(‘ಹಲಾಲ್’ ಎಂದರೆ ಇಸ್ಲಾಂಗನುಸಾರ ಮಾನ್ಯವಾದದ್ದು !)
೧. ಹಲಾಲ್ ಪ್ರಮಾಣಪತ್ರ ಎಂದರೇನು ?
ಇಂದಿಗೂ ಅನೇಕ ಜನರ ಮನಸ್ಸಿನಲ್ಲಿ ‘ಹಲಾಲ್’ ಈ ಶಬ್ದವು ಮಾಂಸಕ್ಕೆ ಮಾತ್ರ ಸೀಮಿತವಾಗಿದೆ ಎಂಬ ತಪ್ಪು ಕಲ್ಪನೆ ಹಾಗೆಯೇ ಇದೆ. ಪ್ರತ್ಯಕ್ಷದಲ್ಲಿ ಕೇವಲ ಮಾಂಸಕ್ಕೆ ಸೀಮಿತವಾಗಿರುವ ಮೂಲ ‘ಹಲಾಲ್’ನ ಇಸ್ಲಾಮಿನ ಸಂಕಲ್ಪನೆ ಇಂದು ಸಸ್ಯಾಹಾರಿ ಆಹಾರ, ಔಷಧಿಗಳು, ಆಸ್ಪತ್ರೆಗಳು, ಕಟ್ಟಡಗಳು, ಉಪಹಾರಗೃಹಗಳು, ಪ್ರವಾಸೋದ್ಯಮ, ಜಾಲತಾಣಗಳು ಮುಂತಾದ ಪ್ರತಿಯೊಂದು ಕ್ಷೇತ್ರಗಳಿಗೂ ಅನ್ವಯಿಸಲಾಗಿದೆ. ಇಂದು, ‘ಮೆಕ್‌ಡೊನಾಲ್ಡ್’, ‘ಕೀಫ್‌ಸಿ’, ‘ಬರ್ಗರ್‌ಕಿಂಗ್’ನಂತಹ ವಿದೇಶಿ ಸಂಸ್ಥೆಗಳು ಮಾತ್ರವಲ್ಲ, ಹಲ್ದಿರಾಮ್, ಬಿಕಾನೊಗಳಂತಹ ಭಾರತೀಯ ಸಸ್ಯಾಹಾರಿ ಸಂಸ್ಥೆಗಳು ಹಲಾಲ್ ಪ್ರಮಾಣೀಕೃತ ಆಹಾರವನ್ನು ಎಲ್ಲಾ ಗ್ರಾಹಕರಿಗೆ ಮಾರಾಟ ಮಾಡುತ್ತಿವೆ. ಹಲಾಲ್ ಉತ್ಪನ್ನಗಳಿಗೆ ಮುಸ್ಲಿಮರಿಂದ ಮಾತ್ರ ಬೇಡಿಕೆ ಇದ್ದರೂ, ಬಹುಸಂಖ್ಯಾತ ಹಿಂದೂಗಳು, ಸಿಕ್ಖ್‌ರು, ಜೈನರು, ಬೌದ್ಧರು, ಕ್ರೈಸ್ತರು ಮುಂತಾದ ಅನ್ಯ ಪಂಥದವರ ಮೇಲೆ ಹೇರಲಾಗುತ್ತಿದೆ. ‘ಭಾರತದ ಹೊರಗೆ ಮುಸ್ಲಿಂ ದೇಶಗಳಲ್ಲಿ ಯಾವುದೇ ಆಹಾರ ರಫ್ತು ಮಾಡುವುದಿದ್ದರೆ ಅಥವಾ ಅದನ್ನು ಮುಸ್ಲಿಂ ಗ್ರಾಹಕರು ಖರೀದಿಸುವುದಿದ್ದರೆ, ಅದರ ಮೇಲೆ ‘ಹಲಾಲ್ ಪ್ರಮಾಣೀಕೃತ’ ಇರುವ ಬೋಧಚಿಹ್ನೆ (ಲೋಗೋ) ಮುದ್ರಿತವಿರಬೇಕು’, ಎಂದು ಮುಸ್ಲಿಂ ದೇಶಗಳ ಜಾಗತಿಕ ಸಂಘಟನೆಯು ಒತ್ತಾಯಿಸಿದೆ. ಈ ಹಲಾಲ್ ಪ್ರಮಾಣಪತ್ರವನ್ನು ‘ಜಮೀಯತ್-ಉಲೇಮಾ-ಎ-ಹಿಂದ್’, ‘ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’, ‘ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ’ ಇವುಗಳಂತಹ ಇಸ್ಲಾಮಿಕ್ ಸಂಸ್ಥೆಗಳು ಮಾತ್ರ ನೀಡಬಹುದು. ಹಾಗಾಗಿ ಉತ್ಪನ್ನವೊಂದಕ್ಕೆ ‘ಹಲಾಲ್ ಪ್ರಮಾಣಪತ್ರ’ ಪಡೆಯಲು ಈ ‘ಹಲಾಲ್ ಪ್ರಮಾಣಪತ್ರ’ ನೀಡುವ ಇಸ್ಲಾಮಿಕ್ ಸಂಸ್ಥೆಗಳಿಗೆ ಅನಾವಶ್ಯಕವಾಗಿ ಸಾವಿರಾರು ರೂಪಾಯಿಗಳನ್ನು ನೀಡಬೇಕಾಗುತ್ತದೆ. ಹಲಾಲ್‌ನ ಹೊಸ ನಿಯಮಗಳ ಪ್ರಕಾರ, ‘ಹಲಾಲ್ ಪ್ರಮಾಣಪತ್ರ’ ಪಡೆಯುವವರು ತಮ್ಮ ಕಂಪನಿಯಲ್ಲಿ ಇಬ್ಬರು ಮುಸಲ್ಮಾನರನ್ನು ‘ಹಲಾಲ್ ನಿರೀಕ್ಷಕರು’ (ಹಲಾಲ್ ಇನ್ಸಪೆಕ್ಟರ್) ಎಂದು ವೇತನ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ.ಇವೆಲ್ಲವುಗಳಿಂದ ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಹಿಂದೂ, ಜೈನ, ಸಿಕ್ಖ್, ಕ್ರೈಸ್ತ ಮೊದಲಾದ ಮುಸ್ಲಿಮೇತರ ವ್ಯಾಪಾರಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸ ಲಾಗುತ್ತಿದೆ ಮತ್ತು ಅದರ ಆಧಾರದಲ್ಲಿ ಜಗತ್ತಿನಾದ್ಯಂತ ‘ಹಲಾಲ್ ಅರ್ಥವ್ಯವಸ್ಥೆ’ಯನ್ನು ನಿರ್ಮಿಸಲಾಗುತ್ತಿದೆ.
ಭಾರತ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್.ಎಸ್.ಎಸ್.ಎ.ಐ.) ಮತ್ತು ‘ಆಹಾರ ಮತ್ತು ಔಷಧ ಆಡಳಿತ (ಎಫ್.ಡಿ.ಎ.) ನಂತಹ ಆಹಾರ ಪ್ರಮಾಣೀಕರಣ ಸಂಸ್ಥೆಗಳಿರುವಾಗಲೂ ಹಲಾಲ್ ಹೆಸರಿನಲ್ಲಿ ಇಸ್ಲಾಂ ಆಧಾರಿತ ಸಮನಾಂತರ ಆರ್ಥಿಕತೆಯನ್ನು ನಿರ್ಮಿಸಲಾಗುತ್ತಿದೆ. ಈ ಅರ್ಥವ್ಯವಸ್ಥೆಯಿಂದ ಸಂಗ್ರಹವಾಗುವ ಹಣವನ್ನು ಜಿಹಾದಿ ಭಯೋತ್ಪಾದಕರಿಗೆ ಕಾನೂನು ನೆರವು ನೀಡಲು ಬಳಸ ಲಾಗುತ್ತಿದೆ. ಭಾರತದಲ್ಲಿ ನೂರಾರು ಭಯೋತ್ಪಾದಕರ ಪ್ರಕರಣ ಗಳಲ್ಲಿ ಹೆಸರಾಂತ ದುಬಾರಿ ವಕೀಲರನ್ನು ನೇಮಿಸಿ ಅವರ ಶುಲ್ಕವನ್ನು ಈ ಹಲಾಲ್ ಆರ್ಥಿಕತೆಯ ಮೂಲಕ ಪಾವತಿಸ ಲಾಗುತ್ತಿದೆ. ಇದರಿಂದಾಗಿ ಭಾರತದ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ‘ಹಲಾಲ್ ಅರ್ಥವ್ಯವಸ್ಥೆ’ ಒಂದು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ.
