ಪುಣೆ ಪೊಲೀಸರ ವಶದಿಂದ ಪರಾರಿಯಾಗಿದ್ದ |
ನವ ದೆಹಲಿ – ದೆಹಲಿ ಪೊಲೀಸರ ವಿಶೇಷ ಪಡೆಯು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಮಹಮ್ಮದ ಶಾಹನವಾಜ ಮತ್ತು ಇತರೆ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಶಾಹನವಾಜನು ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು. ಶಾಹನವಾಜ ಪುಣೆಯ ಗುಂಪಿನ (ಮಾಡ್ಯೂಲ್) ಭಯೋತ್ಪಾದಕನಾಗಿದ್ದನು. ಆತನನ್ನು ಸೆರೆ ಹಿಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿತ್ತು. ಅವನು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದೂ ದೆಹಲಿಯ ನಿವಾಸಿಯಾಗಿದ್ದಾನೆ. ಸದ್ಯಕ್ಕೆ ಶಾಹನವಾಜನೊಂದಿಗೆ ಬಂಧಿಸಿಲ್ಪಟ್ಟಿರುವ ಮೂವರು ಭಯೋತ್ಪಾದಕರ ವಿಚಾರಣೆ ನಡೆಸಲಾಗುತ್ತಿದೆ.
ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಇದುವರೆಗೆ ಓರ್ವ ವೈದ್ಯ ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ರಿಜವಾನ ಅಬ್ದುಲ ಉರ್ಫ ಹಾಜಿ ಅಲಿ, ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡಾಯಪರವಾಲಾ ಮತ್ತು ತಲ್ಹಾ ಲಿಯಾಖತ್ ಖಾನ್ ಇವರನ್ನು ಹುಡುಕಲಾಗುತ್ತಿದೆ. ರಾಷ್ಟ್ರೀಯ ತನಿಖಾ ದಳವು ಈ ಮೂವರ ಮೇಲೆ ತಲಾ 3 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
India’s top anti-terror agency arrested suspected #ISIS terrorist from New Delhi
Islamic State terrorist Shahnawaz and 2 associates arrested by the Delhi Police during raids@eriknjoka tells you more
Watch more: https://t.co/AXC5qRuO3J pic.twitter.com/k18RLv391y
— WION (@WIONews) October 2, 2023