ಬೆಳ್ತಂಗಡಿಯಲ್ಲಿ ಪಾಕ್‌ಪರ ಘೋಷಣೆ ಕೂಗಿದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸಿ !

ಬೆಳ್ತಂಗಡಿಯ ಉಜಿರೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನಪರ ಘೋಷಣೆ ಕೂಗಿರುವ ಘಟನೆ ನಡೆದಿರುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಮಥುರಾದಲ್ಲಿ ರಾ.ಸ್ವ. ಸಂಘದ ಕಚೇರಿಯ ಮೇಲೆ ಮತಾಂಧರ ಗುಂಪಿನಿಂದ ಹಲ್ಲೆ

ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯಲ್ಲಿ ಕಳ್ಳತನದ ಪ್ರಕರಣದ ನಂತರ ೪೦ ರಿಂದ ೫೦ ಮತಾಂಧರ ಗುಂಪೊಂದು ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇದರಲ್ಲಿ ಇಬ್ಬರು ಸ್ವಯಂಸೇವಕರು ಗಾಯಗೊಂಡಿದ್ದಾರೆ. ದಾಳಿಕೋರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಮದುವೆಗಾಗಿ ಮತಾಂತರವಾಗಲು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ ! – ರಕ್ಷಣಾ ಸಚಿವ ರಾಜನಾಥ ಸಿಂಗ್

ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರವನ್ನು ನಿಲ್ಲಿಸಬೇಕು. ಮದುವೆಗಾಗಿ ಬಲವಂತವಾಗಿ ಮತಾಂತರಗೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ಜಾರಿಗೆ ತಂದಿರುವ ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ಬೆಂಬಲಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು.

ಮಂಗಳಮಯ ವಾತಾವರಣದಲ್ಲಿ ಮಂಗಳೂರು ಸೇವಾಕೇಂದ್ರಕ್ಕೆ ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಯವರ ಶುಭಾಗಮನ

ಶ್ರೀ ದೇವಿಯ ಮಹಿಮೆಯನ್ನು ಹೇಳುತ್ತಾ, ಶ್ರೀ. ಪವನಕುಮಾರ ಯಜಮಾನ ಇವರು, ‘ಕೊರೋನಾದಿಂದಾಗಿ ಸಮಾಜದಲ್ಲಿ ಒಂದೆಡೆ ಕಷ್ಟ ಎಂದೆನಿಸಿದರೂ ಇನ್ನೊಂದೆಡೆ ಎಷ್ಟೋ ಅನ್ಯಾಯ ಅತ್ಯಾಚಾರಗಳು ಕಡಿಮೆಯಾಯಿತು, ಕುಟುಂಬ ಬಾಂಧವ್ಯ ಹೆಚ್ಚಾಯಿತು, ಸಾತ್ತ್ವಿಕ ಆಹಾರವನ್ನೇ ಸೇವನೆ ಪ್ರಾರಂಭವಾಯಿತು. ಅಂದರೆ ಸಮಾಜದಲ್ಲಿ ಅನ್ಯಾಯಗಳು, ಅಧರ್ಮಗಳು ಹೆಚ್ಚಾದಾಗ ಭಗವಂತನು ಯಾವುದಾದರೊಂದು ಮಾಧ್ಯಮದಿಂದ ತನ್ನ ಲೀಲೆಯನ್ನು ತೋರಿಸುತ್ತಾನೆ ಎಂದು ಹೇಳಿದರು.

ದಮೋಹ (ಮಧ್ಯಪ್ರದೇಶ) ಗೋವುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಯತ್ನಿಸಿದ ಹಿಂದೂ ಯುವಕನ ಹತ್ಯೆಗೈದ ಮತಾಂಧರು !

ಕೆಲವು ಜನರು ಇಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿರುವಾಗ, ಇಬ್ಬರು ಯುವಕರು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ ಕಟುಕರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಇದರಲ್ಲಿ ಅಜಯ ಮುಡಾ ಎಂಬ ಯುವ ಶಿಕ್ಷಕನು ಮೃತಪಟ್ಟನು.

ಕರ್ನಾಟಕದ ವಿಧಾನ ಪರಿಷತ್ತಿನ ಉಪಸಭಾಪತಿ ಧರ್ಮೆ ಗೌಡ ಆತ್ಮಹತ್ಯೆ

ರಾಜ್ಯದ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಜನತಾದಳ(ಜಾತ್ಯತೀತ) ಪಕ್ಷದ ನಾಯಕ ಎಸ್.ಎಲ್. ಧರ್ಮೆ ಗೌಡ ಇವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವು ಹಳಿಯ ಮೇಲೆ ಪತ್ತೆಯಾಗಿದೆ. ಜೊತೆಗೆ ಅವರ ಬಳಿ ಮೃತ್ಯುಪತ್ರವೂ ಲಭ್ಯವಾಗಿದೆ.

