ಝಾಂಸಿ (ಉತ್ತರ ಪ್ರದೇಶ) ಇಲ್ಲಿಯ ನವೋದಯ ವಿದ್ಯಾಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ !

ರಾಜೌರಿ (ಜಮ್ಮು-ಕಾಶ್ಮೀರ) ಇಲ್ಲಿಯ ಶಾಲೆಯಲ್ಲಿ ಝಾಂಸಿಯಲ್ಲಿನ ವಿದ್ಯಾರ್ಥಿಗಳನ್ನು ಥಳಿಸಿದಕ್ಕೆ ಸೇಡು !

ಝಾಂಸಿ (ಉತ್ತರ ಪ್ರದೇಶ) – ಇಲ್ಲಿಯ ಬರುವಾಸಾಗರ ನವೋದಯ ವಿದ್ಯಾಲಯದ ವಸತಿಗೃಹದಲ್ಲಿ ೯ ನೇಯ ತರಗತಿಯ ವಿದ್ಯಾರ್ಥಿಗಳು ಅವರದೇ ತರಗತಿಯಲ್ಲಿನ ೧೮ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಥಳಿಸಿದ್ದಾರೆ. ಈ ಸಮಯದಲ್ಲಿ ಶಿಕ್ಷಕ ಮತ್ತು ಸರಕಾರಿ ಅಧಿಕಾರಿ ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ರಕ್ಷಿಸಿದರು. ಈ ಹೊಡೆದಾಟದಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಸೆಪ್ಟೆಂಬರ್ ೨೬ ರಂದು ಜಮ್ಮು ಕಾಶ್ಮೀರದಲ್ಲಿನ ರಾಜೌರಿ ನವೋದಯ ವಿದ್ಯಾಲಯದಲ್ಲಿ ಬರುವಾಸಾಗರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಥಳಿಸಿರುವ ಘಟನೆಯಿಂದ ಈ ಘಟನೆ ನಡೆದಿದೆ. ಬರುವಾಸಾಗರ ನವೋದಯ ವಿದ್ಯಾಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿಸಲಾಗಿರುವುದರಿಂದ ಪೊಲೀಸರನ್ನು ಕರೆಸಲಾಗಿತ್ತು, ಆಗ ವಿದ್ಯಾರ್ಥಿಗಳು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾ ಅವರನ್ನು ಚದುರಿಸಿದ್ದರು. ಈ ಪ್ರಕರಣದಲ್ಲಿ ಝಾಂಸಿಯ ವಿದ್ಯಾರ್ಥಿಗಳಲ್ಲಿ ಈಗಲೂ ಕೂಡ ವಿದ್ಯಾರ್ಥಿಗಳಿಂದ ರಾಜೌರಿಯಲ್ಲಿ ವಿದ್ಯಾರ್ಥಿಗಳಿಗೆ ಥಳಿಸಲಾಗಿರುವ ಬಗ್ಗೆ ಇರುವ ರೋಷ ಇದೆ. ಅವರು ರಾಜೌರಿಯಿನ ವಿದ್ಯಾರ್ಥಿಗಳಿಗೆ ಕರೆಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಇದರಿಂದ ಎರಡು ವಿದ್ಯಾಲಯದಲ್ಲಿನ ವಿದ್ಯಾರ್ಥಿಗಳಿಗೆ ಅವರ ಮೂಲ ಸ್ಥಳಕ್ಕೆ ಹಿಂತಿರುಗಿ ಕಳಿಸಲಾಗಿದೆ. ರಾಜೌರಿಯಲ್ಲಿ ಝಾಂಸಿಯ ವಿದ್ಯಾಲಯದಿಂದ ೨೦ ವಿದ್ಯಾರ್ಥಿ ಹಾಗೂ ರಾಜೌರಿಯಿಂದ ೧೮ ವಿದ್ಯಾರ್ಥಿಗಳು ಝಾಂಸಿಗೆ ಕಳುಹಿಸಲಾಗಿತ್ತು. ಝಾಂಸಿಯಲ್ಲಿನ ವಿದ್ಯಾರ್ಥಿಗಳಿಗೆ ಕಾಶ್ಮೀರದಲ್ಲಿನ ಸಂಸ್ಕೃತಿ ಕಲಿಯಲು ಸಾಧ್ಯವಾಗಲಿ ಅದಕ್ಕಾಗಿ ಅವರನ್ನು ರಾಜೌರಿಯ ವಿದ್ಯಾಲಯಕ್ಕೆ ಕಳುಹಿಸಲಾಗಿತ್ತು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಇಲ್ಲಿಯ ಮುಸಲ್ಮಾನ ವಿದ್ಯಾರ್ಥಿಗಳಿಂದ ಥಳಿಸಲಾಗುತ್ತದೆ, ಇದು ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ಹೇಗೆ ಬೇರೂರಿದೆ ಎಂಬುದು ಸ್ಪಷ್ಟವಾಗುತ್ತದೆ ! ಇದರಿಂದ ಕಾಶ್ಮೀರದಲ್ಲಿನ ಭಯೋತ್ಪಾದನೆ ಇಲ್ಲಿಯವರೆಗೆ ನಾಶ ಮಾಡಲು ಸಾಧ್ಯವಾಗಿಲ್ಲ.