ಹಿಂದೂ ಧರ್ಮದ ಬಗ್ಗೆ ದ್ವೇಷದ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು !

ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ಎ. ರಾಜಾ, ನಿಖಿಲ್ ವಾಗಳೆ ಮತ್ತು ಜಿತೇಂದ್ರ ಆಹ್ವಾಡ್ ವಿರುದ್ಧ ‘ಹೇಟ್ ಸ್ಪೀಚ್’ದ ಪ್ರಕರಣ ದಾಖಲಿಸಿ !

ಮುಂಬಯಿ – ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕರೋನಾ, ಏಡ್ಸ್, ಕುಷ್ಠರೋಗ ಮುಂತಾದ ಕಾಯಿಲೆಗಳೊಂದಿಗೆ ಹೋಲಿಸಿ ನಾಶ ಮಾಡುವ ಬಗ್ಗೆ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ತಮಿಳುನಾಡು ಡಿಎಂಕೆ ಸಂಸದ ಎ. ರಾಜಾ, ಎನ್‌ಸಿಪಿ ಶಾಸಕ ಜಿತೇಂದ್ರ ಆಹ್ವಾಡ್ ಮತ್ತು ಫೇಸ್‌ಬುಕ್‌ನಲ್ಲಿ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬೆಂಬಲಿಸಿದ ಪತ್ರಕರ್ತ ನಿಖಿಲ್ ವಾಗಳೆಯ ವಿರುದ್ಧ ‘ಹೇಟ್ ಸ್ಪೀಚ್’ ಪ್ರಕರಣ ದಾಖಲಿಸಿ ಎಂದು ಹಿಂದುತ್ವನಿಷ್ಠರು ಆಗ್ರಹಿಸಿದ್ದಾರೆ. ಅಕ್ಟೋಬರ್ 2 ರಂದು ಹಿಂದುತ್ವನಿಷ್ಠರು ದಾದರನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎನ್‌ಸಿಪಿ ಶಾಸಕ ಜಿತೇಂದ್ರ ಆಹ್ವಾಡ್ ಕೂಡ ‘ಸನಾತನ ಧರ್ಮ ದೇಶಕ್ಕೆ ಪಿಡುಗು’ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ಧರ್ಮದ ಬಗ್ಗೆ ಅಸಭ್ಯ, ನಿಂದನೆ, ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಭಾ.ದಂ.ಸಂ ಕಲಂ 153 (ಅ), 153 (ಬ), 295(ಅ), 298, 505 ಮತ್ತು ಐಟಿ ಕಾಯ್ದೆಯಡಿ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದೂ ಧರ್ಮದ ಬಗ್ಗೆ ದ್ವೇಷದ ಹೇಳಿಕೆ ನೀಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಘಟನೆಯ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಭರವಸೆ ನೀಡಿದ್ದಾರೆ.

ಸ್ವಂತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿಂದ ಸರಕಾರಕ್ಕೆ ಸೂಚನೆ !

‘ಹೇಟ್ ಸ್ಪೀಚ್’ ಕುರಿತ ಸುಪ್ತಿಂ ಕೋರ್ಟ್ ನಲ್ಲಿ ನಡೆಯುತ್ತಿರುವ ಸಾರ್ವಜನಿಕಿ ಹಿತಾಸಕ್ತಿಯ ಕುರಿತು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಇವರು ಎಪ್ರಿಲ್ 28 ರಂದು ಸಮಾಜದಲ್ಲಿ ದ್ವೇಷದ ಹೇಳಿಕೆ ನೀಡಿ ಸಮಾಜದಲ್ಲಿ ದ್ವೇಷ ಹರಡುವವರ ವಿರುದ್ಧ ದೂರು ದಾಖಲಿಸುವುದನ್ನು ಕಾಯದೇ ಸರಕಾರವೇ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು. ಒಂದು ವೇಳೆ ವಿಳಂಬ ಮಾಡಿದರೆ ಅದನ್ನು ಸುಪ್ರೀಂ ಕೋರ್ಟ್ ನಿಂದನೆ ಎಂದು ಪರಿಗಣಿಸಲಾಗುವುದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದರು. ಹೀಗಿದ್ದರೂ ಸನಾತನ ಧರ್ಮದ ಬಗ್ಗೆ ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹಿಂದೂಗಳು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ನಿಂದನೆ ಅರ್ಜಿಯನ್ನು ಸಲ್ಲಿಸಲಾಗುವುದು !

ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುವುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉದಯನಿಧಿ ಸ್ಟಾಲಿನ್ ನಿಂದ ದ್ವೇಷದ ಹೇಳಿಕೆ !

ಚೆನ್ನೈನ ಕಾಮರಾಜ್ ಮೈದಾನದಲ್ಲಿ ನಡೆದ ‘ಭಾರತೀಯ ಮುಕ್ತಿ ಸಂಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ’ ಕುರಿತ ವ್ಯಂಗ್ಯಚಿತ್ರಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡಿ, ‘ಕೆಲವು ವಿಷಯಗಳನ್ನು ಕೇವಲ ವಿರೋಧಿಸುವುದು ಸಾಧ್ಯವಿಲ್ಲ, ಬದಲಾಗಿ ಬೇರು ಸಹಿತ ನಿರ್ಮೂಲನೆ ಮಾಡಬೇಕು. ಡೆಂಗ್ಯೂ ಸೊಳ್ಳೆ, ಮಲೇರಿಯಾ, ಕರೋನಾ, ಜ್ವರ ಮುಂತಾದವುಗಳನ್ನು ವಿರೋಧಿಸುವುದರಿಂದ ಮಾತ್ರ ಹೊರಬರಲು ಸಾಧ್ಯವಿಲ್ಲ. ಅವುಗಳನ್ನು ನಾಶಪಡಿಸಬೇಕು. ಹಾಗೆಯೇ ಸನಾತನವನ್ನೂ (ಧರ್ಮ) ನಾಶ ಮಾಡಬೇಕು ಎಂದು ಹೇಳಿದ್ದರು.