ಗರ್ಬಾ ನಡೆಯುವ ಸ್ಥಳಕ್ಕೆ ಯಾವ ಮುಸ್ಲೀಮರೂ ಪ್ರವೇಶಿಸಬಾರದು ! – ವಿಹಿಂಪ ಮತ್ತು ಬಜರಂಗದಳದಿಂದ ಗಾರ್ಬಾ ಆಯೋಜಕರಿಗೆ ಸೂಚನೆ

  • ವಿಹಿಂಪ ಮತ್ತು ಬಜರಂಗದಳದಿಂದ ಗುಜರಾತ್‌ನ ಎಲ್ಲಾ ಗಾರ್ಬಾ ಆಯೋಜಕರಿಗೆ ಸೂಚನೆ !

  • ಗರ್ಬಾದಲ್ಲಿ ಭಾಗವಹಿಸುವ ಯುವಕರು ತಿಲ ಹಾಕಬೇಕು, ಗೋಮೂತ್ರ ಸಿಂಪಡಿಸುವುದು, ಕೈಗೆ ದಾರ ಕಟ್ಟಿಕೊಳ್ಳಬೇಕು !

ಕರ್ಣಾವತಿ (ಗುಜರಾತ್) – ‘ಗರಬಾ’ದ ಮೂಲಕ ದೇವಿಯನ್ನು ಪೂಜಿಸಲು ಅವಕಾಶವಿರುತ್ತದೆ. ಕೆಲವು ‘ಜಿಹಾದಿಗಳು’ ಇಂತಹ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನಾನು ಗರಬಾದ ಎಲ್ಲಾ ಆಯೋಜಕರಿಗೆ, ಪೆಂಡಾಲ್ ಗಳು, ಆಹಾರ ವ್ಯವಸ್ಥೆ ಮಾಡುವವರು ಮತ್ತು ಭದ್ರತಾ ವ್ಯವಸ್ಥೆಯವರು ಯಾವುದೇ ಸದಸ್ಯರು ಮುಸ್ಲಿಮರಾಗಬಾರದು ಎಂದು ಮನವಿ ಮಾಡುತ್ತೇನೆ. ಅಲ್ಲದೆ, ‘ಆ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಪಡೆದ ನಂತರ ಗರಬಾ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ಸೂಚಿಸಿದ್ದಾರೆ. ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ, ಅನೇಕ ಮುಸ್ಲಿಮರು ಗರಬಾ ಆಡುವ ಕಾರ್ಯಕ್ರಮಗಳಿಗೆ ನುಸುಳುತ್ತಾರೆ ಮತ್ತು ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ‘ಲವ್ ಜಿಹಾದ್’ ಪಿತೂರಿಗಳಿಗೆ ಸೆಳೆಯಲು ಪ್ರಯತ್ನಿಸುತ್ತಾರೆ.

1. ಈ ಬಾರಿಯೂ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಹಿಂದುತ್ವನಿಷ್ಟರು ಗರಬಾ ಕಾರ್ಯಕ್ರಮಗಳ ಸ್ಥಳಗಳಲ್ಲಿ ಹಾಜರಿದ್ದು, ‘ಮುಸ್ಲಿಂ ಯುವಕರು ಪ್ರವೇಶ ಮಾಡಬಾರದು’ ಎಂದು ನಿಗಾ ಇಡಲಿದ್ದಾರೆ.

2. ಇದರೊಂದಿಗೆ ಗರಬಾದಲ್ಲಿ ಪಾಲ್ಗೊಳ್ಳುವ ಯುವಕರಿಗೆ ತಿಲವನ್ನು ಹಾಕಿ, ಅವರ ಮೇಲೆ ಗೋಮೂತ್ರ ಸಿಂಪಡಿಸಿ, ಕೈಗೆ ಕೆಂಪು ದಾರವನ್ನು ಕಟ್ಟಲಾಗುವುದು. ಯಾರಾದರೂ ಸರಾಯಿ ಕುಡಿದು ಬಂದರೆ ಅವರಿಗೂ ಅನುಮತಿ ನಿರಾಕರಿಸಲಾಗುವುದು.

3. 2015 ರಿಂದ, ‘ತಪ್ಪಾದ ಉದ್ದೇಶದಿಂದ ಕಾರ್ಯಕ್ರಮಕ್ಕೆ ನುಸುಳುವವರನ್ನು ತಡೆಯಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜೈನ್ ಹೇಳಿದರು.

4. ಕಳೆದ ಕೆಲವು ವರ್ಷಗಳಲ್ಲಿ, ವಿಹಿಂಪ ಮತ್ತು ಬಜರಂಗದಳವು ಗುಜರಾತ್ ರಾಜ್ಯದಲ್ಲಿ 16 ಜಾಗರಣ ಯಾತ್ರೆಗಳನ್ನು ನಡೆಸಿತು, 1 ಸಾವಿರದ 100 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿತು ಮತ್ತು 18 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ‘ತ್ರಿಶೂಲ್ ದೀಕ್ಷೆ’ ನೀಡಿತು. ಈ ಮಾಧ್ಯಮಗಳ ಮೂಲಕ ಹಿಂದೂ ಯುವಕರು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಈ ಅಭಿಯಾನದ ಮೂಲಕ 7 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿದೆ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ತಮ್ಮ ಹಬ್ಬ ಹರಿದಿನಗಳಲ್ಲಿನ ಜಿಹಾದಿಗಳ ಕರಿ ನೆರಳಿನಿಂದ ಪಾರಾಗಲು ಈ ರೀತಿಯ ಪರಿಹಾರ ಅವಲಂಬಿಸಬೇಕಾಗಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಹಿಂದೂಗಳ ಕಾರ್ಯಕ್ರಮಗಳಲ್ಲಿ ಇತರ ಧರ್ಮದವರು ಬರಲು ಧೈರ್ಯ ಬಾರದಂತೆ ಹಿಂದೂಗಳು ಅಭೇದ್ಯವಾದ ಸಂಘಟನೆ ಮತ್ತು ಪ್ರಾಬಲ್ಯವನ್ನು ರಚಿಸುವುದು ಅವಶ್ಯಕ !