೨. ‘ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿ’ಯ ಸ್ಥಾಪನೆ
ಭಾರತದಲ್ಲಿ ಸಂವಿಧಾನವು ಎಲ್ಲರಿಗೂ ಸ್ವಾತಂತ್ರ್ಯವನ್ನು ನೀಡಿರುವಾಗಲೂ ಹಿಂದೂಗಳ ಮೇಲೆ ನಡೆಸಲಾಗುತ್ತಿರುವ ಹಲಾಲ್ ಕಡ್ಡಾಯ ವಿರುದ್ಧ ಹಾಗೆಯೇ ಹಲಾಲ್ ಹೆಸರಿನಲ್ಲಿ ನಡೆಯುತ್ತಿರುವ ಸಮನಾಂತರ ಅರ್ಥವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ಆ ದೃಷ್ಟಿಯಿಂದ ‘ಹಲಾಲ್ ಅರ್ಥವ್ಯವಸ್ಥೆ’ ಮತ್ತು ‘ಹಲಾಲ್ ಜಿಹಾದ್’ ಸಂದರ್ಭದಲ್ಲಿ ಜನರನ್ನು ಜಾಗೃತಗೊಳಿಸಲು ಅಭಿಯಾನಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಯಿತು; ಆದರೆ ಕೇವಲ ಜನಜಾಗೃತಿ ಯಿಂದ ಮಾತ್ರ ಈ ಹಲಾಲ್ ಅರ್ಥವ್ಯವಸ್ಥೆಯ ಆಕ್ರಮಣ ನಿಲ್ಲುವುದಿಲ್ಲ. ಆದ್ದರಿಂದ ಅದನ್ನು ತಡೆಯಲು ದೇಶದಾದ್ಯಂತ ಹಿಂದುತ್ವನಿಷ್ಠರು, ಕಾನೂನುತಜ್ಞರು, ಹಾಗೆಯೇ ಸಾಮಾಜಿಕ ಕ್ಷೇತ್ರದವರು ಮತ್ತು ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ‘ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿ’ಯನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ‘ಹಲಾಲ್ ಕಡ್ಡಾಯ ವಿರೋಧಿ ಕೃತಿ ಸಮಿತಿ’ ಮೂಲಕ, ದೇಶಾದ್ಯಂತ ಹಲಾಲ್ ಅರ್ಥವ್ಯವಸ್ಥೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಈ ಆರ್ಥಿಕ ಬಿಕ್ಕಟ್ಟನ್ನು ದೂರ ಗೊಳಿಸಲು ಅನೇಕ ಚಳುವಳಿಗಳು ಮತ್ತು ಆಂದೋಲನಗಳನ್ನು ನಡೆಸಲಾಗುತ್ತಿದೆ. ‘ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿ’ಯ ಕಾರ್ಯದ ರೂಪುರೇಷೆಗಳನ್ನು ನಿರ್ಧರಿಸಲಾಯಿತು.
೩. ‘ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿ’ಯ ಕಾರ್ಯದ ದಿಶೆ !
೩ ಅ. ಹಲಾಲ್ ಪ್ರಮಾಣಪತ್ರದ ವಿರುದ್ಧ ಹಿಂದೂಗಳನ್ನು ಸಂಘಟಿಸಿ, ಹಲಾಲ್ ಅರ್ಥವ್ಯವಸ್ಥೆಯನ್ನು ವಿರೋಧಿಸುವುದು !
೩ ಆ. ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳನ್ನು ತಯಾರಿಸುವ ಕಂಪನಿಯ ಕಚೇರಿಗಳ ಗ್ರಾಹಕ ವಿ-ಅಂಚೆ ವಿಳಾಸಕ್ಕೆ ವಿ-ಅಂಚೆ ಮಾಡಿ, ದೂರವಾಣಿ ಸಂಖ್ಯೆಗೆ ದೂರವಾಣಿ ಕರೆ ಮಾಡಿ ವಿರೋಧ ವ್ಯಕ್ತಪಡಿಸುವುದು.
೩ ಇ. ಮಾರುಕಟ್ಟೆಯಲ್ಲಿ ನಿಯಮಿತವಾಗಿ ಖರೀದಿಸುವ ಹಿಂದೂ ಮಹಿಳೆಯರಲ್ಲಿ ಹಲಾಲ್ ಸಂದರ್ಭದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದು !
೩ ಈ. ವ್ಯಾಪಾರಿ ಸಂಘಟನೆಗಳು ಮತ್ತು ಉದ್ಯಮಿಗಳನ್ನು ಭೇಟಿ ಯಾಗಿ ಹಲಾಲ್ ಸಂದರ್ಭದಲ್ಲಿ ಜಾಗೃತಿ ಮೂಡಿಸುವುದು !
೩ ಉ. ರಾಜ್ಯ-ಕೇಂದ್ರ ಸರ್ಕಾರಕ್ಕೆ ಹಲಾಲ್ ಕಡ್ಡಾಯದ ವಿರುದ್ಧ ಪತ್ರ-ಮನವಿಗಳನ್ನು ಕಳುಹಿಸುವುದು !
೩ ಊ. ಮೆಕ್‌ಡೊನಾಲ್ಡ್, ಕೆ.ಎಫ್.ಸಿ., ಬರ್ಗರ್‌ಕಿಂಗ್ ಮುಂತಾದ ಉಪಹಾರಗೃಹಗಳಲ್ಲಿ ಹಲಾಲ್ ಕಡ್ಡಾಯವನ್ನು ವಿರೋಧಿಸುವುದು !
೩ ಎ. ಭಾರತದಲ್ಲಿರುವ ಅಕ್ರಮ ‘ಹಲಾಲ್ ಪ್ರಮಾಣಪತ್ರ’ ತಡೆಯಲು ಪ್ರಯತ್ನಿಸುವುದು !
೩ ಏ. ಹಿಂದೂ ದೇವತೆಗಳ ಯಾತ್ರೆಗಳಲ್ಲಿ ಹಲಾಲ್ ಉತ್ಪಾದನೆ ಗಳು, ಹಾಗೆಯೇ ಆಹಾರ ಪದಾರ್ಥಗಳನ್ನು ನಿಷೇಧಿಸಲು ಪ್ರಯತ್ನಿಸುವುದು !
೩ ಒ. ಹಲಾಲ್ ಉತ್ಪಾದನೆಗಳನ್ನು ಬಹಿಷ್ಕರಿಸಿ ‘ಹಲಾಲ್ ಮುಕ್ತ ಭಾರತ’ ಮಾಡಲು ಪ್ರಯತ್ನಿಸುವುದು !
೪. ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿಯ ಕಾರ್ಯಕ್ಕೆ ಸಮಾಜದಿಂದ ಉತ್ತಮ ಪ್ರತಿಸ್ಪಂದನ !
೪ ಅ. ಸಾರ್ವಜನಿಕ ಜಾಗೃತಿಗಾಗಿ ಉಪನ್ಯಾಸಗಳು, ಪ್ರವಚನಗಳು, ವಿಚಾರ ಸಂಕಿರಣಗಳ ಆಯೋಜನೆ : ಹಲಾಲ್ ಕಡ್ಡಾಯವಿರೋಧಿ ಕೃತಿ ಸಮಿತಿಯಲ್ಲಿ ಭಾಗವಹಿಸುವ ಎಲ್ಲಾ ಹಿಂದುತ್ವನಿಷ್ಠ, ಸಾಮಾಜಿಕ ಹಾಗೆಯೇ ಹೆಸರಾಂತ ಸಂಘಟನೆಗಳು ಈ ಸಂದರ್ಭದಲ್ಲಿ ದೇಶಾದ್ಯಂತ ಉಪನ್ಯಾಸ ಗಳನ್ನು ಆಯೋಜಿಸಿದವು. ಇದರಲ್ಲಿ ವಕೀಲರ ಬಾರ್ ಕೌನ್ಸಿಲ್, ಪ್ರೆಸ್ ಕ್ಲಬ್, ಸಾಮಾಜಿಕ ಸಂಘಟನೆಗಳ ಕಚೇರಿಗಳು, ಹೆಸರುವಾಸಿ ಸಂಘಟನೆಗಳ ಕಚೇರಿಗಳು, ಕಾಲೇಜುಗಳು, ವ್ಯಾಪಾರಿ ಸಂಘಟನೆಗಳ ಕಾರ್ಯಕ್ರಮ, ಚೇಂಬರ ಆಫ್ ಕಾಮರ್ಸ ಕಚೇರಿ, ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕ್ರಮಗಳು ಹೀಗೆ ಅನೇಕ ಸ್ಥಳಗಳಲ್ಲಿ ಹಲಾಲ್‌ಕಡ್ಡಾಯದ ಗಂಭೀರ ದುಷ್ಪರಿಣಾಮಗಳ ಸಂದರ್ಭದಲ್ಲಿ ವಿಷಯಗಳನ್ನು ಮಂಡಿಸಲು ೪೦೦ ಕ್ಕೂ ಅಧಿಕ ಸ್ಥಳಗಳಲ್ಲಿ ಸಮಿತಿಯ ವಕ್ತಾರರನ್ನು ಆಹ್ವಾನಿಸಲಾಯಿತು.
೪ ಆ. ಹಲಾಲ್ ಉತ್ಪಾದನೆ ಮಾರಾಟಗಾರರ ವಿರುದ್ಧ ಪ್ರತಿಭಟನೆ : ಮೆಕ್ ಡೊನಾಲ್ಡ್, ಕೆ.ಎಫ್.ಸಿ., ಬರ್ಗರ್ ಕಿಂಗ್ ಇತ್ಯಾದಿ ಉಪಹಾರಗೃಹಗಳಲ್ಲಿ ಹಲಾಲ್ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಅಲ್ಲಿಗೆ ಹೋಗುವ ಹಿಂದೂ ಗ್ರಾಹಕರು ಶೇ. ೯೦ ಕ್ಕಿಂತ ಹೆಚ್ಚು ಇದ್ದರೂ, ಅವರು ಹಲಾಲ್ ಆಹಾರವನ್ನು ಮಾತ್ರ ಸ್ವೀಕರಿಸುವಂತೆ ಒತ್ತಾಯಿಸ ಲಾಗುತ್ತಿರುವುದರಿಂದ ಅವರ ಉಪಾಹಾರಗೃಹಗಳ ಹೊರಗೆ, ಹಿಂದೂಗಳಿಗಾಗಿ ಹಲಾಲ್ ಅಲ್ಲದ ಪದಾರ್ಥವನ್ನು ನೀಡಬೇಕೆಂದು ಒತ್ತಾಯಿಸಿ ೨೦ ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಲಾಯಿತು.
೪ ಇ. ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನದ ಯಶಸ್ಸು : ದೀಪಾವಳಿಯ ಸಂದರ್ಭದಲ್ಲಿ ಬಹುತೇಕ ಹಿಂದೂಗಳ ಮನೆಯಲ್ಲಿ ತಿಂಡಿಗಳನ್ನು ಮಾಡುತ್ತಾರೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಖರೀದಿಸಲಾಗುತ್ತದೆ. ಈ ಕಾಲಾವಧಿಯಲ್ಲಿ ಸಾಮಗ್ರಿಗಳನ್ನು ಖರೀದಿಸುವಾಗ ಅದರಲ್ಲಿ ಹಲಾಲ್ ಪದಾರ್ಥಗಳನ್ನು ಖರೀದಿಸದಂತೆ ‘ಹಲಾಲ್‌ಮುಕ್ತ ದೀಪಾವಳಿ’ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಿಂದಲೂ ಕರೆ ನೀಡ ಲಾಯಿತು. ಇದರಿಂದಾಗಿ ಅನೇಕ ಕಡೆಗಳಲ್ಲಿ ಹಿಂದೂಗಳು ಹಲಾಲ್ ಪ್ರಮಾಣೀಕೃತ ಸಾಮಗ್ರಿಗಳನ್ನು ಬಹಿಷ್ಕರಿಸಿದರು.
