ಪಾಕಿಸ್ತಾನದಲ್ಲಿಅಫ್ಘಾನಿಸ್ತಾನದ ರಾಯಭಾರಿಯವರ ಮಗಳ ಅಪಹರಣ !

ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

‘ಭಾರತ ನಿರ್ಮಿಸಿದ ಕಟ್ಟಡಗಳನ್ನು ಕೆಡವಿಹಾಕಿ !’ – ಪಾಕಿಸ್ತಾನದ ಗುಪ್ತಚರ ಸಂಸ್ಥೆಯಿಂದ ತಾಲಿಬಾನ್‍ಗೆ ಸೂಚನೆ

೨೦೦೧ ರಲ್ಲಿ ಅಮೆರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಉರುಳಿಸಿದ ನಂತರ ಕಳೆದ ಎರಡು ದಶಕಗಳಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಭಾರತವು ಅಫ್ಘಾನಿಸ್ತಾನದಲ್ಲಿ ೨೧೮ ಕಿ.ಮೀ ಉದ್ದದ ಡೆಲರಾಮನಿಂದ ಜರಾಂಜ್ ಸಲಮಾ ಅಣೆಕಟ್ಟುವರೆಗೆ ರಸ್ತೆಯನ್ನು ನಿರ್ಮಿಸಿದೆ.