ಕರ್ನಾಟಕದ ವಿಧಾನ ಪರಿಷತ್ತಿನ ಉಪಸಭಾಪತಿ ಧರ್ಮೆ ಗೌಡ ಆತ್ಮಹತ್ಯೆ

ಸಮಾಜಕ್ಕೆ ಮಾರ್ಗದರ್ಶನ ಮಾಡುವ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಸಾಮಾಜಿಕ ದೃಷ್ಟಿಯಲ್ಲಿ ಚಿಂತಾಜನಕವಾಗಿದೆ !

ರಾಜ್ಯದ ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್. ಧರ್ಮೆ ಗೌಡ

ಬೆಂಗಳೂರು – ರಾಜ್ಯದ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಜನತಾದಳ(ಜಾತ್ಯತೀತ) ಪಕ್ಷದ ನಾಯಕ ಎಸ್.ಎಲ್. ಧರ್ಮೆ ಗೌಡ ಇವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವು ಹಳಿಯ ಮೇಲೆ ಪತ್ತೆಯಾಗಿದೆ. ಜೊತೆಗೆ ಅವರ ಬಳಿ ಮೃತ್ಯುಪತ್ರವೂ ಲಭ್ಯವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ರಾತ್ರಿ ೨ ಗಂಟೆಗೆ ರೈಲು ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ವಿಧಾನ ಪರಿಷತ್ತಿನ ಸಭಾಗೃಹದಲ್ಲಿ ಮುಖ್ಯ ವಿರೋಧಿ ಪಕ್ಷವಾಗಿರುವ ಕಾಂಗ್ರೆಸ್‌ನ ಶಾಸಕರು ಧರ್ಮೆ ಗೌಡ ಇವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು. ಅವರನ್ನು ಸಭಾಪತಿಯ ಖುರ್ಚಿಯಿಂದ ಬಲವಂತವಾಗಿ ಎಳೆದು ಕೆಳಗಿಳಿಸಿದ್ದರು. ಕಾಂಗ್ರೆಸ್‌ನ ಶಾಸಕರು ‘ಅವರು ಅಕ್ರಮವಾಗಿ ಸಭೆಯ ವ್ಯವಹಾರಗಳನ್ನು ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದರು.