ಅರುಣಾಚಲ ಭಾರತದ ಭಾಗ ಅಲ್ಲ (ವಂತೆ) ! – ಮತ್ತೊಮ್ಮೆ ವಿಷ ಕಕ್ಕಿದ ಚೀನಾ

  • ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರ ಅರುಣಾಚಲ ಪ್ರದೇಶದ ಪ್ರವಾಸಕ್ಕೆ ಚೀನಾದ ವಿರೋಧ

  • ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ! – ಭಾರತದ ಪ್ರತ್ಯುತ್ತರ

ಚೀನಾದ ಬಾಯಿಯನ್ನು ಶಾಶ್ವತವಾಗಿ ಮುಚ್ಚಲು ಭಾರತವು ಆಕ್ರಮಣಕಾರಿಯಾಗುವುದು ಆವಶ್ಯಕ !

ನವದೆಹಲಿ – ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು. ಅವರು ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್‌ನ ಮತ್ತು ಪರೋಕ್ಷವಾಗಿ ಚೀನಾದ ಪ್ರದೇಶವಾಗಿದೆ ಎಂದು ಹೇಳಿದ್ದಾರೆ. ಚೀನಾದ ಈ ವಿರೋಧಕ್ಕೆ ಭಾರತವೂ ಪ್ರತ್ಯುತ್ತರ ನೀಡಿದೆ. ‘ನಾವು ಚೀನಾದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯನ್ನು ಕೇಳಿದೆವು. ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅರುಣಾಚಲ ಪ್ರದೇಶವು ಭಾರತದ ಅಭಿನ್ನ ಮತ್ತು ಅವಿಭಾಜ್ಯ ಅಂಗವಾಗಿದೆ. ಭಾರತೀಯ ನಾಯಕರು ಯಾವುದೇ ರಾಜ್ಯಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು, ಆ ರೀತಿ ನಿಯಮಿತವಾಗಿ ಅರುಣಾಚಲ ಪ್ರದೇಶದ ಪ್ರವಾಸಕ್ಕೂ ಹೋಗುತ್ತಾರೆ. ಭಾರತೀಯ ನಾಯಕರು ಭಾರತದ ಒಂದು ರಾಜ್ಯದಲ್ಲಿ ಪ್ರವಾಸ ಮಾಡುವುದನ್ನು ಚೀನಾ ವಿರೋಧಿಸುವುದು, ಇದು ಗ್ರಹಿಕೆಗೆ ನಿಲುಕದ ವಿಚಾರವಾಗಿದೆ’, ಎಂದು ಭಾರತವು ಹೇಳಿದೆ.

ಟಿಬೆಟ್‌ನ ಧರ್ಮ ಗುರು ದಲಾಯೀ ಲಾಮಾ ಇವರನ್ನು ಹೊರತುಪಡಿಸಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಹ ಮತ್ತು ೨೦೧೪ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸಹ ಅರುಣಾಚಲ ಪ್ರದೇಶದ ಪ್ರವಾಸ ಮಾಡಿದ್ದರು ಮತ್ತು ಚೀನಾ ಆಗಲೂ ಸಹ ಈ ಪ್ರವಾಸವನ್ನು ವಿರೋಧಿಸುವ ಹೇಳಿಕೆಯನ್ನು ನೀಡಿತ್ತು.