ಪ್ರಯಾಗರಾಜ (ಉತ್ತರಪ್ರದೇಶ) – ‘ಸಪ್ತಪದಿ’ ಮತ್ತು ಇತರ ವಿಧಿಗಳು ನಡೆಯದೆ ಹಿಂದೂ ವಿವಾಹ ಕಾನೂನು ರೀತಿ ಸಮ್ಮತವಿಲ್ಲ, ಎಂದು ಮಹತ್ವಪೂರ್ಣ ನಿರೀಕ್ಷಣೆಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ನಮೂದಿಸಿದೆ. ಒಂದು ಕೌಟುಂಬಿಕ ಪ್ರಕರಣದ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕುಮಾರ ಸಿಂಹ ಇವರು ಈ ನಿರೀಕ್ಷೆಣೆ ನಮೂದಿಸಿದರು. ಉಚ್ಚ ನ್ಯಾಯಾಲಯದಿಂದ ಒಂದು ಪ್ರಕರಣದ ಸಂಪೂರ್ಣ ಪ್ರಕ್ರಿಯೆ ರದ್ದುಪಡಿಸಿತು. ಇದರಲ್ಲಿ ಓರ್ವ ಪತಿಯಿಂದ ವಿಚ್ಛೇದನ ಪಡೆಯದೆ ಅವನ ಪತ್ನಿಯು ಪುನರ್ವಿವಾಹ ಮಾಡಿಕೊಂಡಿದ್ದಳು’, ಎಂದು ಆರೋಪಿಸಿದ್ದನು.
೧. ಅರ್ಜಿದಾರ ಸ್ಮೃತಿ ಸಿಂಹ ಇವರು ೨೦೧೭ ರಲ್ಲಿ ಸತ್ಯಂ ಸಿಂಹ ಇವರೊಂದಿಗೆ ವಿವಾಹವಾಗಿತ್ತು. ವಿವಾಹದ ನಂತರ ಕೆಲವು ಕಾಲದಲ್ಲಿಯೇ ಸ್ಮೃತಿ ಇವರು ‘ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸುತ್ತಾ ಪೊಲೀಸರಿಗೆ ದೂರು ನೀಡಿದರು ಮತ್ತು ಪತಿಯ ಮನೆ ಬಿಟ್ಟು ಹೊರಟು ಹೋದರು. ವಿಚಾರಣೆಯ ನಂತರ ಪೊಲೀಸರು ಪತಿ ಮತ್ತು ಅತ್ತೆಯ ಮನೆಯ ಜನರ ವಿರುದ್ಧ ದೂರು ದಾಖಲಿಸಿದರು.
೨. ಜನವರಿ ೨೦೨೧ ರಲ್ಲಿ ಮಿರ್ಜಾಪುರ ಕೌಟುಂಬಿಕ ನ್ಯಾಯಾಲಯವು ಜೀವನಾಂಶವೆಂದು ಪ್ರತಿ ತಿಂಗಳು ೪ ಸಾವಿರ ರೂಪಾಯಿ ಸತ್ಯಂ ಇವರು ಸ್ಮೃತಿ ಇವರಿಗೆ ನೀಡಲು ಆದೇಶಿಸಿತು. ‘ಪತ್ನಿಯು ಎರಡನೆಯ ವಿವಾಹ ಮಾಡಿಕೊಳ್ಳುವವರೆಗೆ ಈ ಹಣ ನೀಡಬೇಕೆಂದು ನ್ಯಾಯಾಲಯ ಹೇಳಿತ್ತು.
೩. ಸತ್ಯಂ ಇವರು ಸ್ಮೃತಿ ಇವರು ಎರಡನೇ ವಿವಾಹ ಮಾಡಿಕೊಂಡಿದ್ದಾರೆ’, ಎಂದು ಆರೋಪಿಸುತ್ತಾ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಹೋದರು.
೪. ಸಪ್ಟೆಂಬರ್ ೨೦೨೧ ರಲ್ಲಿ ಕಿರಿಯ ನ್ಯಾಯಾಲಯದಿಂದ ಸ್ಮೃತಿ ಇವರಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ಹಾಜರಿರಲು ಹೇಳಲಾಯಿತು. ಈ ಕ್ರಮದ ವಿರುದ್ಧ ಸ್ಮೃತಿ ಸಿಂಹ ಇವರು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.
೫. ಸ್ಮೃತಿ ಸಿಂಹ ಇವರ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸಂಜಯ ಕುಮಾರ ಸಿಂಹ ಇವರು, ವಿವಾಹದ ಸಂದರ್ಭದಲ್ಲಿ ‘ಸಮಾರಂಭ’ ಈ ಶಬ್ದದ ಅರ್ಥ ‘ಯೋಗ್ಯ ಸಮಾರಂಭ ಮತ್ತು ಯೋಗ್ಯ ಪದ್ಧತಿಯಿಂದ ವಿವಾಹ ಆಚರಣೆ ಆಗುವುದು’ ಎಂದಾಗುತ್ತದೆ. ಎಲ್ಲಿಯವರೆಗೆ ವಿವಾಹ ಯೋಗ್ಯ ಸಮಾರಂಭ ಮತ್ತು ಯೋಗ್ಯ ಪದ್ಧತಿಯಿಂದ ಆಚರಿಸಲಾಗುವುದಿಲ್ಲ ಅಥವಾ ನಡೆಯುವುದಿಲ್ಲ ಅಲ್ಲಿಯವರೆಗೆ ಅದು ಸಂಪನ್ನವಾಗಿದೆ ಎಂದು ಹೇಳಲಾಗದು. ವಿವಾಹ ಕಾನೂನ ರೀತಿ ಇಲ್ಲದಿದ್ದರೆ ಆಗ ಕಾನೂನಿನ ದೃಷ್ಟಿಯಲ್ಲಿ ಅದು ವಿವಾಹವಲ್ಲ ಎಂದು ಹೇಳಿದೆ.
‘ಸಪ್ತಪದಿಯ ಏಳನೆಯ ಹೆಜ್ಜೆ ಎತ್ತಿದ ನಂತರ ವಿವಾಹ ಸಂಪನ್ನವಾಗುತ್ತದೆ’, ಎಂದು ಹೇಳುತ್ತಾ ನ್ಯಾಯಾಲಯವು ಪತಿಯ ಆರೋಪದಲ್ಲಿ ಸತ್ಯ ಇಲ್ಲದಿರುವುದು ಸ್ಪಷ್ಟ ಪಡಿಸಿತು.
Hindu marriage is not solemnised without the ‘Saptapadi’ (Saat Phere) ritual, such marriages not legally valid: Allahabad High Courthttps://t.co/xUV32D6AKJ
— OpIndia.com (@OpIndia_com) October 5, 2023