ಮುಂದಿನ ದಲೈ ಲಾಮಾರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೀನಾಗೆ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲ ! – ತವಾಂಗ್ ಮಠದ ಮುಖ್ಯಸ್ಥ, ಗ್ಯಾಂಗ್‍ಬುಂಗ್ ರಿನ್‍ಪೋಚೆ

ಚೀನಾ ಸರಕಾರವು ಯಾವುದೇ ಧರ್ಮವನ್ನು ನಂಬುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಿಸುವ ಸೂತ್ರವು ಆಧ್ಯಾತ್ಮಿಕವಾಗಿದೆ. ಆದ್ದರಿಂದ, ಚೀನಾಗೆ ಈ ಅಧಿಕಾರವೇ ಇಲ್ಲ ಎಂದು ಗ್ಯಾಂಗ್‍ಬುಂಗ್ ರಿನ್‍ಪೋಚೆ ಇವರು ಹೇಳಿದ್ದಾರೆ.

ಅರುಣಾಚಲ ಭಾರತದ ಭಾಗ ಅಲ್ಲ (ವಂತೆ) ! – ಮತ್ತೊಮ್ಮೆ ವಿಷ ಕಕ್ಕಿದ ಚೀನಾ

ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು.