ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !
ಆಪತ್ಕಾಲದಲ್ಲಿ ಮನೆಯಲ್ಲಿನ ಫ್ಯಾನ್, ನಲ್ಲಿ, ಮಿಕ್ಸರ್ ಇವುಗಳಂತಹ ವಸ್ತುಗಳು ಹಾಳಾಗಬಹುದು. ಅವುಗಳ ದುರಸ್ತಿಗಾಗಿ ತಗಲುವ ಬಿಡಿಭಾಗಗಳು ಆಪತ್ಕಾಲದಲ್ಲಿ ಪೇಟೆಯಲ್ಲಿ ಸಿಗುವುದು ಕಠಿಣವಾಗುವುದು ಮತ್ತು ದುರಸ್ತಿ ಮಾಡುವ ತಂತ್ರಜ್ಞರೂ (ಮೆಕ್ಯಾನಿಕ್) ಸಿಗುವುದು ಕಠಿಣವಾಗುವುದು. ಇದಕ್ಕಾಗಿ ಇಂತಹ ವಸ್ತುಗಳ ಬಿಡಿ ಭಾಗಗಳನ್ನು ಮೊದಲೇ ಖರೀದಿಸಿಡಬೇಕು, ಹಾಗೆಯೇ ಆ ವಸ್ತುಗಳ ದುರುಸ್ತಿ ಮಾಡುವುದನ್ನು ಸಾಧ್ಯವಿದ್ದಷ್ಟು ಕಲಿತುಕೊಳ್ಳಬೇಕು.