‘ಸಮಾಜದಲ್ಲಿನ ಕೆಲವು ಗುರುಗಳ ಇಬ್ಬರು ಅಥವಾ ಮೂವರು ಶಿಷ್ಯರು ಸಂತರಾಗುತ್ತಾರೆ; ಆದರೆ ಸನಾತನದಲ್ಲಿ ೧೧೫ ಜನ ಸಂತರು ಹೇಗೆ ?’ ಈ ಪ್ರಶ್ನೆಯ ಉತ್ತರ

ಸನಾತನದಲ್ಲಿ ವ್ಯಾವಹಾರಿಕ ಅಡಚಣೆಗಳಿಗಾಗಿ ಎಂದಿಗೂ ಮಾರ್ಗದರ್ಶನ ಮಾಡುವುದಿಲ್ಲ. ಎಲ್ಲರಿಗೂ ಮೊದಲಿನಿಂದಲೇ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಶಿಕ್ಷಣ ನೀಡಲಾಗುತ್ತದೆ. ಅದರಿಂದ ಪ್ರತಿಯೊಬ್ಬ ಸಾಧಕನು ಆಧ್ಯಾತ್ಮಿಕ ಸ್ತರದಲ್ಲಿ ಕೃತಿಶೀಲನಾಗುತ್ತಾನೆ.

ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ೨೦೨೨

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟ ಮುಕ್ತ ಮಾಡುವವರೇ ಗುರುಗಳು.

ಗುರು-ಶಿಷ್ಯ ಸಂಬಂಧ

‘ಮನಸ್ಸನ್ನು ರೋಗಗಳ ಆಚೆಗೆ ಕೊಂಡೊಯ್ಯಲು, ಬುದ್ಧಿಯನ್ನು ನಿಯಂತ್ರಣದಲ್ಲಿಡಲು, ಚಿತ್ತಕ್ಕೆ ಚೈತನ್ಯದ ಸಮೃದ್ಧಿಯನ್ನು ಪ್ರಾಪ್ತ ಮಾಡಿಕೊಡಲು ಮತ್ತು ಅಹಂಅನ್ನು ಲಯಗೊಳಿಸಿ ಅದನ್ನು ದೇವಾಧೀನಗೊಳಿಸಲು ಸಹಾಯವಾಗುವ ಶ್ರೇಷ್ಠತೆಯೆಂದರೆ ಗುರುತತ್ತ್ವ’.