ಅತ್ಯಂತ ತಳಮಳದಿಂದ ಮತ್ತು ಭಾವಪೂರ್ಣವಾಗಿ ಮಾರ್ಗದರ್ಶನ ಮಾಡಿ ಸಾಧಕರನ್ನು ಅಂತರ್ಮುಖಗೊಳಿಸುವ ಪೂ. ರಮಾನಂದ ಗೌಡ !

ಪ್ರತಿಯೊಂದು ಉಪಕ್ರಮದಲ್ಲಿ ಜವಾಬ್ದಾರ ಸಾಧಕರೊಂದಿಗೆ ಕಲಿಯುವ ದೃಷ್ಟಿಯಿಂದ ಇನ್ನೊಬ್ಬ ಸಾಧಕನನ್ನು ಜೋಡಿಸಿ ಅವನಿಗೆ ಆ ಸೇವೆಯನ್ನು ಕಲಿಯಲು ಹೇಳುತ್ತಾರೆ. ಅವನು ಕಲಿತ ನಂತರ ಅವನಿಗೆ ಇತರ ಕೇಂದ್ರದಲ್ಲಿ ಅಥವಾ ಜಿಲ್ಲೆಯಲ್ಲಿ ಸೇವೆಯ ಜವಾಬ್ದಾರಿಯನ್ನು ಕೊಟ್ಟು ಅವನಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ. ಇದರಿಂದ ಹೊಸಹೊಸ ಸಾಧಕರು ಸೇವೆಯನ್ನು ಕಲಿಯುತ್ತಾರೆ ಮತ್ತು ಮುಂದೆ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ.

ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಗಮನಕ್ಕೆ ಬಂದ ಅಗ್ನಿಹೋತ್ರದ ವಿಭೂತಿಯ ಮಹತ್ವ !

ಭೃಗು ಮಹರ್ಷಿಗಳು ಹೇಳಿದಾಗಿನಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಅಗ್ನಿಹೋತ್ರವನ್ನು ಮಾಡುತ್ತಿದ್ದಾರೆ. ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರಿಗೆ ಅಗ್ನಿಹೋತ್ರದ ವಿಭೂತಿಯನ್ನು ಕೊಡಬಹುದು, ಎಂಬ ಉದ್ದೇಶದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಈ ವಿಭೂತಿಯನ್ನು ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಗೆ ಕಳುಹಿಸುತ್ತಾರೆ. ಇಂದಿನವರೆಗೆ ಅನೇಕ ಸಾಧಕರಿಗೆ ಈ ವಿಭೂತಿಯಿಂದ ಲಾಭವಾಗಿದೆ.

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಸಾಮಾನ್ಯವಾಗಿ ವ್ಯಕ್ತಿಯು ‘ನಾನು ಮತ್ತು ನನ್ನ ಕುಟುಂಬ’ ಈ ಚೌಕಟ್ಟಿನಲ್ಲಿದ್ದು ವಿಚಾರ ಮಾಡುತ್ತಾನೆ, ಅಂದರೆ ಅವನಲ್ಲಿ ಸಂಕುಚಿತವೃತ್ತಿ ಇರುತ್ತದೆ. ‘ವಿಶಾಲತೆ’ ಈ ಈಶ್ವರೀ ಗುಣವನ್ನು ಮೈಗೂಡಿಸಿಕೊಳ್ಳಲು ಸಾಧಕನು ಈ ಚೌಕಟ್ಟಿನಿಂದ ಹೊರಗೆ ಹೋಗಿ ‘ರಾಷ್ಟ್ರ ಮತ್ತು ಧರ್ಮಕ್ಕಾಗಿ ನಾನು ಏನು ಮಾಡಬಹುದು ?’, ಎಂಬ ವಿಚಾರವನ್ನು ಮಾಡಬೇಕು’, ಇದನ್ನು ಈ ಮೇಲಿನ ಪ್ರಯೋಗದಿಂದ ಕಲಿಸಲಾಯಿತು.

