ಜಿಹಾದಿ ಶರ್ಜಿಲ್ ಉಸ್ಮನಿ ಯಿಂದ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಾ ಹಿಂದುತ್ವನಿಷ್ಠರ ಕುರಿತು ಟೀಕೆ

ಈ ಹಿಂದೆ ಹಿಂದುಗಳನ್ನು ಭಯೋತ್ಪಾದಕರೆಂದು ಸಂಭೋಧನೆ !

ಅಲಿಗಡ (ಉತ್ತರಪ್ರದೇಶ) – ಹಿಂದೂ ಧರ್ಮ ಮತ್ತು ಭಾರತದ ವಿರುದ್ಧ ನಿರಂತರ ವಿಷಕಾರುವ ಅಲಿಗಡ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶರ್ಜಿಲ್ ಉಸ್ಮನಿಯು ಈಗ ಇಸ್ರೇಲ್ ಮತ್ತು ಹಮಾಸ್ ಇವರ ಯುದ್ಧದಲ್ಲಿ ಹಮಾಸಅನ್ನು ಬೆಂಬಲಿಸಿದ್ದಾನೆ. ಅವನು ಟ್ವೀಟ್ ಮೂಲಕ, ಭಾರತದಲ್ಲಿನ ಹಿಂದುತ್ವನಿಷ್ಠರನ್ನು ಕೂಡ ಟಿಕಿಸಿದ್ದಾನೆ. ಅವನು ಟ್ವೀಟಿನಲ್ಲಿ, ಭಾರತದಲ್ಲಿನ ಹಿಂದುತ್ವನಿಷ್ಠರು ಇಸ್ರಾಯಿಲಿನ ಜೈಕಾರ ಮಾಡುತ್ತಿದ್ದಾರೆ, ಇದು ಆಶ್ಚರ್ಯವೇನು ಅಲ್ಲ; ಕಾರಣ ಭಾರತದಲ್ಲಿನ ಮುಸಲ್ಮಾನರು ಯಾರನ್ನು ಬೆಂಬಲಿಸುತ್ತಾರೆ ಇದರ ಮೇಲೆ ಅವರ ಸಂಪೂರ್ಣ ಅಸ್ತಿತ್ವ ನಿಶ್ಚಿತವಾಗಿರುತ್ತದೆ. ಭಾರತದಲ್ಲಿನ ಮುಸಲ್ಮಾನರು ಪ್ಯಾಲೆಸಟೈನಿನ್ ಅನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾನೆ.

೧. ಇಸ್ರೈಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಲ್ಲಿ ಭಾರತ ಇಸ್ರೈಲ್ಅನ್ನು ಬೆಂಬಲಿಸಿದೆ. ಪ್ರಧಾನಿ ಮೋದಿ ಇವರು ಹಮಾಸ್ ನ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಾ ಭಾರತ ಇಸ್ರೈಲ್ ನ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದ್ದಾನೆ.

೨. ಶರ್ಜಿಲ್ ಉಸ್ಮನಿ ಇವನು ೨೦೨೧ ಭಗವಾನ್ ಶ್ರೀರಾಮನ ಕುರಿತು ಟ್ವೀಟ್ ಮಾಡುವಾಗ ‘ಜೈ ಶ್ರೀರಾಮ ಎನ್ನುವವರೆಲ್ಲರೂ ಹಿಂದೂ ಭಯೋತ್ಪಾದಕರಾಗಿದ್ದಾರೆ’, ಎಂದು ಹೇಳಿದ್ದನು. ಇದರಿಂದ ಅವನ ವಿರುದ್ಧ ದೂರು ದಾಖಲಿಸಿದ ನಂತರ ಅವನನ್ನು ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಹಿಂದೂದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಹೇಳಿಕೆಯ ಪುನರಾವರ್ತನೆಯಾಗುತ್ತದೆ. ಇದರ ಕಡೆಗೆ ಉತ್ತರ ಪ್ರದೇಶ ಸರಕಾರ ಗಮನಹರಿಸಬೇಕು !