ಉಂಗುರದ ಉಪಯೋಗಗಳು
೧. ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.
೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರು ಈಶ್ವರ ಈ ಅಂಕಿತ ನಾಮದಿಂದ ಲೇಖನ ಬರೆಯುತ್ತಾರೆ, ೧೨.೧೧.೨೦೦೭, ರಾತ್ರಿ ೮.೧೫)
ಕಾಲುಂಗುರದ ಮಹತ್ವ
೧. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ.
೨. ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ.
ಮಂಗಳಸೂತ್ರ
೨ ಬಟ್ಟಲುಗಳ ರಚನೆಯಿಂದ ಮಂಗಳ ಸೂತ್ರದ ಹಿಂದಿನ ಟೊಳ್ಳಿನಲ್ಲಿ ನಿರ್ಮಾಣವಾಗುವ ಆಕರ್ಷಣಾ ಲಹರಿಯಿಂದ ಇತರ ಯಾವುದೇ ಅಲಂಕಾರದ ತುಲನೆಯಲ್ಲಿ ಮಂಗಳ ಸೂತ್ರದಲ್ಲಿ ಈಶ್ವರೀತತ್ತ್ವವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ.
ಬಳೆಗಳ (ಕಂಕಣಗಳ) ಮಹತ್ವ
೧. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಪೂಜೆಯನ್ನು ಅಲಂಕಾರಸಹಿತ ಮಾಡುವುದರ ಪ್ರತೀಕವಾಗಿದೆ.
೨. ಬಳೆಗಳಲ್ಲಿ ಕಾರ್ಯನಿರತ ದೇವಿತತ್ತ್ವದ ಶಕ್ತಿಲಹರಿಗಳನ್ನು ಮಣಿಕಟ್ಟಿನಲ್ಲಿ ಆಕರ್ಷಿಸಿ, ಸಂಪೂರ್ಣ ಕೈಯಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ.
ಕಾಲ್ಗೆಜ್ಜೆಗಳ ಮಹತ್ವ ಮತ್ತು ಲಾಭ
೧. ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವು ತಯಾರಾಗುತ್ತದೆ : ‘ಕಾಲ್ಗೆಜ್ಜೆಯನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳನ್ನು ವಿಭಜಿಸಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ನಾದರೂಪೀಯಾದ ಈ ಕ್ರಿಯಾಲಹರಿಗಳು ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಿಸುತ್ತವೆ, ಹಾಗೆಯೇ ಈ ನಾದಲಹರಿಗಳಿಂದಾಗಿ ಸ್ತ್ರೀಯಲ್ಲಿನ ಶಕ್ತಿರೂಪೀ ರಜೋಗುಣಕ್ಕೆ ಗತಿ ಸಿಗುತ್ತದೆ ಮತ್ತು ಅವಳೇ ಒಂದು ಸ್ವಯಂಸಿದ್ಧಸ್ವರೂಪವಾಗುತ್ತಾಳೆ.
೨. ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.
(ಆಭರಣಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥಮಾಲಿಕೆ ಸಾತ್ತ್ವಿಕ ಆಭರಣ)