ಗಾಝಿಯಾಬಾದಿನಲ್ಲಿ ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ ಮಾಡಿ ಹತ್ಯೆ

ಜನರು ನಿಷ್ಕ್ರಿಯ ! ವಿಡಿಯೋ ಮಾಡಿದರು; ಆದರೆ ಕಾಪಾಡಲಿಲ್ಲ !

  • ಇದು ಭಾರತೀಯರಿಗೆ ನಾಚಿಕೆಯ ವಿಷಯವಾಗಿದೆ ! ಇಂತಹ ಘಟನೆಯ ಸಮಯದಲ್ಲಿ ಸಂಘಟಿತರಾಗಿ ಕೃತಿ ಮಾಡದಿರುವ ಜನರು ಮುಂದಿನ ದೊಡ್ಡ ಆಪತ್ಕಾಲದಲ್ಲಿ ಪರಸ್ಪರರಿಗೆ ಸಹಾಯ ಮಾಡಬಹುದೇ ? 
  • ಇಂತಹ ಘಟನೆಯ ಸಮಯದಲ್ಲಿ ಜನರು ಮುಂದೆ ಬರದಿರಲು ಪೊಲೀಸರಿಂದಾಗುವ ತೊಂದರೆಯೂ ಒಂದು ಕಾರಣವಾಗಿದೆ ! ಪೊಲೀಸರು ಜನರ ಸಹಾಯ ಮಾಡುವುದಿಲ್ಲ ಆದ್ದರಿಂದ ಜನರೂ ಅವರಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ, ಇದರ ಬಗ್ಗೆ ಸರಕಾರ ಹಾಗೂ ಪೊಲೀಸರು ವಿಚಾರ ಮಾಡಬೇಕು !

ಗಾಝಿಯಾಬಾದ್ (ಉತ್ತರಪ್ರದೇಶ) – ಇಲ್ಲಿ ನಡು ರಸ್ತೆಯಲ್ಲಿ ೨ ವ್ಯಕ್ತಿಗಳು ಯುವಕನ ಹತ್ಯೆ ಮಾಡಿದರು. ಈ ಸಮಯದಲ್ಲಿ ಜನರು ಹತ್ಯೆಯನ್ನು ತಡೆಯುವ ಬದಲು ಒಬ್ಬರು ಅದರ ಚಿತ್ರೀಕರಣ ಮಾಡಿದರು ಮತ್ತು ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಯುವಕನ ಮೇಲೆ ದಾಳಿಯಾದ ನಂತರ ಆತ ಗಾಯಗೊಂಡಿರುವ ಸ್ಥೀತಿಯಲ್ಲಿರುವಾಗಲೂ ಆತನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲ. ಅಜಯ ಎಂದು ಆ ಯುವಕನ ಹೆಸರು ಇದೆ.

ಹೂವಿನ ಅಂಗಡಿಯ ವಿಷಯದಲ್ಲಿ ಅಜಯನ ಸಹೋದರ ಸಂಜಯ ಹಾಗೂ ಮುಖ್ಯ ಆರೋಪಿ ಗೋವಿಂದ ಇವರ ನಡುವೆ ವಾದವಿತ್ತು. ಸಂಜಯನು ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರನ್ನು ನೀಡಿದ್ದ. ಪೊಲೀಸರು ಆ ಸಮಯದಲ್ಲಿ ಅವರಲ್ಲಿ ಪರಸ್ಪರರಲ್ಲಿ ರಾಜಿ ಮಾಡಿಕೊಳ್ಳಲು ಹೇಳಿದ್ದರು. ಗೋವಿಂದ ಹಾಗೂ ಆತನ ಸ್ನೇಹಿತ ಅಮಿತ ಅಜಯನ ಮೇಲೆ ದಾಳಿ ಮಾಡಿ ಆತನ ಹತ್ಯೆ ಮಾಡಿದರು. ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.