|
ಸೀತಾಪುರ (ಉತ್ತರ ಪ್ರದೇಶ) – ಪ್ರವಾದಿ ಮಹಮ್ಮದರ ಜನ್ಮದಿನದ ನಿಮಿತ್ತದಿಂದ ಆಚರಿಸಲಾದ ಈದ್ ಸಂದರ್ಭದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಇಂತಹುದೇ ಒಂದು ಘಟನೆ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿರುವ ಸದರಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬನವೀರಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಮುಸಲ್ಮಾನರು ನಡೆಸಿದ ಮೆರವಣಿಗೆ ಪ್ರತಿವರ್ಷದಂತೆ ನಿಗದಿತ ಮಾರ್ಗದಲ್ಲಿ ಸಾಗದೇ ಬೇರೆ ಮಾರ್ಗದಲ್ಲಿ ಸಾಗಿತು. ಈ ಬಗ್ಗೆ ಸ್ಥಳೀಯ ಹಿಂದೂಗಳು ವಿಚಾರಿಸಿದಾಗ, ಮತಾಂಧ ಮುಸಲ್ಮಾನರು ಅವರೊಂದಿಗೆ ವಿವಾದ ನಡೆಸಿದರು, ಅವರನ್ನು ಅಶ್ಲೀಲವಾಗಿ ನಿಂದಿಸಿದರು ಮತ್ತು ಥಳಿಸಿದರು.
पैगंबर मोहम्मद के जन्मदिन पर मुस्लिम भीड़ नए रास्ते से निकाल रहा थी जुलूस, हिंदुओं ने रोका तो की मारपीट, छतों से पथराव भी#ProphetMohammad #UttarPradesh https://t.co/PI6I6oickf
— ऑपइंडिया (@OpIndia_in) September 30, 2023
1. ಸ್ವಲ್ಪ ಹೊತ್ತಿನ ನಂತರ ಈ ಘಟನೆಯು ಗಲಭೆಗೆ ತಿರುಗಿತು. ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ವಿಡಿಯೋ ಆಧರಿಸಿ 5 ಮಂದಿ ಮುಸಲ್ಮಾನರನ್ನು ಬಂಧಿಸಲಾಗಿದ್ದು, 25 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2. ಸಂತ್ರಸ್ತ ಹಿಂದೂಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಈ ಮೆರವಣಿಗೆಯ ಮೂಲಕ ಹಿಂದೂಗಳ ಮೇಲೆ ಹಲ್ಲೆ ನಡೆಸಲು ಮುಸಲ್ಮಾನರು ಪೂರ್ವಯೋಜಿತ ಷಡ್ಯಂತ್ರ ರಚಿಸಿದ್ದರು ಎಂದು ತಿಳಿಸಲಾಗಿದೆ. ಅವರು ಮೊದಲೇ ತಮ್ಮ ಮನೆಗಳ ಛಾವಣಿಯ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು.
3. ಮತಾಂಧರು ಹಿಂದೂಗಳ ಮನೆಗಳಿಗೂ ನುಗ್ಗಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ಸ್ಥಳದಲ್ಲಿ ಉದ್ವಿಗ್ನತೆಯ ವಾತಾವರಣವಿದ್ದು, ಹಿಂದೂಗಳು ಭಯದ ನೆರಳಿನಲ್ಲಿದ್ದಾರೆ.
4. ಈ ಪ್ರಕರಣದಲ್ಲಿ ಸಲೀಂ, ಪುತ್ತಾನ, ಇಶ್ತಿಯಾಕ್, ಸಾನು, ಆಯಿತುಲ್ಲಾ, ಸೈಮುಲ್ಲಾ, ರಹೀಮ್, ಗುಫರಾನ್, ಶೀಬು, ಮೋಯಿನ್, ಖಾದಿರ್ ಮತ್ತು ಇನ್ನಿತರೆ 25 ಅಪರಿಚಿತ ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುದೇಶದ ಬೇರೆ ರಾಜ್ಯಗಳಲ್ಲಿ ಅಲ್ಲ, ಬದಲಾಗಿ ಮತಾಂಧ ಮುಸ್ಲಿಮರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಯೋಗಿ ಆದಿತ್ಯನಾಥ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿಯೂ ಈ ರೀತಿ ಮುಸಲ್ಮಾನರು ಹಿಂಸಾಚಾರ ನಡೆಸುತ್ತಿದ್ದರೆ, ಅವರ ಉದ್ಧಟತನ ಯಾವ ಮಟ್ಟಕ್ಕೆ ಹೋಗಿದೆಯೆನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಇಂತಹವರನ್ನು ಹೆಡೆಮುರಿ ಕಟ್ಟಲು ಈಗ ಕೇವಲ ‘ಬುಲ್ಡೋಜರ್’ ಮಾತ್ರ ಸಾಕಾಗುವುದಿಲ್ಲ, ಅವರ ಹಣ ಗಳಿಸುವ ಸೌಲಭ್ಯಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ತಪ್ಪೇನಿದೆ ? |