ (ಫ್ರಾನ್ಸ್) – ಪ್ಯಾರಿಸ್‌ನ ಉತ್ತರ ಭಾಗದಲ್ಲಿರುವ ಅರ್ರಾಸ್‌ನಲ್ಲಿ ಒಂದು ಶಾಲೆಯ ಶಿಕ್ಷಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ಫ್ರಾನ್ಸನ ಆಂತರಿಕ ಸಚಿವ ಗೆರಾಲ್ಡ್ ಡಾರ್ಮಾನಿನ್ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ‘ದಿ ಲೋಕಲ್ ಫ್ರಾನ್ಸ್’ ಈ ವಾರ್ತಾ ಜಾಲತಾಣವು ಮಾಹಿತಿ ನೀಡಿದೆ. ಅರ್ರಾಸ್ ನಗರದಲ್ಲಿರುವ ಗಂಬೆಟ್ಟಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ದಾಳಿಕೋರನು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ, ಈ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದವನು ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದನು ಎಂದು ಹೇಳಲಾಗುತ್ತಿದೆ.
1. ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯನುಸಾರ ದಾಳಿಕೋರ ಮತ್ತು ಆತನ ಒಬ್ಬ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಶಿಕ್ಷಕ ವಿದ್ಯಾರ್ಥಿಗಳಿಗೆ ಫ್ರೆಂಚ್ ಭಾಷೆಯನ್ನು ಕಲಿಸುತ್ತಿದ್ದರು, ಗಾಯಗೊಂಡವರಲ್ಲಿ ಒಬ್ಬರು ಕ್ರೀಡಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2. ನೆದರ್ಲೆಂಡನ ಇಸ್ಲಾಂ ವಿರೋಧಿ ಸಂಸದ ಮತ್ತು ‘ಪಾರ್ಟಿ ಫಾರ್ ಫ್ರೀಡಂ’ ಈ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗೀರ್ಟ್ ವಿಲ್ಡರ್ಸ್ ಈ ಘಟನೆಯ ಬಗ್ಗೆ ‘ಎಕ್ಸ್’ ಮೇಲೆ ವೀಡಿಯೊವನ್ನು ಪ್ರಸಾರ ಮಾಡಿ ಮಾಹಿತಿ ನೀಡಿದ್ದಾರೆ.
3. 3 ವರ್ಷಗಳ ಹಿಂದೆ ಅಂದರೆ ಅಕ್ಟೋಬರ್ 16, 2020 ರಂದು, ಪ್ಯಾರಿಸ್‌ನಲ್ಲಿ ಸ್ಯಾಮ್ಯುಯೆಲ್ ಪ್ಯಾಟಿ ಎಂಬ ಶಿಕ್ಷಕನನ್ನು ಅವನ ಓರ್ವ ಮುಸ್ಲಿಂ ವಿದ್ಯಾರ್ಥಿಯು ‘ಅಲ್ಲಾಹು ಅಕ್ಬರ್’ ಎಂದು ಹೇಳಿ ಶಿರಚ್ಛೇದ ಮಾಡಿದ್ದನು. ಇದಕ್ಕೆ ಜಗತ್ತಿನಾದ್ಯಂತ ತೀವ್ರವಾದ ಪ್ರತಿಧ್ವನಿ ಎದ್ದಿತ್ತು.
ಸಂಪಾದಕೀಯ ನಿಲುವುಎಲ್ಲಿಯವರೆಗೆ ಕೇವಲ ಹಮಾಸ್ ಅಥವಾ ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿರುವ ಜಿಹಾದ್ ಅಲ್ಲ, ಅವರನ್ನು ಪ್ರಚೋದಿಸುವ ಮೂಲ ಜಿಹಾದ್ ಶಿಕ್ಷಣವನ್ನು ನಷ್ಟಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ ! |