ದೇವಾಲಯಗಳ ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ ! – ಮದ್ರಾಸ್ ಉಚ್ಚನ್ಯಾಯಾಲಯದ ಐತಿಹಾಸಿಕ ಆದೇಶ

ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.

ಕರ್ನಾಟಕದ ಹಿಂದೂ ದೇವಾಲಯಗಳಿಗೆಂದು ಮೀಸಲಿಟ್ಟ ಹಣವನ್ನು ಇತರ ಧಾರ್ಮಿಕ ಸಂಸ್ಥೆಗಳಿಗೆ ಖರ್ಚು ಮಾಡಲಾಗುವುದಿಲ್ಲ !

ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂ ದೇವಾಲಯಗಳಿಗೆ ಮೀಸಲಿಟ್ಟ ಹಣವನ್ನು ಪುರೋಹಿತರು ಮತ್ತು ಇತರ (ಮುಸ್ಲಿಂ ಇತ್ಯಾದಿ) ಧಾರ್ಮಿಕ ಸಂಸ್ಥೆಗಳ ನೌಕರರಿಗೆ ನೀಡಲಾಗುತ್ತದೆ. ಇದರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ‘ಇಂತಹ ಎಲ್ಲಾ ಆರ್ಥಿಕ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.