ಸೆಪ್ಟೆಂಬರ್ ೫ ರಂದು ಇರುವ ಶಿಕ್ಷಕರ ದಿನಾಚರಣೆ ನಿಮಿತ್ತ

ಶ್ರೇಷ್ಠ ಭಾರತೀಯ ಋಷಿಮುನಿಗಳ ಜ್ಞಾನಪರಂಪರೆ ‘ಭಾರತಕ್ಕೆ ಶ್ರೇಷ್ಠ ಋಷಿಮುನಿಗಳ ಪರಂಪರೆ ಇದೆ. ಋಷಿಮುನಿಗಳು ಬರೆದ ವೇದ, ಉಪನಿಷತ್ತು, ಪುರಾಣಗಳು ಇತ್ಯಾದಿ ಗ್ರಂಥಗಳು ಮಾನವನಿಗೆ ಸರ್ವೋತ್ತಮ ಜ್ಞಾನ ನೀಡುತ್ತವೆ. ಅವುಗಳಲ್ಲಿ ಮನುಷ್ಯನಿಗೆ ಆಚಾರಧರ್ಮ, ಉಪಾಸನೆ, ಸಾಧನೆ, ಸಂರಕ್ಷಣೆ ಇತ್ಯಾದಿ ಎಲ್ಲ ವಿಷಯಗಳೂ ಇರುತ್ತವೆ. ಋಷಿಮುನಿಗಳಿಗೆ ಈ ಜ್ಞಾನವು ಅವರ ತಪೋಬಲದಿಂದ, ಅಂದರೆ ಆಧ್ಯಾತ್ಮಿಕ ಸಾಮರ್ಥ್ಯದಿಂದ ದೊರಕಿತು. ಅವರಿಗೆ ಸಾಧನೆಯಲ್ಲಿ ಪೂರ್ಣತ್ವ ಬಂದ ಬಳಿಕ ಈಶ್ವರನಿಂದ ಜ್ಞಾನ ಪ್ರಾಪ್ತಿಯಾಯಿತು. ಅವರು ಬರೆದಿಟ್ಟಿರುವ ಈ ಅಮೂಲ್ಯ ಜ್ಞಾನದಿಂದಾಗಿ ಮಾನವನಿಗೆ ಅವರ ಬಗ್ಗೆ ಕೃತಜ್ಞತೆ ಅನಿಸಬೇಕು. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಋಷಿಮುನಿಗಳ ಆಶ್ರಮ, ಅಂದರೆ ವಿಶ್ವವಿದ್ಯಾಲಯಗಳೇ ಆಗಿದ್ದವು. ಭರದ್ವಾಜಮುನಿ ಮತ್ತು ದುರ್ವಾಸಋಷಿಗಳು ಇವರ ಆಶ್ರಮದಲ್ಲಿ ಒಂದು ಸಮಯಕ್ಕೆ ೧೦ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನೆಲೆಸಿದ್ದರು. ದ್ವಾಪರಯುಗದಲ್ಲಿ ಸಾಂದೀಪನಿ ಋಷಿಗಳ ಆಶ್ರಮವು ಶಿಕ್ಷಣದ ಮುಖ್ಯ ಕೇಂದ್ರವಾಗಿತ್ತು. ಮಹಾಭಾರತ ಯುದ್ಧದ ನಂತರ ತಕ್ಷಶಿಲಾ, ವಿಕ್ರಮಶಿಲಾ, ನಾಲಂದಾ ಮುಂತಾದ ವಿಶ್ವವಿದ್ಯಾಲಯಗಳು ಭಾರತದಲ್ಲಿ ನಿರ್ಮಾಣವಾದವು. ಋಷಿಮುನಿಗಳು ಕೇವಲ ಜ್ಞಾನ ಸಂಪಾದಿಸದೇ, ಅವರು ಇಂತಹ  ಜ್ಞಾನದಾನದ ಕಾರ್ಯವನ್ನೂ ಮಾಡಿದರು. ಆ ಕಾಲಕ್ಕೆ ಲೇಖನದ ವಸ್ತುಗಳು ಹೆಚ್ಚು ಇಲ್ಲದ್ದರಿಂದ ಋಷಿಗಳಿಂದ ದೊರಕಿದ ಮೌಖಿಕ ಜ್ಞಾನವನ್ನು ಶಿಷ್ಯರಿಂದ ಮುಖೋದ್ಗತ ಮಾಡಲಾಗುತ್ತಿತ್ತು. ಈ ಪ್ರಕಾರ ಆ ಜ್ಞಾನವು ವೃದ್ಧಿಂಗತವಾಗುತ್ತ ಹೋಯಿತು ಹಾಗೂ ಅನೇಕ ವರ್ಷಗಳವರೆಗೆ ಜೋಪಾನವಾಗಿತ್ತು. ಲಕ್ಷಾಂತರ ವರ್ಷಗಳ ಹಿಂದೆ ಬರೆದಿಟ್ಟ ಗ್ರಂಥಗಳು ಇನ್ನೂವರೆಗೆ ಕೆಲವು ಮಟ್ಟದಲ್ಲಿ ಜೋಪಾನವಾಗಿವೆ, ಅವು ಕೇವಲ ಅವರಲ್ಲಿಯ ಶಾಶ್ವತ ಸ್ವರೂಪದಲ್ಲಿಯ ಜ್ಞಾನಸಾಮರ್ಥ್ಯದ ಮತ್ತು ಚೈತನ್ಯದಿಂದಾಗಿಯೇ ! – ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.