ಶ್ರೀ ದತ್ತ ಜಯಂತಿ (ಡಿಸೆಂಬರ್ ೨೯)
‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪ ದಲ್ಲಿ ಅಸುರೀ ಶಕ್ತಿಗಳು ಪ್ರಾಬಲ್ಯ ಬಹಳ ಹೆಚ್ಚಾಗಿತ್ತು. ಅವರನ್ನು ದೈತ್ಯ ರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನ ಗಳೆಲ್ಲವೂ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ದತ್ತನು ಅವತಾರ ತಾಳಬೇಕಾಯಿತು. ಆನಂತರ ದೈತ್ಯರು ನಾಶವಾದರು. ದತ್ತನು ಅವತಾರ ತಾಳಿದ ದಿನವನ್ನು ‘ದತ್ತಜಯಂತಿಯೆಂದು ಆಚರಿಸಲಾಗುತ್ತದೆ.