‘ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಒಟ್ಟಿಗೆ ಸೇರಿ ಉತ್ಸವವನ್ನು ಆಚರಿಸಲಾಗದಿರುವುದರಿಂದ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮನೆಯಲ್ಲಿಯೇ ಭಕ್ತಿಭಾವದಿಂದ ಹೇಗೆ ಮಾಡಬೇಕು ?
ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೧೧.೮.೨೦೨೦ ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ.