ಪಿತೃಪಕ್ಷದ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಕಡೆಗೆ ಅನೇಕ ಕಾಗೆಗಳು ಆಕರ್ಷಿತವಾಗುವುದು, ಇದು ಆಶ್ರಮವು ತೀರ್ಥಕ್ಷೇತ್ರ ಸಮಾನವಾಗಿರುವುದರಿಂದ ಇಲ್ಲಿಗೆ ಬಂದು ಪಿತೃಗಳು ತೃಪ್ತರಾದುದರ ದ್ಯೋತಕ !

ಶ್ರಾದ್ಧದಲ್ಲಿ ಪಿಂಡದಾನದ ಮಾಧ್ಯಮದಿಂದ ಪಿತೃಗಳನ್ನು ಆಹ್ವಾನಿಸುತ್ತಾರೆ. ಪಿತೃಗಳ ಅತೃಪ್ತ ಆಸೆಗಳನ್ನು ಪಿಂಡದ ಮೂಲಕ ಪೂರೈಸಲಾಗುತ್ತದೆ. ಪಿತೃಗಳ ಲಿಂಗದೇಹವು ಯಾವ ಸಮಯದಲ್ಲಿ ಪಿಂಡದ ಕಡೆಗೆ ಆಕರ್ಷಿತವಾಗುತ್ತದೆಯೋ ಆಗ ಅದು ರಜ-ತಮಾತ್ಮಕ ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಲಹರಿಗಳ ಕಡೆಗೆ ಕಾಗೆಯು ಆಕರ್ಷಿತವಾಗುತ್ತದೆ.

ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘೨೩.೯.೨೦೧೪ ರಂದು ಎಸ್.ಎಸ್.ಆರ್.ಎಫ್.ನ ಆಸ್ಟ್ರೇಲಿಯಾದ ಸಾಧಕರಾದ ಶ್ರೀ. ಶಾನ್ ಕ್ಲಾರ್ಕ್ ಇವರು ತಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು, ಶ್ರಾದ್ಧವಿಧಿಯನ್ನು ಮಾಡಿದ್ದರು. ಶ್ರೀ. ಶಾನ್ ಇವರು ಮಾಡಿದ ಈ ಶ್ರಾದ್ಧದಲ್ಲಿ ಭೋಜನವನ್ನು ಬಡಿಸುವ ಮೊದಲು ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅಂದರೆ ತೀರಾ ಒಂದು-ಎರಡು ಲಿಂಗದೇಹಗಳು (ಆರ್ಬ್ಸ್) ಕಂಡು ಬಂದವು

ಮುಂಬರುವ ಆಪತ್ಕಾಲದ ಭೀಕರತೆಯ ಕುರಿತು ಸಂತರ ಭವಿಷ್ಯವಾಣಿ !

‘ಮಹಾಭಾರತದ ಯುದ್ಧವು ೧೮ ದಿನಗಳವರೆಗೆ ನಡೆದಿತ್ತು, ಅದರಲ್ಲಿ ಲಕ್ಷಾಂತರ ಜನರು ಮೃತಪಟ್ಟರು. ರಾಮಾಯಣದ ಯುದ್ಧ ೬ ತಿಂಗಳುಗಳ ವರೆಗೆ ನಡೆದಿತ್ತು, ಅದರಲ್ಲಿ ಸಾವಿರಾರು ಜನರು ಮೃತಪಟ್ಟರು; ಈಗ ಮಾನವರ ಮನಸ್ಸಿನಲ್ಲಿ ಮಹಾಭಾರತವನ್ನು ರಚಿಸಲಾಗುತ್ತಿದೆ. ಒಂದುವೇಳೆ ಈ ಯುದ್ಧವು ಸಂಭವಿಸಿದರೆ, ಅದು ೧೮ ದಿನಗಳಲ್ಲ, ಕೇವಲ ೧೮ ಗಂಟೆಗಳಲ್ಲಿ ಲಕ್ಷಾಂತರ ಜನರಲ್ಲ, ಕೋಟ್ಯಾಂತರ ಜನರು ಮರಣ ಹೊಂದುವರು

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

‘ಸದ್ಭಾವನೆಯಿಂದ ‘ಸತ್ಪಾತ್ರೆ ಅನ್ನದಾನ ಮಾಡಿದರೆ ಅನ್ನದಾನಕ್ಕೆ ಯೋಗ್ಯ ಫಲ ಸಿಗುತ್ತದೆ ಹಾಗೂ ಎಲ್ಲ ಪಾಪಕರ್ಮಗಳಿಂದ ಮುಕ್ತನಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡಿದರೆ ಅನ್ನದಾನ ಮಾಡುವ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

‘ಕೊರೋನಾ‘ದಿಂದ ಆಗುವ ದುಷ್ಪರಿಣಾಮಗಳು !

‘ಕೊರೋನಾದಿಂದ ಸಂಚಾರ ನಿರ್ಬಂಧ, ಡಾಕ್ಟರರು ತಕ್ಷಣ ಸಿಗದಿರುವುದು, ಆಸ್ಪತ್ರೆಗಳ ಶುಲ್ಕ ಮತ್ತು ಅಲ್ಲಿಯ ಕೊರೋನಾದ ಇತರ ರೋಗಿಗಳು ಇತ್ಯಾದಿಗಳಿಂದಾಗಿ ಕೊರೋನಾ ರೋಗಿಗಳ ಮನಸ್ಸಿನಲ್ಲಿ ಭಯ ಉಂಟಾಗಿದೆ. ಆದುದರಿಂದ ಕಾಯಿಲೆಗಿಂತ ಅದರ ಚಿಕಿತ್ಸೆಯ ಬಗ್ಗೆ ರೋಗಿಗಳು ಹೆಚ್ಚು ಚಿಂತೆಯಾಗಿ ನೊಂದುಕೊಂಡಿದ್ದಾರೆ.

ಅಡಚಣೆಗಳನ್ನು ನೋಡುವ ವಿಧಾನ !

‘ಪರಿಪೂರ್ಣತೆಯ ಮಾರ್ಗದಲ್ಲಿ ನಡೆಯಲು ಬಯಸುವವರು ಅಡಚಣೆಗಳನ್ನು ಎದುರಿಸಲೇಬೇಕಾಗುತ್ತದೆ. ಅವರು ಎಂದಿಗೂ ಅದನ್ನು ದೂಷಿಸಬಾರದು; ಏಕೆಂದರೆ ಪ್ರತಿಯೊಂದು ಅಡಚಣೆಯೂ ಹೊಸ ಪ್ರಗತಿಗೆ ಒಂದು ಸುವರ್ಣಾವಕಾಶವಾಗಿರುತ್ತದೆ. ದೂಷಿಸುವುದು ದೌರ್ಬಲ್ಯ ಮತ್ತು ನಿಷ್ಠಾಶೂನ್ಯದ ಸಂಕೇತವಾಗಿದೆ.

ಸೆಪ್ಟೆಂಬರ್ ೫ ರಂದು ಇರುವ ಶಿಕ್ಷಕರ ದಿನಾಚರಣೆ ನಿಮಿತ್ತ

ಶ್ರೇಷ್ಠ ಭಾರತೀಯ ಋಷಿಮುನಿಗಳ ಜ್ಞಾನಪರಂಪರೆ ‘ಭಾರತಕ್ಕೆ ಶ್ರೇಷ್ಠ ಋಷಿಮುನಿಗಳ ಪರಂಪರೆ ಇದೆ. ಋಷಿಮುನಿಗಳು ಬರೆದ ವೇದ, ಉಪನಿಷತ್ತು, ಪುರಾಣಗಳು ಇತ್ಯಾದಿ ಗ್ರಂಥಗಳು ಮಾನವನಿಗೆ ಸರ್ವೋತ್ತಮ ಜ್ಞಾನ ನೀಡುತ್ತವೆ. ಅವುಗಳಲ್ಲಿ ಮನುಷ್ಯನಿಗೆ ಆಚಾರಧರ್ಮ, ಉಪಾಸನೆ, ಸಾಧನೆ, ಸಂರಕ್ಷಣೆ ಇತ್ಯಾದಿ ಎಲ್ಲ ವಿಷಯಗಳೂ ಇರುತ್ತವೆ.

ಪಿತೃಪಕ್ಷದಲ್ಲಿ ಶಾಸ್ತ್ರೋಕ್ತ ಮಹಾಲಯ ಶ್ರಾದ್ಧವಿಧಿ ಮಾಡುವುದರ ಮಹತ್ವ ಗಮನದಲ್ಲಿಡಿ ಮತ್ತು ‘ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಸ್ತ್ರ ವಿಧಾನಕ್ಕನುಸಾರ ಮುಂದಿನಂತೆ ಶ್ರಾದ್ಧವಿಧಿಯನ್ನು ಮಾಡಿ !

‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾದಿಂದ ಭಾದ್ರಪದ ಅಮಾವಾಸ್ಯೆ (೨ ರಿಂದ ೧೭ ಸಪ್ಟೆಂಬರ್ ೨೦೨೦) ಈ ಅವಧಿಯಲ್ಲಿ ಪಿತೃಪಕ್ಷವಿದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕು ಹಾಗೂ ಸಾಧನೆಗಾಗಿ ಅವರ ಆಶೀರ್ವಾದ ಸಿಗಬೇಕೆಂದು, ಪಿತೃಪಕ್ಷದಲ್ಲಿ ಎಲ್ಲರೂ ಮಹಾಲಯ ಶ್ರಾದ್ಧವನ್ನು ಮಾಡಬೇಕು.

ಸಪ್ಟೆಂಬರ್ ೩ ರಿಂದ ಆರಂಭವಾಗಲಿರುವ ಮಹಾಲಯಾರಂಭದ ನಿಮಿತ್ತ…

ಹಿಂದೂ ಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧ ಕರ್ಮವು ಆವಶ್ಯಕವಾಗಿದೆ. ತಂದೆ ತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ ಎನ್ನುತ್ತಾರೆ.

ಶ್ರಾದ್ಧವನ್ನು ಯಾವಾಗ ಮಾಡಬೇಕು ?

ಭಾದ್ರಪದ ಅಮಾವಾಸ್ಯೆಯಂದು ನಮ್ಮ ಕುಲದಲ್ಲಿದ್ದ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಲಾಗುತ್ತದೆ. ಆದುದರಿಂದ ಈ ಅಮಾವಾಸ್ಯೆಯನ್ನು ಸರ್ವಪಿತ್ರೀ ಅಮಾವಾಸ್ಯೆ ಎಂದು ಕರೆಯಲಾಗಿದೆ. ಪಿತೃಪಕ್ಷದ ಅಮಾವಾಸ್ಯೆಗೆ ‘ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಯಂದು ಎಲ್ಲರೂ ಶ್ರಾದ್ಧ ಮಾಡುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಪಿತೃಪಕ್ಷದಲ್ಲಿ ಇದು ಕೊನೆಯ ತಿಥಿಯಾಗಿದೆ.