‘ಯಾವ ಮನೆಯಲ್ಲಿ ‘ಸನಾತನ ಪ್ರಭಾತ ಇರುವುದೋ

ಆ ಮನೆಯಲ್ಲಿ ಯುವಕ-ಯುವತಿಯರು ಪಾಶ್ಚಾತ್ಯ ವಿಕೃತಿಯೆಡೆಗೆ ಹೊರಳುವುದಿಲ್ಲ ಕುಟುಂಬದಲ್ಲಿ ಯಾರ ಮತಾಂತರವೂ ಆಗುವುದಿಲ್ಲ ಅಥವಾ ಹಿಂದೂ ಹೆಣ್ಣುಮಗಳು ‘ಲವ್ ಜಿಹಾದ್ಗೆ ಬಲಿಯಾಗುವುದಿಲ್ಲ.

ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ಶಿಕ್ಷಣ ಪಡೆಯದಿದ್ದರೂ ಸನಾತನ ಪ್ರಭಾತದ ಸುದ್ದಿಗಾರರ ಮತ್ತು ಸಂಪಾದಕರ ಲೇಖನದಿಂದ ರಾಷ್ಟ್ರ ಮತ್ತು ಧರ್ಮಗಳ ಪರಿಣಾಮಕಾರಿ ಜಾಗೃತಿಯಾಗುವುದು !

ಈ ಪ್ರಸಾರ ಮಾಧ್ಯಮಕ್ಕಾಗಿ ಕೆಲಸ ಮಾಡುವ ಹೆಚ್ಚಿನ ಸುದ್ದಿಗಾರರು ಮತ್ತು ಸಂಪಾದಕರು ಪತ್ರಿಕೋದ್ಯಮದಲ್ಲಿ ವಿಶೇಷ ಶಿಕ್ಷಣ ಪಡೆದಿರುತ್ತಾರೆ; ಆದರೂ ಈ ಪತ್ರಕರ್ತರಿಂದ ಇಂದಿನವರೆಗೆ ಜನರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಪ್ರೀತಿ ನಿರ್ಮಾಣ ಮಾಡಲು ಆಗಲಿಲ್ಲ ಅಥವಾ ಸಮಾಜವನ್ನು ಸಾಧನೆಯ ಕಡೆಗೆ ಹೊರಳಿಸಲು ಆಗಲಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ  ಪ್ರಭಾತದ ಅಡಿಪಾಯವನ್ನು ಹಾಕಿದ್ದರಿಂದ ಅದರ ಕಾರ್ಯವು ಚಿರಂತನ ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಿಸಿದೆ

‘ಸನಾತನ ಪ್ರಭಾತ ಕಾರ್ಯದ ಉದ್ದೇಶವು ವ್ಯವಸಾಯಿಕ, ಅಂದರೆ ಹಣಗಳಿಸಲು ಅಲ್ಲ, ಅದರ ಕಾರ್ಯದ ಉದ್ದೇಶವು ಒಂದು ಉದಾತ್ತ ಧ್ಯೇಯ ಅಂದರೆ ಈಶ್ವರೀ ರಾಜ್ಯದ ಸ್ಥಾಪನೆಗೆ ಸಂಬಂಧಿಸಿದೆ. ಸನಾತನ ಪ್ರಭಾತದ ಅಡಿಪಾಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ್ದರಿಂದ ಅದರ ಕಾರ್ಯವು ಚಿರಂತ, ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಪಟ್ಟಿದೆ.