ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಇವರಿಂದ ಶತ್ರುಗಳಿಗೆ ಎಚ್ಚರಿಕೆ !
ತೆಲ್ ಅವಿವ್ – ನಮಗೆ ಈ ಯುದ್ಧ ಬೇಕಾಗಿರಲಿಲ್ಲ; ಆದರೆ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ರೀತಿಯಲ್ಲಿ ಈ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ನಾವು ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಈ ಯುದ್ಧವನ್ನು ಕೊನೆಗೊಳಿಸುತ್ತೇವೆ. ಒಂದು ಕಾಲದಲ್ಲಿ ಯಹೂದಿ ಜನರಿಗೆ ಸ್ವಂತ ರಾಜ್ಯವಿರಲಿಲ್ಲ. ಕೆಲವು ಕಾಲದ ವರೆಗೆ ಯೆಹೂದಿಗಳು ನಿರ್ಗತಿಕರಾಗಿದ್ದರು; ಆದರೆ ಇನ್ನು ಮುಂದೆ ಹೀಗೆ ನಡೆಯುವುದಿಲ್ಲ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ‘ಟಕ್ಸ್’ ಮೂಲಕ (ಹಿಂದಿನ ಟ್ವಿಟರ್) ಹೇಳಿದ್ದಾರೆ.
ನೆತನ್ಯಾಹು ಅವರು ಮಾತು ಮುಂದುವರೆಸುತ್ತಾ, “ಹಮಾಸ ನಮ್ಮ ಮೇಲೆ ದಾಳಿ ಮಾಡುವ ಮೂಲಕ ಐತಿಹಾಸಿಕ ತಪ್ಪು ಮಾಡಿದೆ, ಎಂದು ಈಗ ಅದಕ್ಕೆ ತಿಳಿಯಲಿದೆ. ಹಮಾಸನೊಂದಿಗೆ ಇಸ್ರೇಲ್‌ನ ಇತರ ಶತ್ರುಗಳು ಮುಂದಿನ ಅನೇಕ ಪೀಳಿಗೆ, ಅನೇಕ ದಶಕಗಳ ವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತೇವೆ. ಇಸ್ರೇಲ್ ಕೇವಲ ತನ್ನ ಸ್ವಂತ ಜನರಿಗಾಗಿ ಮಾತ್ರವಲ್ಲ, ಈ ಬರ್ಬರತೆಯ ವಿರುದ್ಧ ನಿಂತಿರುವ ಪ್ರತಿಯೊಂದು ದೇಶಕ್ಕಾಗಿ ಹೋರಾಡುತ್ತಿದೆ.’ ಎಂದು ಹೇಳಿದರು.
ನೇತನ್ಯಾಹು ಮಾತು ಮುಂದುವರಿಸಿ, ಹಮಾಸ ಅಮಾಯಕ ಇಸ್ರೇಲಿಗಳ ಮೇಲೆ ನಡೆಸುತ್ತಿರುವ ಕ್ರೂರ ದಾಳಿಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಕುಟುಂಬಗಳನ್ನು ಅವರ ಮನೆಗಳಲ್ಲಿ ನುಗ್ಗಿ ಕೊಲ್ಲುವುದು, ತುಂಬಿದ ಕಾರ್ಯಕ್ರಮದಲ್ಲಿ ನೂರಾರು ಯುವಕರ ಹತ್ಯೆ ಮಾಡುವುದು, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಅಪಹರಿಸುವುದು, `ಹೊಲೊಕಾಸ್ಟ’ ನಿಂದ (ಹಿಟ್ಲರನ ಯಹೂದಿ ಜನರನ್ನು ಕೊಲ್ಲುವ ಅಭಿಯಾನ) ಬದುಕುಳಿದವರ ಅಪಹರಣ ಮಾಡಿರುವುದು, ಈ ವಿಷಯಗಳು ಮನಸ್ಸಿಗೆ ನೋವುಂಟು ಮಾಡಿದೆ. ಹಮಾಸ್ ಭಯೋತ್ಪಾದಕರು ಮಕ್ಕಳನ್ನು ಕಟ್ಟಿ ಹಾಕಿದರು, ಸುಟ್ಟು ಕೊಂದರು. ಅವರು ಅನಾಗರಿಕರಾಗಿದ್ದಾರೆ. ಹಮಾಸ ಎಂದರೆ ಇಸ್ಲಾಮಿಕ ಸ್ಟೇಟ ಆಗಿದೆ ಎನ್ನುವ ಶಬ್ದಗಳಲ್ಲಿ ಬೆಂಜಮಿನ್ ನೆತನ್ಯಾಹು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಇಸ್ರೇಲ್ ಈ ಯುದ್ಧವನ್ನು ಗೆದ್ದಾಗ, ಇಡೀ ಜಗತ್ತು ಗೆಲ್ಲುತ್ತದೆ ! – ನೆತನ್ಯಾಹುನೆತನ್ಯಾಹು ಮಾತು ಮುಂದುವರಿಸಿ, ಯಾವ ರೀತಿ ಇಸ್ಲಾಮಿಕ್ ಸ್ಟೇಟ್ ಅನ್ನು ಸೋಲಿಸಲು ಜಗತ್ತಿನ ಶಕ್ತಿಗಳು ಒಂದುಗೂಡಿವೆಯೋ, ಜಗತ್ತಿನ ವಿವಿಧ ದೇಶಗಳು ಹಮಾಸ್ ಅನ್ನು ಸೋಲಿಸಲು ಇಸ್ರೇಲ್ ಅನ್ನು ಬೆಂಬಲಿಸಬೇಕು ಎಂದು ಹೇಳಿದರು. ಇಸ್ರೇಲ್‌ಗೆ ಬೆಂಬಲ ನೀಡಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಗತ್ತಿನಾದ್ಯಂತವಿರುವ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಇಸ್ರೇಲ್ ತನ್ನ ಸ್ವಂತ ಜನರಿಗಾಗಿ ಮಾತ್ರ ಹಮಾಸ್ ವಿರುದ್ಧ ಹೋರಾಡುತ್ತಿಲ್ಲ, ಹಿಂಸಾತ್ಮಕ ಮನೋಭಾವದ ವಿರುದ್ಧ ನಿಂತಿರುವ ಪ್ರತಿಯೊಂದು ದೇಶಕ್ಕಾಗಿ ಹೋರಾಡುತ್ತಿದೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ, ಮತ್ತು ಇಸ್ರೇಲ್ ಗೆದ್ದಾಗ, ಇಡೀ ಜಗತ್ತು ಗೆಲ್ಲುತ್ತದೆ ಎಂದು ಹೇಳಿದರು. |