೪ ಈ. ಕರ್ನಾಟಕದಲ್ಲಿ ನಡೆಯುವ ‘ಹೊಸ ತೊಡಕು’ ಹಬ್ಬದ ಸಂದರ್ಭದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸುವ ಆಂದೋಲನ : ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಂದೂಗಳು ಹೊಸ ವರ್ಷದ ಯುಗಾದಿಯ ಮರುದಿನದಂದು ‘ಹೊಸ ತೊಡಕು’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಂದು ಗ್ರಾಮದ ಗ್ರಾಮದೇವತೆಯ ಮುಂದೆ ಬಲಿ ನೀಡಲಾಗುತ್ತದೆ; ಆದರೆ ಹಿಂದೂಗಳಲ್ಲಿರುವ ಅಜ್ಞಾನದ ಕಾರಣದಿಂದ ಈ ಬಲಿಯನ್ನು ನೀಡಲು ಮುಸ್ಲಿಂ ಕಟುಕರು ಗ್ರಾಮಕ್ಕೆ ಬಂದು ಹಲಾಲ್ ರೀತಿಯಲ್ಲಿ ಪ್ರಾಣಿಗಳ ಹತ್ಯೆ ಮಾಡುತ್ತಿದ್ದರು. ಹಲಾಲ್ ಮಾಡಲು ಮೊದಲು ಅಲ್ಲಾಹನ ಸ್ಮರಣೆ ಮಾಡಿ ನಂತರ ದೇವರ ಮುಂದೆ ಬಲಿ ನೀಡುತ್ತಾರೆಂಬ ವಾಸ್ತವವನ್ನು ಗ್ರಾಮಸ್ಥರಿಗೆ ವಿವರಿಸಲಾಯಿತು. ಇದರಿಂದಾಗಿ ಹಲವೆಡೆ ಗ್ರಾಮಸ್ಥರು ಮುಸ್ಲಿಂ ಹಲಾಲ್ ಪದ್ಧತಿಯಿಂದ ಬಲಿ ನೀಡುವ ಮುಸಲ್ಮಾನ ಕಟುಕರನ್ನು ನಿರ್ಬಂಧಿಸಿದರು. ಅಲ್ಲದೆ, ಅಂದು ಜಟ್ಕಾ ವಿಧಾನ (ಹಿಂದೂ ಅಥವಾ ಸಿಕ್ಖ್ ಧರ್ಮಗಳಲ್ಲಿ, ಪ್ರಾಣಿಗಳನ್ನು ‘ಜಟ್ಕಾ’ ವಿಧಾನದಿಂದ ಕೊಲ್ಲ ಲಾಗುತ್ತದೆ. ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗುವುದರಿಂದ ಅವುಗಳಿಗೆ ನೋವಾಗುವ ಪ್ರಮಾನ ಅಲ್ಪವಿರುತ್ತದೆ.) ಮಾಂಸವನ್ನು ಮನೆಗೆ ತರಲು ಪ್ರಾರಂಭಿಸಿದರು.
೪ ಉ. ‘ಹಲಾಲ್ ಮುಕ್ತ ಭಾರತ’ ಅಭಿಯಾನ : ಕೇವಲ ಕೆಲವು ಹಬ್ಬಗಳ ಸಂದರ್ಭದಲ್ಲಿ ಮಾತ್ರ ಹಲಾಲ್ ಬಗ್ಗೆ ಜಾಗೃತಿ ಮೂಡಿಸುವ ಬದಲು ಭಾರತವನ್ನೇ ಹಲಾಲ್ ಮುಕ್ತಗೊಳಿಸುವ ಉದ್ದೇಶದಿಂದ ‘ಹಲಾಲ್ ಮುಕ್ತ ಭಾರತ’ ಅಭಿಯಾನ ಆರಂಭಿಸಲಾಗಿದೆ. ಇದರಲ್ಲೂ ಸಮಾಜದಲ್ಲಿ ಜನಜಾಗೃತಿ ಮೂಡಿಸಿ, ಹೆಚ್ಚೆಚ್ಚು ಹಲಾಲ್ ಆಹಾರಗಳನ್ನು ನಿಷೇಧಿಸುವ ದೃಷ್ಟಿಯಿಂದ ಪ್ರಯತ್ನಿಸಲಾಯಿತು. ಭಾರತದಿಂದ ಈ ಖಾಸಗಿ ಹಲಾಲ್ ಪ್ರಮಾಣಪತ್ರವನ್ನು ಸಂಪೂರ್ಣವಾಗಿ ನಿಲ್ಲಿಸಲು ಈ ಚಳುವಳಿ ನಡೆಯುತ್ತಿದೆ.
