ನನ್ನ ಚಲನಚಿತ್ರದ ಹಿಂದಿ ಆವೃತ್ತಿಯ ಪ್ರಮಾಣ ಪತ್ರಕ್ಕಾಗಿ ಆರೂವರೆ ಲಕ್ಷ ರೂಪಾಯಿ ಲಂಚ ನೀಡಬೇಕಾಯಿತು ! – ತಮಿಳ ನಟ ವಿಶಾಲ್

ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳದ ಮೇಲೆ ಆರೋಪ ಮಾಡಿದ ತಮಿಳ ನಟ ವಿಶಾಲ್

ಚೆನ್ನೈ (ತಮಿಳುನಾಡು) – ತಮಿಳುನಾಡಿನ ನಟ ವಿಶಾಲ್ ಇವರು ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಯ ಮುಂಬಯಿಯಲ್ಲಿನ ಅಧಿಕಾರಿಗಳ ಮೇಲೆ ಅವರ ಚಲನಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡುವುದಕ್ಕಾಗಿ ಆರುವರೆ ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪ ಮಾಡಿದ್ದಾರೆ. ವಿಶಾಲ್ ಇವರ ‘ಮಾರ್ಕ ಆಂಟನಿ’ ಈ ತಮಿಳು ಭಾಷೆಯ ಚಲನಚಿತ್ರ ಸಪ್ಟೆಂಬರ್ ೧೫ ರಂದು ಬಿಡುಗಡೆಯಾಗಿತ್ತು. ಅದರ ಹಿಂದಿ ಆವೃತ್ತಿಗಾಗಿ ಲಂಚ ಪಡೆದಿರುವ ಆರೋಪ ಮಾಡಲಾಗಿದೆ. ವಿಶಾಲ್ ಇವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಒಂದು ವಿಡಿಯೋ ಪ್ರಸಾರಗೊಳಿಸಿ ಆರೋಪಿಸಿದ್ದಾರೆ. ‘ಈ ಚಲನಚಿತ್ರಕ್ಕಾಗಿ ಬಹಳಷ್ಟು ಪಣಕ್ಕೆ ಇಟ್ಟಿರುವುದರಿಂದ ನನ್ನ ಬಳಿ ಲಂಚ ನೀಡದೆ ಬೇರೆ ಪರ್ಯಾಯವಿರಲಿಲ್ಲ’, ಎಂದು ಅವರು ದಾವೆ ಕೂಡ ಮಾಡಿದ್ದಾರೆ.

ವಿಶಾಲ ಮಾತು ಮುಂದುವರಿಸಿ, ಚಲನಚಿತ್ರದ ಪರದೆಯ ಮೇಲೆ ಭ್ರಷ್ಟಾಚಾರ ತೋರಿಸುವುದು ಸರಿ; ಆದರೆ ನಿಜ ಜೀವನದಲ್ಲಿ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ. ವಿಶೇಷವಾಗಿ ಸರಕಾರಿ ಕಾರ್ಯಾಲಯದಲ್ಲಿ ಮತ್ತು ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ ಮುಂಬಯಿ ಕಾರ್ಯಾಲಯದಲ್ಲಿ ಇದಕ್ಕಿಂತಲೂ ಹೆಚ್ಚು ತಪ್ಪು ನಡೆಯುತ್ತದೆ. ‘ಮಾರ್ಕ್ ಆಂಟನಿ’ ಈ ನನ್ನ ಚಲನಚಿತ್ರದ ಹಿಂದಿ ಆವೃತ್ತಿಗಾಗಿ ನನಗೆ ಎರಡು ವ್ಯವಹಾರಗಳಲ್ಲಿ ಆರುವರೆ ಲಕ್ಷ ರೂಪಾಯಿ ನೀಡಬೇಕಾಯಿತು. ಇದರಲ್ಲಿ ನಾನು ಚಲನಚಿತ್ರ ಪ್ರದರ್ಶನೆಗಾಗಿ ಮೂರು ಲಕ್ಷ ರೂಪಾಯಿ ಮತ್ತು ಪ್ರಮಾಣ ಪತ್ರಕ್ಕಾಗಿ 3.50 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಹೇಳಿದರು. ಈ ಸಮಯದಲ್ಲಿ ವಿಶಾಲ ಇವರು ಲಂಚ ನೀಡಿರುವುದರ ಬಗ್ಗೆ ವರದಿ ಸಹ ವಿಡಿಯೋದಲ್ಲಿ ನೀಡಿದ್ದಾರೆ. ಹಾಗೂ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಕ್ರಮ ಕೈಗೊಳ್ಳಲು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಸರಕಾರ ಈ ಆರೋಪದ ವಿಚಾರಣೆ ನಡೆಸಿ ಸತ್ಯಾಂಶವನ್ನು ಜನರ ಎದುರು ಬಹಿರಂಗಪಡಿಸಬೇಕು !

‘ಹಿಂದೂ ದೇವತೆಗಳನ್ನು ಅವಮಾನ ಮಾಡುವ ಚಲನಚಿತ್ರಗಳಿಗೆ ಈ ಮಂಡಳಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ ಮತ್ತು ಅವರಿಗೆ ಹಿಂದೂ ವಿರೋಧ ಮಾಡಿದ ನಂತರ ಅದರ ಬಗ್ಗೆ ಗಮನ ಕೂಡ ಹರಿಸುವುದಿಲ್ಲ, ಇಂತಹ ಸಮಯದಲ್ಲಿ ಲಂಚ ನೀಡಿ ಚಲನಚಿತ್ರಗಳು ಅಂಗಿಕರಿಸಲಾಗುತ್ತಿದೆಯೇ ?’, ಎಂಬ ಪ್ರಶ್ನೆ ಉದ್ಭವಿಸುತ್ತಿದೆ !