ಗುರುಗಳಿಲ್ಲದ ಜನ್ಮವೇ ವ್ಯರ್ಥ
ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ- ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !
ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ- ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !
ಪರಾತ್ಪರ ಗುರುದೇವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಾಧಕರ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೆಯೇ ಅವರು ಮಾಡುತ್ತಿರುವ ಸೇವೆ ಅಥವಾ ಕೃತಿಗಳನ್ನೂ ಹೆಚ್ಚೆಚ್ಚು ಸಾತ್ತ್ವಿಕ ಮತ್ತು ಪರಿಪೂರ್ಣ ಮಾಡುವ ಮಾರ್ಗವನ್ನು ಅವರು ಅವರಿಗೆ ತೋರಿಸುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ವಿವಿಧ ಸೇವೆಗಳಿಗೆ ದಿಶೆ ಸಿಕ್ಕಿತು ಮತ್ತು ಸಮಷ್ಟಿಗೆ ಅದರಿಂದ ಲಾಭವಾಯಿತು.
‘ಮಹರ್ಷಿಗಳು ನಾಡಿಭವಿಷ್ಯದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀವಿಷ್ಣುವಿನ ಅವತಾರವಾಗಿದ್ದಾರೆ, ಎಂದು ಹೇಳಿದ್ದಾರೆ. ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರ ದಿವ್ಯತ್ವದ ಪರಿಚಯವನ್ನು ಸಾಧಕರಿಗೆ ಮಾಡಿಕೊಟ್ಟರು. ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯ ವರು ‘ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ.
‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ, ಮೊದಲಿಗೆ ಸಾಧನೆ ಪ್ರಾರಂಭಿಸಿ.
‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ.
‘ಸನಾತನ ಸಂಸ್ಕೃತಿಗೆ ಲಭಿಸಿದ ಗೌರವಶಾಲಿ ಗುರುಪರಂಪರೆಯನ್ನು ಕೃತಜ್ಞತಾಪೂರ್ವಕ ಸ್ಮರಿಸುವ ದಿನ ಎಂದರೆ ಗುರುಪೂರ್ಣಿಮೆ. ಸಮಾಜಕ್ಕೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಗುರುಗಳ ಕಾರ್ಯವಾಗಿದೆ, ಅದೇ ರೀತಿ ಸಮಾಜಕ್ಕೆ ಕಾಲಾನುಸಾರ ಮಾರ್ಗದರ್ಶನ ಮಾಡುವುದೂ ಗುರುಪರಂಪರೆಯ ಕಾರ್ಯವಾಗಿದೆ. ಪ್ರಸ್ತುತ ಭಾರತ ಸಹಿತ ಸಂಪೂರ್ಣ ಪೃಥ್ವಿ ಸಂಕಟಕಾಲವನ್ನು ಎದುರಿಸುತ್ತಿದೆ.
ಶಿಷ್ಯನ ಜೀವನದ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತ ಮೇಲಿನ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುಗಳೇ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಪ್ರತ್ಯಕ್ಷ ಸಾಧನೆಯನ್ನು ಕಲಿಸುತ್ತಾರೆ.