ಸಂತರು ನೀಡಿರುವ ಉದಾಹರಣೆಯಿಂದ ‘ಸಾಧನೆ ಮಾಡದಿರುವ ಮನುಷ್ಯನು ಪ್ರಾಣಿಯಂತಿದ್ದು ಅವನಿಗೆ ದಂಡ ಮತ್ತು ಭೇದ ಈ ನಿಯಮಗಳು ಅನ್ವಯಿಸುತ್ತದೆ’, ಎಂಬುದು ಸಾಧಕನ ಗಮನಕ್ಕೆ ಬರುವುದು

ಮನುಷ್ಯ ಮತ್ತು ಪ್ರಾಣಿಗಳು ಈ ಭೂಮಿಯ ಮೇಲೆ ಎಲ್ಲಡೆ ಓಡಾಡುತ್ತಿರುತ್ತಾರೆ. ಮನುಷ್ಯನಿಗೆ ದೇವರು ಯೋಗ್ಯ-ಅಯೋಗ್ಯ ವಿಚಾರಗಳನ್ನು ಮಾಡುವ ಬುದ್ಧಿಯನ್ನು ಕೊಟ್ಟಿದ್ದಾನೆ. ಇದನ್ನೇ ನಾವು ‘ವಿವೇಕ’ವೆಂದು ಹೇಳುತ್ತೇವೆ. ಪ್ರಾಣಿಗಳಿಗೆ ವಿವೇಕಬುದ್ಧಿ ಇರುವುದಿಲ್ಲ. ಹಾಗಾಗಿ ಅವರಿಗಾಗಿ ದಂಡ ಮತ್ತು ಭೇದ ಇವುಗಳನ್ನು ಅನುಸರಿಸಬೇಕಾಗುತ್ತದೆ. ಆಗಲೇ ಅವು ದಾರಿಗೆ ಬರುತ್ತವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ಯಾರ ಆಚಾರ ಮತ್ತು ವಿಚಾರಗಳು ಸಾತ್ತ್ವಿಕವಾಗಿರುತ್ತವೆಯೋ, ಅವರ ಮೇಲೆ ಸಾಧನೆಯ ಸಂಸ್ಕಾರವನ್ನು ಬಿಂಬಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ರೀತಿ ಕ್ರಮೇಣ ಮತ್ತು ಹಂತಹಂತವಾಗಿ ನೀಡಿದ ಆಧ್ಯಾತ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಯು ಸಾಧಕನೆಂದು ತಯಾರಾದಾಗ ಫಲನಿಷ್ಪತ್ತಿಯು ಹೆಚ್ಚಿರುತ್ತದೆ. ಒಂದು ಬಾರಿ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಯಿತೆಂದರೆ, ಚಿತ್ತಶುದ್ಧಿಯು ತಾನಾಗಿಯೇ ಪ್ರಾರಂಭವಾಗುತ್ತದೆ ಮತ್ತು ಇದರಿಂದಲೇ ಓರ್ವ ‘ಆದರ್ಶ ಸಾಧಕ ವಿದ್ಯಾರ್ಥಿ’ಯು ತಯಾರಾಗುತ್ತಾನೆ.

ಆಪತ್ಕಾಲದಲ್ಲಿ ಜೀವನರಕ್ಷಣೆ ಮಾಡಿಕೊಳ್ಳಲು ಸ್ವತಃ ಸಕ್ಷಮರಾಗಿ !

ಮನೆಯ ಬಾಲ್ಕನಿ, ಅಂಗಳ, ಹೊಲ ಇತ್ಯಾದಿಗಳಲ್ಲಿ ಬೆಳೆಸುವ ೨೦೦ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಈ ಸಸ್ಯಗಳಿಂದ  ೧೦೦ ರೋಗಗಳ ನಿವಾರಣೆಗೆ ಹೇಗೆ ಬಳಸಬೇಕು ಎಂಬ  ಮಾಹಿತಿ ಗ್ರಂಥದಲ್ಲಿ ಕೊಡಲಾಗಿದೆ. ಭಾವೀ ಮಹಾಯುದ್ಧದಲ್ಲಿ ಆಗಬಹುದಾದ ಔಷಧಿಗಳ ಕೊರತೆ ಗಮನದಲ್ಲಿಟ್ಟು ಈಗಲೇ ಸಸ್ಯಗಳನ್ನು ಬೆಳೆಸಿ !

