‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಸ್ಪೇನ್‌ನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಸೂಕ್ಷ್ಮದ ಸ್ಪಂದನಗಳು’ ಈ ವಿಷಯದ ಕುರಿತು ಸಂಶೋಧನಾ ಪ್ರಬಂಧದ ಮಂಡನೆ !
‘ಪಿಪ್’ ಮತ್ತು ‘ಯು.ಎ.ಎಸ್.’ ಈ ಉಪಕರಣಗಳನ್ನು ಬಳಸಿ ಈ ಪ್ರಯೋಗವನ್ನು ಅಧ್ಯಾತ್ಮದ ಕುರಿತಾದ ೩ ಗ್ರಂಥಗಳ ಮೇಲೆ ಮಾಡಲಾಯಿತು. ಇವುಗಳ ಪೈಕಿ ಒಂದು ಗ್ರಂಥವನ್ನು ಜಗತ್ತಿನ ಜನಪ್ರಿಯ ಅಧ್ಯಾತ್ಮದ ಕುರಿತಾದ ಮಾರ್ಗದರ್ಶಕರು ಬರೆದಿದ್ದಾರೆ. ಈ ಗ್ರಂಥದ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗಿದ್ದು ಅದು ‘ನ್ಯೂಯಾರ್ಕ ಬೆಸ್ಟ್ ಸೆಲರ್’ ಪಟ್ಟಿಯಲ್ಲಿಯೂ ಸಮಾವೇಶಗೊಂಡಿದೆ.