(ಸೌಜನ್ಯ: BCCL)
ನವದೆಹಲಿ – ‘ಲೋಕಲ್ ಸರ್ಕಲ್’ ಎಂಬ ಸಾಮಾಜಿಕ ಮಾಧ್ಯಮ ಗುಂಪು ನಡೆಸಿದ ಸಮೀಕ್ಷೆಯಲ್ಲಿ ‘ದೇಶದಲ್ಲಿ ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿಲ್ಲ’ ಎಂದು ತಿಳಿದುಬಂದಿದೆ. ಈ ಗುಂಪು ದೇಶದ 341 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದೆ. ಇದರಲ್ಲಿ 39 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. 9 ವರ್ಷಗಳ ಹಿಂದೆ, ಗಾಂಧಿ ಜಯಂತಿಯಂದು ದೇಶದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಪ್ರಾರಂಭಿಸಲಾಯಿತು; ಆದರೆ, ಮೇಲಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂಬುದು ಬೆಳಕಿಗೆಬಂದಿದೆ.
ಸಮೀಕ್ಷೆಯಲ್ಲಿ ಜನರು ಹೇಳಿದ ಅಂಶಗಳು
1. ನಗರ ಅಥವಾ ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಾಗಿದೆ ಎಂದು ಶೇ. 42ರಷ್ಟು ಜನರು ಹೇಳಿದ್ದಾರೆ; ಆದರೆ ಶೇ.52ರಷ್ಟು ಜನರು ಸ್ಥಿತಿ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 37ರಷ್ಟು ಜನರು ಸಾರ್ವಜನಿಕ ಶೌಚಾಲಯಗಳನ್ನು ಸರಾಸರಿ ಅಥವಾ ಸೇವೆಗೆ ಅರ್ಹವೆಂದು ಅಭಿಪ್ರಾಯ ಪಟ್ಟಿದ್ದಾರೆ, ಶೇ. 25ರಷ್ಟು ಜನರು ಸರಾಸರಿಗಿಂತ ಕೆಟ್ಟದಾಗಿದೆ ಎಂದು ಹೇಳಿದ್ದಾರೆ, ಶೇ. 16ರಷ್ಟು ಜನರು ಅದು ಭಯಾನಕವೆಂದು ಹೇಳಿದ್ದಾರೆ ಮತ್ತು ಶೇ. 12ರಷ್ಟು ಜನರು, ಅವುಗಳನ್ನು ಬಳಸುವುದನ್ನೇ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
3. ಹೆಚ್ಚಿನ ಜನರು ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ಬದಲು ವಾಣಿಜ್ಯ ಸಂಸ್ಥೆಗಳಿಗೆ ಹೋಗಿ ಅಲ್ಲಿನ ಶೌಚಾಲಯವನ್ನು ಬಳಸಲು ಆದ್ಯತೆ ನೀಡುತ್ತಾರೆ ಎಂದು ಹೇಳಿದರು.
4. ದೆಹಲಿ, ಮುಂಬಯಿ ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ‘ಸುಲಭ ಶೌಚಾಲಯ’ ನಂತಹ ಪ್ರತಿಷ್ಠಿತ ಸಂಸ್ಥೆಯು ನಿರ್ವಹಿಸದಿದ್ದರೆ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ದುಃಸ್ವಪ್ನವಾಗಿದೆ ಎಂದು ಸಮೀಕ್ಷೆಯು ಅಭಿಪ್ರಾಯಪಟ್ಟಿದೆ.
A new survey shows that most Indians feel that there has been no improvement in the state of public toilets across the country.#SwachhBharatMission #survey https://t.co/qcUzwsyx9M
— Business Standard (@bsindia) October 2, 2023
ಸಂಪಾದಕೀಯ ನಿಲುವು
|