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ನೈವೇದ್ಯವು ಷೋಡಶೋಪಚಾರ ಪೂಜೆಯ ಒಂದು ಉಪಚಾರವಾಗಿದೆ. ಇದರಲ್ಲಿ ದೇವರ ಪೂಜೆಯಾದ ನಂತರ ಆರತಿಯನ್ನು ಮಾಡುವ ಮೊದಲು ದೇವರಿಗೆ ನೈವೇದ್ಯವನ್ನು ತೋರಿಸಲಾಗುತ್ತದೆ. ಸಾತ್ತ್ವಿಕ ಆಹಾರದ ನೈವೇದ್ಯವನ್ನು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ದೇವರಿಗೆ ಅರ್ಪಿಸಿದರೆ ಆ ನೈವೇದ್ಯದ ಪದಾರ್ಥದ ಸಾತ್ತ್ವಿಕತೆಯಿಂದ ದೇವರಿಂದ ಪ್ರಕ್ಷೇಪಿತವಾಗುವ ಚೈತನ್ಯ-ಲಹರಿಗಳು ನೈವೇದ್ಯದಲ್ಲಿ ಆಕರ್ಷಿತವಾಗುತ್ತವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಪ.ಪೂ. ಭಕ್ತರಾಜರು ಪ.ಪೂ. ಡಾಕ್ಟರರಿಗೆ ನೀಡಿದ ಶ್ರೀಕೃಷ್ಣಾರ್ಜುನರ ಬೆಳ್ಳಿಯ ರಥವನ್ನು ಪೂಜಿಸುವ ಮೊದಲು ಮತ್ತು ನಂತರ ರಥದಿಂದ ಬಂದ ದೈವೀ ನಾದಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘೧೬.೬.೨೦೨೦ ರಂದು ಮಹರ್ಷಿಗಳ ಆಜ್ಞೆಗನುಸಾರ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಪ.ಪೂ ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆಯವರಿಗೆ ನೀಡಿದ ಶ್ರೀಕೃಷ್ಣಾರ್ಜುನರ ಬೆಳ್ಳಿಯ ರಥದ ಪೂಜೆ ಮಾಡಿದ್ದರು. ಈ ಪೂಜೆಯ ವೇಳೆ ಈ ರಥದಿಂದ ಎರಡು ರೀತಿಯ ದೈವೀ ನಾದಗಳು ಕೇಳಿಬಂದವು. ಈ ದೈವೀ ನಾದಗಳ ಸೂಕ್ಷ್ಮ ಪರೀಕ್ಷಣೆ ಮಾಡಿದಾಗ ಅವುಗಳ ಬಗ್ಗೆ ಮುಂದಿನ ಜ್ಞಾನವು ದೊರಕಿತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರವನ್ನು ಸೇರ್ಪಡೆಗೊಳಿಸುವುದು’ ಈ ವಿಷಯದಲ್ಲಿ ವೆಬಿನಾರ್

ಪ್ರಸ್ತುತ ವೈದ್ಯಕೀಯ ಶಿಕ್ಷಣದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದ ಅಭಾವವಿದೆ. ವೈದ್ಯಕೀಯ ಕ್ಷೇತ್ರವು ಕಾಲಕ್ರಮೇಣ ವ್ಯಾಪಾರಿಕರಣವಾಗುತ್ತಾ ಹೋದ ಹಾಗೆ ಆಧ್ಯಾತ್ಮಿಕ ದೃಷ್ಟಿಕೋನವು ಕಣ್ಮರೆ ಯಾಗುತ್ತಿದೆ. ರೋಗವನ್ನು ಪತ್ತೆಹಚ್ಚಲು ಹಲವು ಬಾರಿ ಅಡೆತಡೆ ಗಳು ಬರುತ್ತವೆ, ನಿಮಗೂ ಇದರ ಅನುಭವಿದೆ. ರೋಗವನ್ನು ಪತ್ತೆಹಚ್ಚುವಲ್ಲಿ ಬರುವ ಅಡೆತಡೆಗಳ ಹಿಂದೆ ಆಧ್ಯಾತ್ಮಿಕ ಕಾರಣವಿದೆಯೇ ಎಂದು ವಿಚಾರ ಮಾಡುವ ಆವಶ್ಯಕತೆಯಿದೆ.

‘ಸುರ-ತಾಲ ಹುನರ್ ಕಾ ಕಮಾಲ್’ ಈ ಜಾಗತಿಕ ‘ಆನ್‌ಲೈನ್’ ಸಂಗೀತ-ನೃತ್ಯ

‘ಸುರ-ತಾಲ ಹುನರ್ ಕಾ ಕಮಾಲ್’ ಈ ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭವು ೧೫ ನವಂಬರ್‌ದಂದು ನೆರವೇರಿತು. ಈ ಸಮಯದಲ್ಲಿ ಡಾ. ರೇಖಾ ಮೆಹರಾ ಇವರು ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು. ಅವರೊಂದಿಗೆ ಗಾಯನ ಮತ್ತು ನೃತ್ಯ ಕ್ಷೇತ್ರದ ಗುರುಜನರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.