‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.

ಭಾರತದ ಪ್ರಪ್ರಥಮ ಸ್ವದೇಶಿ ವಿಮಾನವಾಹಕ ಯುದ್ಧನೌಕೆಯು ಜುಲೈ ೨೦೨೧ ರಿಂದ ಕಾರ್ಯನಿರ್ವಹಿಸಲಿದೆ ! – ರಕ್ಷಣಾಸಚಿವ ರಾಜನಾಥ ಸಿಂಗ್

ಮುಂದಿನ ವರ್ಷ ಭಾರತವು ಸ್ವತಂತ್ರವಾಗಿ ೭೫ ವರ್ಷ ಪೂರ್ಣಗೊಳ್ಳುತ್ತಿರುವಾಗ ಈ ಯುದ್ಧನೌಕೆ ನಿರ್ಮಾಣವಾಗುವುದು ಮಹತ್ವದ ಅಂಶವಾಗಿದೆ. ಈ ಯುದ್ಧನೌಕೆಯ ಮಾರಕ ಶಕ್ತಿಯು ಅಗಾಧವಾಗಿದ್ದು ಅದು ವೈವಿಧ್ಯಮಯವಾಗಿದೆ. ಭಾರತದ ರಕ್ಷಣೆಯ ಕ್ಷಮತೆಯು ಇದರಿಂದ ಹೆಚ್ಚಾಗಲಿದೆ.