ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ನಿಜವಾದ ದೀಪಾವಳಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
‘ದೀಪಾವಳಿಯೆಂದರೆ ಅಂಧಕಾರದ ಮೇಲೆ ಬೆಳಕಿನ ವಿಜಯ, ಅಸತ್ಯದ ಮೇಲೆ ಸತ್ಯದ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ರಾಕ್ಷಸರ ಮೇಲೆ ದೇವತೆಗಳ ವಿಜಯ, ತಾಮಸಿಕ ಗುಣದ ಮೇಲೆ ಸತ್ತ್ವ ಗುಣದ ವಿಜಯ, ದೋಷಗಳ ಮೇಲೆ ಗುಣಗಳ ವಿಜಯವಾಗಿದೆ. ಇಂದು ದೇಶದಲ್ಲಿ ರಾರಾಜಿಸುತ್ತಿರುವ ಅಧರ್ಮ, ಅನ್ಯಾಯ, ಧರ್ಮವಿರೋಧಿ ಕೃತ್ಯಗಳು, ಧರ್ಮಹಾನಿಯ ಘಟನೆಗಳ ವಿರುದ್ಧ ಧರ್ಮ ಶಕ್ತಿಯ ಆಧಾರದ ಮೇಲೆ ಹೋರಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಈಗ ಆಚರಿಸುವ ನಿಜವಾದ ದೀಪಾವಳಿಯಾಗಿದೆ, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡರವರು ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ ೧೧ ರ ಸಂಜೆ ೬.೦೦ ಕ್ಕೆ ಧರ್ಮಪ್ರೇಮಿಗಳಿಗೆ ಆಪತ್ಕಾಲದಲ್ಲಿ ದೀಪಾವಳಿ ಹೇಗೆ ಆಚರಿಸಬೇಕು ? ಅದೇ ರೀತಿ ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯದಲ್ಲಿ ಮಾರ್ಗದರ್ಶನ ಸಿಗಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಆನ್‌ಲೈನ್ ಮಾರ್ಗದರ್ಶನದಲ್ಲಿ ಮಾತನಾಡುತ್ತಿದ್ದರು. ಯೂ-ಟ್ಯೂಬ್, ಫೇಸಬುಕ್ ಅದೇ ರೀತಿ ಎಫ್‌ಸಿಸಿ ತಂತ್ರಜ್ಞಾನದ ಮೂಲಕ ಈ ಮಾರ್ಗದರ್ಶನದ ಲಾಭವನ್ನು ಪಡೆದರು. ಸುಮಾರು ೭೫೦ ಜಿಜ್ಞಾಸುಗಳು ಇದರ ಲಾಭ ಪಡೆದುಕೊಂಡರು.
ಈ ಪ್ರವಚನದಲ್ಲಿ ದೀಪಾವಳಿಯ ಇತಿಹಾಸ ಏನು, ದೀಪಾವಳಿ ಹಬ್ಬದ ಮಹತ್ವ ಏನು ? ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೇಗೆ ಕಾರ್ಯ ಮಾಡಬೇಕು ? ಮುಂತಾದ ವಿಷಯದ ಮೇಲೆ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನವನ್ನು ಮಾಡಿದರು.
ಧರ್ಮಪ್ರೇಮಿಗಳ ಸಹಭಾಗ
೧. ಮಾರ್ಗದರ್ಶನದಲ್ಲಿ ಉಪಸ್ಥಿತ ಧರ್ಮಪ್ರೇಮಿಗಳ ಸಹಭಾಗವು ಉತ್ತಮವಾಗಿತ್ತು.
೨. ನಮಗೆ ದೀಪಾವಳಿ ಹೇಗೆ ಆಚರಿಸಬೇಕು ? ಬಹು ಅಮೂಲ್ಯವಾದ ಮಾಹಿತಿ ಸಿಕ್ಕಿತು. ಇಷ್ಟು ಒಳ್ಳೆಯ ವಿಷಯ ಎಲ್ಲಿಯೂ ಸಿಕ್ಕಿರಲಿಲ್ಲ.
೩. ಕೆಲವರು ದೀಪಾವಳಿ, ಲಕ್ಷ್ಮೀ ಪೂಜೆ, ಧನತ್ರಯೋದಶಿ, ದೀಪಾವಳಿ ಪಾಡ್ಯ, ದೀಪ ಹಚ್ಚುವುದು, ಎಷ್ಟು ದೀಪ ಹಚ್ಚಬೇಕು. ಯಮದೀಪದಾನ ಹೇಗೆ ಮಾಡಬೇಕು ಎಂಬ ವಿಷಯದ ಬಗ್ಗೆ ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು.
೪. ಕೆಲವರು ಸನಾತನದ ಆಕಾಶದೀಪ ಬೇಕು ಎಂದು ಕೇಳಿದರೆ ಇನ್ನು ಕೆಲವರು ಸನಾತನದ ಸಾತ್ತ್ವಿಕ ಉತ್ಪಾದನೆಗಳು ಬೇಕು ಎಂದು ಹೇಳಿದರು.