‘ಅಮೆಜಾನ್’ನ ಆನ್‌ಲೈನ್ ಪುಸ್ತಕದಂಗಡಿ ‘ಕಿಂಡಲ್’ ನಲ್ಲಿ ಲಭ್ಯವಿರುವ ಪುಸ್ತಕಗಳ ಮೂಲಕ ‘ಲವ್ ಜಿಹಾದ್’ಗೆ ಉತ್ತೇಜನೆ !

ಅಮೆಜಾನ್’ ಈ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ‘ಕಿಂಡಲ್’ ಈ ‘ಆನ್‌ಲೈನ್’ ಪುಸ್ತಕದ ಕೇಂದ್ರದಲ್ಲಿ ಮುಸ್ಲಿಂ ಪುರುಷರ ಮತ್ತು ಹಿಂದೂ ಮಹಿಳೆಯರ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಬರಹವಿರುವ ಹಲವಾರು ಪುಸ್ತಕಗಳು ಮಾರಾಟಕ್ಕಿವೆ ಎಂದು ‘ಸ್ವರಾಜ್ಯಮ್ಯಾಗ ಡಾಟ್ ಕಾಮ್’ ಈ ಸುದ್ದಿ ಜಾಲತಾಣವು ಮಾಹಿತಿ ನೀಡಿದೆ.

ಮಧ್ಯಪ್ರದೇಶದ ಉಜ್ಜೈನಿಯ ನಂತರ ಇಂದೂರ್‌ನಲ್ಲಿಯೂ ಶ್ರೀರಾಮಮಂದಿರಕ್ಕಾಗಿ ಅರ್ಪಣೆಯನ್ನು ಸಂಗ್ರಹಿಸಲು ನಡೆಸಲಾದ ಮೆರವಣಿಯ ಮೇಲೆ ಮತಾಂಧರಿಂದ ಕಲ್ಲುತೂರಾಟ : ೧೨ ಕ್ಕೂ ಹೆಚ್ಚು ಜನರಿಗೆ ಗಾಯ

ಕೆಲವು ದಿನಗಳ ಹಿಂದೆ ರಾಜ್ಯದ ಉಜ್ಜೈನಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ನಿಧಿಯನ್ನು ಸಂಗ್ರಹಿಸಲು ನಡೆಸಲಾದ ಮೆರವಣಿಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಕಲ್ಲುತೂರಾಟ ಮಾಡಿರುವ ಘಟನೆ ನಡೆದಿತ್ತು.

ಗಾಝಿಯಾಬಾದಿನಲ್ಲಿ ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ ಮಾಡಿ ಹತ್ಯೆ

ಇಲ್ಲಿ ನಡು ರಸ್ತೆಯಲ್ಲಿ ೨ ವ್ಯಕ್ತಿಗಳು ಯುವಕನ ಹತ್ಯೆ ಮಾಡಿದರು. ಈ ಸಮಯದಲ್ಲಿ ಜನರು ಹತ್ಯೆಯನ್ನು ತಡೆಯುವ ಬದಲು ಒಬ್ಬರು ಅದರ ಚಿತ್ರೀಕರಣ ಮಾಡಿದರು ಮತ್ತು ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಯುವಕನ ಮೇಲೆ ದಾಳಿಯಾದ ನಂತರ ಆತ ಗಾಯಗೊಂಡಿರುವ ಸ್ಥೀತಿಯಲ್ಲಿರುವಾಗಲೂ ಆತನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲ. ಅಜಯ ಎಂದು ಆ ಯುವಕನ ಹೆಸರು ಇದೆ.

ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಮಾರಾಟ ಮಾಡುತ್ತಿದ್ದ ಮದರಸಾದ ಮೌಲ್ವಿಯ ಬಂಧನ

೧೬ ವರ್ಷದ ಬಾಲಕಿಯ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೫ ವರ್ಷದ ಮದರಸಾ ಶಿಕ್ಷಕ ಮೌಲಾನಾ ನೌಶಾದ ಎಂಬವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಉತ್ತರ ಪ್ರದೇಶದ ಹರದೊಯಿಯ ಹಲವಾರು ಬಾಲಕಿಯರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ೧೦ ಕ್ಕೂ ಹೆಚ್ಚು ಆರೋಪಗಳು ಇದೆ.