ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಭಕ್ತಿ

ಭಗವಾನ ಶ್ರೀಕೃಷ್ಣನ ಅನೇಕ ಸಾವಿರ ಗೋಪಿಯರಲ್ಲಿ ೧೬ ಸಾವಿರ ಗೋಪಿಯರು ಪ್ರಮುಖರು. ಈ ೧೬ ಸಾವಿರದಲ್ಲಿ ೧೦೮ ಜನ ವಿಶೇಷವಾಗಿ ಪ್ರಖ್ಯಾತರಾಗಿದ್ದಾರೆ. ಈ ೧೦೮ ರಲ್ಲಿ ೮ ಜನ ಪ್ರಧಾನರಾಗಿದ್ದಾರೆ ಹಾಗೂ ಈ ೮ ಪ್ರಧಾನ ಗೋಪಿಯರಲ್ಲಿ ರಾಧಾರಾಣಿ ಮತ್ತು ಚಂದ್ರಾವಲಿ ಪ್ರಮುಖರಾಗಿದ್ದಾರೆ ಹಾಗೂ ಈ ಇಬ್ಬರು ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠಳಾಗಿದ್ದಾಳೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಯೋಧ್ಯೆಯ ಪ್ರವಾಸದ ಸಂದರ್ಭದಲ್ಲಿ ಘಟಿಸಿದ ವೈಶಿಷ್ಟ್ಯಪೂರ್ಣ ಘಟನಾವಳಿಗಳು ಮತ್ತು ದೊರಕಿದ ಈಶ್ವರೀ ಸಂಕೇತ !

ಶರಯೂ ನದಿಯ ಆರತಿಗಾಗಿ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನದಿ ದಂಡೆಗೆ ಹೋದಾಗ ಅವರ ಹತ್ತಿರ ಒಂದು ನಾಯಿಯು ಬಂದು ನಿಂತಿತು. ಆಗ ಆ ನಾಯಿಯು ಇಷ್ಟೊಂದು ಹತ್ತಿರ ಬಂದು ನಿಂತಿರುವುದನ್ನು ನೋಡಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯವೆನಿಸಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಈ ನಾಯಿಯು ದತ್ತಗುರುಗಳ ಶ್ವಾನವಾಗಿರುವುದು ಅರಿವಾಯಿತು. ‘ಗುರುತತ್ತ್ವವು ಸತತವಾಗಿ ನಮ್ಮೊಂದಿಗಿರುವ ಬಗ್ಗೆ ಈ ಅನುಭೂತಿಯಾಗಿದೆ’, ಎಂದು ಅವರು ಹೇಳಿದರು.

ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟವು ಶೇ. ೬೦ ರಷ್ಟು ಆಗುತ್ತಿಲ್ಲ, ಎಂಬ ವಿಚಾರ ಮಾಡಿ ನಿರಾಶರಾಗದಿರಿ ‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು, ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿರಿ !

. ‘ನಾನು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?, ಎಂಬುದರ ಬಗ್ಗೆ ತತ್ತ್ವನಿಷ್ಠನಾಗಿ ಅಧ್ಯಯನ ಮಾಡಬೇಕು. ಸಾಧನೆಯಲ್ಲಿ ತಮ್ಮ ಸಾಧಕ ಪರಿವಾರದವರಿಂದ ಹಾಗೂ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವವರಿಗೆ ಹಾಗೂ ಜವಾಬ್ದಾರ ಸಾಧಕರಿಗೆ ‘ನನ್ನ ಸಾಧನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ?, ಎಂಬುದನ್ನು ವಿಚಾರಿಸಿರಿ.

ಸಾಧಕರೇ, ‘ಭಗವಂತನು ತೆಗೆದುಕೊಳ್ಳುವ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗಿದೆ’, ಎಂಬುದನ್ನು ಗಮನದಲ್ಲಿಡಿ !

ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟಕ್ಕೆ ತಲುಪುವುದು ನಮ್ಮ ಕೈಯಲ್ಲಿ ಇಲ್ಲ; ಆದರೆ ಪ್ರತಿದಿನ ಯಾವುದೇ ಅಪೇಕ್ಷೆಯನ್ನಿಡದೇ ಮತ್ತು ಸತತವಾಗಿ ಸಾಧನೆಯ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ. ಆದುದರಿಂದ ತಳಮಳದಿಂದ ಪ್ರಯತ್ನ ಮಾಡಿದರೆ ಗುರುಕೃಪೆಯಿಂದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಸಾಧ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ !’

ಹಾಗಾದರೆ ಇದರ ಅವಶ್ಯಕತೆ ಏನು ?

ನಮ್ಮ ಮನಸ್ಸಿನಲ್ಲಿ ಅಭಿಮಾನ (ಅಹಂ)ವಿದ್ದರೆ ಮತ್ತು ತಮಗೆ ಕೋಪ ಬಂದಾಗ ಇತರರನ್ನು ನೋಯಿಸುವ ವಿಚಾರ ಇದ್ದರೆ, ತಮ್ಮ ಸರ್ವನಾಶಕ್ಕೆ ಬೇರೆ ಶತ್ರುಗಳ ಅಗತ್ಯವಿಲ್ಲ. ಮನಸ್ಸಿನಲ್ಲಿರುವ ಚಿಂತೆಯು ನಿಮ್ಮನ್ನು ಸುಡುತ್ತಿದ್ದರೆ, ನಿಮ್ಮನ್ನು ಸುಡಲು ಕಟ್ಟಿಗೆಯನ್ನು ಹುಡುಕುವ ಮತ್ತು ಚಿತೆಯ ಮೇಲೆ ಮಲಗುವ ಅಗತ್ಯವಿಲ್ಲ

ಬೆಳಗಾವಿಯ ಸನಾತನದ ಸಂತರಾದ ಪೂ. (ಡಾ.) ನೀಲಕಂಠ ಅಮೃತ ದೀಕ್ಷಿತ (ವಯಸ್ಸು ೯೨) ಇವರ ದೇಹತ್ಯಾಗ !

‘ಪೂ. ದೀಕ್ಷಿತ ಅಜ್ಜನವರು ಜುಲೈ ೨೭ ರಂದು ರಾತ್ರಿ ೯.೩೦ ಕ್ಕೆ ದೇಹತ್ಯಾಗ ಮಾಡಿದ ನಂತರ ಅವರ ಮುಖವು ಅತ್ಯಂತ ಶಾಂತ ಹಾಗೂ ತೇಜಸ್ವಿಯಾಗಿ ಕಾಣಿಸುತ್ತಿತ್ತು, ಅದೇರೀತಿ ವಾತಾವರಣದಲ್ಲಿ ಚೈತನ್ಯವು ಅರಿವಾಗುತ್ತಿತ್ತು. ಕುಟುಂಬದವರೆಲ್ಲರ ಊಟ ಆದಮೇಲೆ ಪೂ. ಅಜ್ಜ ದೇಹತ್ಯಾಗ ಮಾಡಿದರು. ಇದರಿಂದ ‘ಪೂ. ಅಜ್ಜನವರು ದೇಹತ್ಯಾಗ ಮಾಡುವಾಗಲೂ ಇತರರ ವಿಚಾರ ಮಾಡಿದರು, ಎಂದು ಅರಿವಾಯಿತು.

ಚಾತುರ್ಮಾಸ

ಚಾತುರ್ಮಾಸದಲ್ಲಿ ಹವಿಷ್ಯಾನ್ನವನ್ನು ಸೇವಿಸಬೇಕೆಂದು ಹೇಳಲಾಗಿದೆ. ಅಕ್ಕಿ, ಹೆಸರು, ಜವೆ, ಎಳ್ಳು, ಬಟಾಣಿ, ಗೋಧಿ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು, ತುಪ್ಪ, ಹಲಸು, ಮಾವು, ತೆಂಗಿನಕಾಯಿ, ಬಾಳೆಹಣ್ಣು ಮುಂತಾದ ಪದಾರ್ಥಗಳನ್ನು ಹವಿಷ್ಯಾನ್ನಗಳೆಂದು ತಿಳಿಯಬೇಕು. 

ನ್ಯೂರೋಸೈನ್ಸ್‌ಗನುಸಾರ ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು !

ಡಾ. ಹಾರ್ಟ್‌ಝೇಲ್ ಇವರು ಸಂಸ್ಕೃತ ಭಾಷೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸ್ಪೇನ್ ದೇಶದ ಬಾಸ್ಕ್‌ನಲ್ಲಿರುವ ‘ಸೆಂಟರ್ ಆನ್ ಕಾಗ್ನಿಶನ್, ಬ್ರೇನ್ ಎಂಡ್ ಲ್ಯಾಂಗ್ವೇಜ್ ಈ ವಿಭಾಗದ ಪದವ್ಯೋತ್ತರ ಸಂಶೋಧಕರಾಗಿದ್ದಾರೆ. ಅವರು ಸಂಸ್ಕೃತ ಭಾಷೆಯ ಅಧ್ಯಯನ ಮತ್ತು ಭಾಷಾಂತರ ಮಾಡುವುದರಲ್ಲಿ ಬಹಳಷ್ಟು ವರ್ಷಗಳನ್ನು ವ್ಯಯಿಸಿದ್ದು, ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳಿಂದ ಅವರು ಆಶ್ಚರ್ಯಚಕಿತರಾಗಿದ್ದಾರೆ.

ಸದ್ಗುರು ನಂದಕುಮಾರ ಜಾಧವ ಕಾಕಾರವರ ಅಮೂಲ್ಯ ಮಾರ್ಗದರ್ಶನ

‘ನನ್ನಲ್ಲಿ ಏನಾದರೂ ಒಳ್ಳೆಯದಿದೆ; ಆದುದರಿಂದ ನನಗೆ ಈ ಸೇವೆಯನ್ನು ನೀಡಿದ್ದಾರೆ’, ಎನ್ನುವ ಬದಲು ‘ನನ್ನಲ್ಲಿ ಏನೋ ಕೊರತೆಯಿದೆ ಆದುದರಿಂದ ನನಗೆ ಕಲಿಯಲು ಈ ಸೇವೆಯನ್ನು ನೀಡಿದ್ದಾರೆ, ಈ ಸೇವೆಯ ಮಾಧ್ಯಮದಿಂದ ಕಲಿತು ನನಗೆ ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡುವುದಿದೆ’, ಎಂಬುದನ್ನು ಯಾವಾಗಲೂ ಮನಸ್ಸಿಗೆ ಹೇಳುತ್ತಿರಬೇಕು.

‘ಧರ್ಮರಾಜ್ಯದ ಸ್ಥಾಪನೆಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಮುಂದಾಳತ್ವ ವಹಿಸುವರು, ಎಂಬ ಗುರುದೇವರ ವಿಚಾರವನ್ನು ದೃಢಪಡಿಸುವ ೨೦೧೭ ರಿಂದ ೨೦೨೦ ರ ತನಕದಲ್ಲಿ ಆಧ್ಯಾತ್ಮಿಕ ಪ್ರಗತಿಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಮೇಲುಗೈ !

‘ಪುರುಷರು ಕೈಗಳಲ್ಲಿ (ಅಹಂನ) ಬಳೆಗಳನ್ನು ಧರಿಸಿರುವುದರಿಂದ ಸ್ತ್ರೀಯರೇ ಧರ್ಮಕ್ರಾಂತಿಯನ್ನು ಮಾಡುವರು, ಎಂದು ನಾನು ೧೯೯೪ ನೇ ಇಸವಿಯಲ್ಲಿ ಹೇಳಿದ್ದೆನು. ಕಲಿಯುಗದಲ್ಲಿ ಹಿಂದೂ ರಾಷ್ಟ್ರದ, ಅಂದರೆ ರಾಮರಾಜ್ಯದ, ಧರ್ಮರಾಜ್ಯದ ಸ್ಥಾಪನೆಗಾಗಿ ಈಗ ಸ್ತ್ರೀಯರೇ ಮುಂದಾಳತ್ವವನ್ನು ವಹಿಸುತ್ತಿದ್ದಾರೆ. ಇದರ ಪ್ರತ್ಯಕ್ಷ ಅನುಭವವು ಬರುತ್ತಿದೆ