ಪರಾತ್ಪರ ಗುರು ಡಾ. ಆಠವಲೆಯವರ ಸಹಜ ಕೃತಿಗಳಿಂದಲೂ ವ್ಯಕ್ತವಾಗುವ ಸಾಧಕರ ಮೇಲಿನ ಪ್ರೀತಿ !

‘ಪರಾತ್ಪರ ಗುರು ಡಾಕ್ಟರರ ಕೃಪಾಛತ್ರವು ಬಡವ-ಶ್ರೀಮಂತ, ಶಿಕ್ಷಿತ-ಅಶಿಕ್ಷಿತ, ಚಿಕ್ಕ-ದೊಡ್ಡ ಎಂಬ ಭೇದಭಾವವನ್ನು ಮಾಡದೇ ಎಲ್ಲ ಸಾಧಕರ ಮೇಲಿದೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಪ್ರತಿಯೊಬ್ಬರಿಗೂ ಅವರು ಅವಶ್ಯಕತೆಗನುಸಾರ ಸಹಾಯವನ್ನು ಮಾಡುತ್ತಾರೆ. ಅವರ ಆಧ್ಯಾತ್ಮಿಕ ತೊಂದರೆಗಳಿಗೆ ನಾಮಜಪಾದಿ ಉಪಾಯಗಳನ್ನು ಹೇಳುತ್ತಾರೆ

ಮಾತೃವಾತ್ಸಲ್ಯದಿಂದ ಸಾಧಕರ ಕಾಳಜಿಯನ್ನು ವಹಿಸುವ ಮತ್ತು ಪ್ರತಿಯೊಂದು ಕ್ಷಣ ಸಾಧಕರದ್ದೇ ವಿಚಾರ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಕಳೆದ ಕೆಲವು ವರ್ಷಗಳಿಂದ ಅವರ ಪ್ರಾಣಶಕ್ತಿಯು ಅತ್ಯಲ್ಪವಾಗಿದ್ದರೂ ಅವರ ಕೋಣೆಯಲ್ಲಿ ಸೇವೆಗೆಂದು ಹೋಗುವ ಇತರ ಸಾಧಕರಿಗೂ ಅವರು ಈಗಲೂ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಯಾವುದೇ ಪ್ರತ್ಯೇಕ ಅಸ್ತಿತ್ವವನ್ನು ತೋರಿಸದೇ ಸಾಧಕರಿಗೆ ಎಲ್ಲ ರೀತಿಯಿಂದ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರ ಸಹವಾಸದಲ್ಲಿನ ಈ ಪ್ರಸಂಗಗಳು ನಿಜಕ್ಕೂ  ನಿಮ್ಮ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುವವು !

ಸ್ವಸಂಘಟನೆಯ ಪರಿಧಿಯನ್ನು ದಾಟಿ ಹಿಂದುತ್ವನಿಷ್ಠರಿಗೆ ಸಹಾಯ ಮಾಡುವ ಮತ್ತು ಹಿಂದೂಸಂಘಟನೆಗಾಗಿ ಪ್ರಯತ್ನಿಸುವ ಪರಾತ್ಪರ ಗುರು ಡಾ. ಆಠವಲೆ !

ಕಾಲಾಂತರದಲ್ಲಿ ಹಿಂದುತ್ವದ ಕಾರ್ಯವು ಹೆಚ್ಚಾಗುತ್ತಾ ಹೋದಂತೆ ಹಿಂದುತ್ವನಿಷ್ಠರೂ ಪರಾತ್ಪರ ಗುರು ಡಾಕ್ಟರರತ್ತ ಆಕರ್ಷಿಸಲ್ಪಟ್ಟರು ಮತ್ತು ಇಂದು ಎಷ್ಟೋ ಜನ ಹಿಂದುತ್ವನಿಷ್ಠರು ಪರಾತ್ಪರ ಗುರು ಡಾಕ್ಟರರನ್ನು ‘ಗುರುಸ್ಥಾನದಲ್ಲಿ ನೋಡುತ್ತಿದ್ದಾರೆ. ಇಂದು ನಮಗೆ ‘ಪರಾತ್ಪರ ಗುರು ಡಾಕ್ಟರರು ‘ಸನಾತನ ಧರ್ಮದ ದೇವರೇ ಆಗಿದ್ದಾರೆ ಎಂಬ ಅನುಭವವು ಸಹ ತುಂಬಾ ಸಲ ಬರುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ದೇಹ ಹಾಗೂ ಅವರು ಉಪಯೋಗಿಸುವ ವಸ್ತುಗಳ ಮೇಲೆ ತಿಳಿಗುಲಾಬಿ ಬಣ್ಣ ಬರುವುದು

ಪ.ಪೂ. ಡಾಕ್ಟರರ ಅಂಗೈ, ಅಂಗಾಲು, ನಾಲಿಗೆ ಮತ್ತು ತುಟಿಗಳು ಗುಲಾಬಿಯಾಗುವುದು, ಅಂದರೆ ಅದು ಅವರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಚಮತ್ಕಾರವಾಗಿರುವುದು