ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯ ಹಿಂದೆ ಚೀನಾದ ಕೈವಾಡ ! – ಚೀನಾ ಮಹಿಳಾ ಪತ್ರಕರ್ತೆ

  • ಚೀನಾ ಮಹಿಳಾ ಪತ್ರಕರ್ತರ ದಾವೆ !

  • ಭಾರತ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಮತಭೇದ ನಿರ್ಮಾಣ ಮಾಡುವುದಕ್ಕಾಗಿ ಚೀನಾದಿಂದ ಪಿತೂರಿ !

ಪತ್ರಕರ್ತೆ ಜೆನ್ನಿಫರ್ ಜೆಂಗ್

ನ್ಯೂಯಾರ್ಕ್ (ಅಮೇರಿಕಾ) – ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಚೀನಾದ ಕೈವಾಡವಿದೆ, ಎಂದು ಚೀನಾದ ಓರ್ವ ಮಹಿಳಾ ಪತ್ರಕರ್ತೆ ದಾವೆ ಮಾಡಿದ್ದಾರೆ. ಜೆನಿಫರ್ ಝೆಂಗ ಎಂದು ಅವರ ಹೆಸರಾಗಿದ್ದು ಈಗ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಈ ಹತ್ಯೆಯಲ್ಲಿ ಭಾರತದ ಗೂಡಾಚಾರ ಇಲಾಖೆಯ ಕೈವಾಡ ಇದೆ ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈ ಹಿಂದೆ ಆರೋಪಿಸಿರುವುದರಿಂದ ಎರಡು ದೇಶದ ಸಂಬಂಧದಲ್ಲಿ ಒತ್ತಡ ನಿರ್ಮಾಣವಾಗಿದೆ. ಭಾರತದಿಂದ ಟ್ರುಡೋ ಇವರ ಆರೋಪ ತಳ್ಳಿಹಾಕಿದೆ.

ಜೆನಿಫರ್ ಇವರು ಅವರ ‘ಎಕ್ಸ್’ ಖಾತೆಯಲ್ಲಿ ಪ್ರಸಾರ ಮಾಡಿರುವ ವಿಡಿಯೋದಲ್ಲಿ, ”ಚೀನಾದ ಕಮ್ಯುನಿಸ್ಟ್ ಪಾರ್ಟಿ ಎಂದರೆ ಸಿಸಿಪಿ ಯ ದಲ್ಲಾಳಿಗಳು ನಿಜ್ಜರ ಹತ್ಯೆಯಲ್ಲಿ ಸಹಭಾಗಿ ಆಗಿದ್ದಾರೆ. ಭಾರತ ಮತ್ತು ಪಶ್ಚಿಮಾತ್ಯ ದೇಶಗಳಲ್ಲಿ ಮತಭೇದ ನಿರ್ಮಾಣ ಮಾಡುವುದಕ್ಕಾಗಿ ಚೀನಾ ಈ ಹತ್ಯೆಯ ಷಡ್ಯಂತ್ರ ರೂಪಿಸಿತ್ತು. ಇದಕ್ಕಾಗಿ ‘ಸಿಸಿಪಿ ಮಿನಿಸ್ಟರಿ ಆಫ್ ಸ್ಟೇಟ್ ಸೆಕ್ಯೂರಿಟಿ’ ಇಂದ ಅಮೆರಿಕದಲ್ಲಿನ ಸೀಯೆಟಲ್ ಇಲ್ಲಿ ಓರ್ವ ಅಧಿಕಾರಿ ಕಳುಹಿಸಿದ್ದರು. ಅಲ್ಲಿ ಒಂದು ರಹಸ್ಯ ಸಭೆ ನಡೆಯಿತು ಮತ್ತು ಅದರಲ್ಲಿ ನಿಜ್ಜರ್ ಹತ್ಯೆಯ ಷಡ್ಯಂತ್ರ ರೂಪಿಸಲಾಯಿತು. ಇದಕ್ಕಾಗಿ ಸಿಸಿಪಿಯ ದಲ್ಲಾಳಿ ಭಾರತೀಯರು ಮಾತನಾಡುವಂತೆ ಇಂಗ್ಲಿಷ್ ಭಾಷೆ ಕೂಡ ಕಲಿತಿದ್ದನು. ಅದರ ನಂತರ ಜೂನ್ ೧೮ ರಂದು ಸಿಸಿಪಿಯ ದಲ್ಲಾಳಿಯಿಂದ ಗುಂಡು ಹಾರಿಸಿ ನಿಜ್ಜರನ ಹತ್ಯೆ ಮಾಡಲಾಯಿತು. ಅದರ ನಂತರ ಹತ್ಯೆಯ ಸಾಕ್ಷಿ ನಾಶಗೊಳಿಸಿ ಅವನು ಪರಾರಿಯಾದನು. ಅವನು ತನ್ನ ಬಟ್ಟೆ ಮತ್ತು ಶಸ್ತ್ರಗಳನ್ನು ಕೂಡ ಸುಟ್ಟು ನಾಶ ಮಾಡಿದ್ದಾನೆ ಮತ್ತು ಮರುದಿನವೇ ಕೆನಡಾ ತೊರೆದಿದ್ದಾನೆ.” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಚೀನಾದ ಭಾರತ ಕುರಿತು ತೀವ್ರ ದ್ವೇಷ ಕಾಣುತ್ತದೆ ! ಜಗತ್ತಿನೆದರೂ ಚೀನಾದ ಮುಖವಾಡ ಕಳಚಿ ಬಿದ್ದಿರುವುದರಿಂದ ಅದು ಜಗತ್ತಿನಲ್ಲಿ ಏಕಾಂಗಿ ಆಗಿದೆ, ಈ ದೃಷ್ಟಿಯಿಂದ ಸರಕಾರ ದೃಢವಾದ ಪ್ರಯತ್ನ ಮಾಡಬೇಕು !