೫. ಹಲಾಲ್ ಅರ್ಥವ್ಯವಸ್ಥೆಯ ವಿರುದ್ಧ ಮತ್ತಷ್ಟು ಪ್ರಬಲ ಹೋರಾಟ ಅಗತ್ಯ !
ನಾವು ಭಾರತವನ್ನು ಹಲಾಲ್ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ; ಆದರೆ ದುರದೃಷ್ಟಕರ ವಿಷಯವೆಂದರೆ, ೭ ಏಪ್ರಿಲ್ ೨೦೨೩ ರಂದು, ವಾಣಿಜ್ಯ ಸಚಿವಾಲಯ ಸರ್ಕಾರಿ ಆದೇಶವನ್ನು ಹೊರಡಿಸಿತು. ಈ ಆದೇಶದ ಪ್ರಕಾರ ಜಮಿಯತ್-ಉಲೇಮಾ-ಎ-ಹಿಂದ್, ಹಲಾಲ್ ಇಂಡಿಯಾ ಪ್ರೈ. ಲಿಮಿಟೆಡ್, ಇತ್ಯಾದಿ ಖಾಸಗಿ ಇಸ್ಲಾಮಿಕ್ ಸಂಸ್ಥೆಗಳಿಗೆ ಅಧಿಕೃತ ಮಾನ್ಯತೆ ನೀಡುವ ಮೂಲಕ, ಇಸ್ಲಾಮಿಕ್ ದೇಶಗಳಲ್ಲಿ ಹಲಾಲ್ ಮಾಂಸದ ವ್ಯಾಪಾರವನ್ನು ಹೆಚ್ಚಿಸುವ ಯೋಜನೆಯನ್ನು ಘೋಷಿಸಲಾಯಿತು. ಈಗ ಈ ಖಾಸಗಿ ಇಸ್ಲಾಮಿಕ್ ಸಂಸ್ಥೆಗಳು ಸರಕಾರದಿಂದ ನೇರ ಅನುಮೋದನೆಯನ್ನು ಪಡೆದರೆ, ದೇಶ ದಲ್ಲಿ ಸಮಾನಾಂತರ ಆರ್ಥಿಕತೆಯನ್ನು ಸ್ಥಾಪಿಸಲು ಅವರಿಗೆ ಸುಲಭವಾಗುತ್ತದೆ. ಅವರಿಗೆ ಹಲಾಲ್ ಪ್ರಮಾಣಪತ್ರಗಳ ಮೂಲಕ ಸಿಗುವ ಕೋಟ್ಯಂತರ ರೂಪಾಯಿ ನಿಧಿಯಿಂದ ಭಯೋತ್ಪಾದಕರಿಗೆ ಕಾನೂನು ನೆರವು ನೀಡುವುದು ಸುಲಭವಾಗುತ್ತದೆ. ಹಾಗಾಗಿ ಈ ಸರಕಾರಿ ಆದೇಶವನ್ನು ರದ್ದುಗೊಳಿಸಲು ನಮಗೆ ಹೆಚ್ಚಿನ ಶಕ್ತಿಯ ಆವಶ್ಯಕತೆಯಿದೆ. ನಾವು ಸರಕಾರವನ್ನು ಕೋರುವುದೇನೆಂದರೆ, ಈ ಖಾಸಗಿ ಇಸ್ಲಾಮಿಕ್ ಸಂಸ್ಥೆಗಳಿಗೆ ಹಲಾಲ್ ಪ್ರಮಾಣೀಕರಿಸಲು ಅನುಮೋದನೆ ನೀಡುವ ಬದಲು, ಆ ಅನುಮೋದನೆ ನೀಡುವ ಅಧಿಕಾರವನ್ನು ಕೇಂದ್ರ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್.ಎಸ್.ಎಸ್.ಎ.ಐ.) ಗೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಅಲ್ಲದೇ ಹಲಾಲ್‌ನಿಂದ ಸಂಗ್ರಹವಾಗುವ ಕೋಟ್ಯಂತರ ರೂಪಾಯಿ ಹಣವನ್ನು ಕೇಂದ್ರ ಸರಕಾರ ಸಂಗ್ರಹಿಸಿ ಆ ಹಣ ಉಗ್ರರಿಗೆ ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಉಪಯೋಗವಾಗದಂತೆ ಯೋಜನೆ ರೂಪಿಸಬೇಕು.
– ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.