
ನರಕ ಚತುರ್ದಶಿಯಂದು ಶ್ರೀವಿಷ್ಣುವು ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಬಲಿ ಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ. ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮೀಯ ಪೂಜೆ ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವೆಡೆ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿ ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿ ಕುಬೇರನ ಪ್ರತಿಮೆ ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯ ಅರ್ಪಿಸುತ್ತಾರೆ.
ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್ ೨೩)
ಬಲಿಪಾಡ್ಯ (ಅಕ್ಟೋಬರ್ ೨೨)
ದೀಪಾವಳಿಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸಬೇಕು ?
ಸನಾತನ-ನಿರ್ಮಿತ ಶ್ರೀ ಲಕ್ಷ್ಮಿದೇವಿಯ ಸಾತ್ತ್ವಿಕ ಚಿತ್ರದ ವೈಶಿಷ್ಟ್ಯ
ದೀಪಜ್ಯೋತಿ ನಮೋಸ್ತುತೆ !
ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಕ್ಕೆ ‘ಸತ್ಪಾತ್ರೆ ದಾನ’ ಮಾಡಿ ಮತ್ತು ಶ್ರೀ ಲಕ್ಷ್ಮೀ ದೇವಿಯ ಕೃಪೆ ಸಂಪಾದಿಸಿ !