ಮಧ್ಯಪ್ರದೇಶದಲ್ಲಿ ಬಿಜೆಪಿಯ ಸರಕಾರ ಇರುವಾಗ ಇಂತಹ ಘಟನೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಹಿಂದೂಗಳತ್ತ ಕಣ್ಣೆತ್ತಿ ನೋಡುವ ಧೈರ್ಯವೂ ಮತಾಂಧರಿಗೆ ಆಗಬಾರದು, ಸರಕಾರ ಹಾಗೂ ಪೊಲೀಸರು ಈ ರೀತಿಯ ಭಯ ಹುಟ್ಟಿಸಬೇಕು !
ಇಂದೂರ್ (ಮಧ್ಯಪ್ರದೇಶ) – ಕೆಲವು ದಿನಗಳ ಹಿಂದೆ ರಾಜ್ಯದ ಉಜ್ಜೈನಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ನಿಧಿಯನ್ನು ಸಂಗ್ರಹಿಸಲು ನಡೆಸಲಾದ ಮೆರವಣಿಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಕಲ್ಲುತೂರಾಟ ಮಾಡಿರುವ ಘಟನೆ ನಡೆದಿತ್ತು. ಈಗ ಇಂದೂರ್‌ನಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ.
After Begumbagh stone pelting, Hindu rally in Indore that was collecting donations for Ram Mandir attackedhttps://t.co/xjZ2X1sEXY
— OpIndia.com (@OpIndia_com) December 29, 2020
ಇಲ್ಲಿಯ ಗೌತಮಪುರಾ ಠಾಣೆ ಪ್ರದೇಶದ ಚಾಂದನಖೇಡಿ ಗ್ರಾಮದಲ್ಲಿ ಡಿಸೆಂಬರ ೨೬ ರಂದು ಬೆಳಗ್ಗೆ ಈ ಘಟನೆ ನಡೆದಿದೆ. ಈ ಮೆರವಣಿಗೆಯು ಒಂದು ಊರಿನಿಂದ ಮತ್ತೊಂದು ಊರಿನತ್ತ ಸಾಗುವಾಗ ಮಧ್ಯದಲ್ಲಿ ಒಂದು ಮಸಿದಿಯ ಹತ್ತಿರ ಕಾರ್ಯಕರ್ತರು ಹನುಮಾನ ಚಾಲಿಸಾ ಪಠಿಸಲು ಆರಂಭಿಸಿದರು. ಈ ಕಾರ್ಯಕರ್ತರು ಮುಂದೆ ಹೋಗುತ್ತಿದ್ದರು. ಅಷ್ಟರಲ್ಲೇ ಕೆಲವು ಮತಾಂಧರು ಇಲ್ಲಿಗೆ ಬಂದರು ಹಾಗೂ ವಾದ ಆರಂಭಿಸಿದರು. ಪೊಲೀಸರು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವಾಗಲೇ ಮಸೀದಿಯಿಂದ ಕಲ್ಲು ತೂರಾಟ ಆರಂಭವಾಯಿತು. ಈ ಕಲ್ಲು ತೂರಾಟದಲ್ಲಿ ೧೨ ಕ್ಕೂ ಹೆಚ್ಚು ಜನರು ಗಾಯಗೊಂಡರು. ನಂತರ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಯಿತು.