ಕೆನಡಾದ ಗುರುದ್ವಾರದಲ್ಲಿ ಭಾರತೀಯ ಅಧಿಕಾರಿಗಳ ಹತ್ಯೆ ಮಾಡುವಂತೆ ಪ್ರಚೋದನಕಾರಿ ಫಲಕ ಅಳವಡಿಕೆ !

ದೂರಿನ ನಂತರ ಸರಕಾರವು ಫಲಕವನ್ನು ತೆಗೆಯುವಂತೆ ಆದೇಶಿಸಿದರೂ ಯಾವುದೇ ಕಾರ್ಯಾಚರಣೆಯಿಲ್ಲ !

ಒಟಾವಾ (ಕೆನಡಾ) – ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ನಂತರವೂ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ಸರೆ ನಗರದಲ್ಲಿರುವ ಗುರುದ್ವಾರದಲ್ಲಿ ಭಾರತೀಯ ರಾಯಭಾರಿ ಕಚೇರಿಯ ೩ ಅಧಿಕಾರಿಗಳ ಹತ್ಯೆ ಮಾಡಲು ಪ್ರಚೋದನಕಾರಿ ಫಲಕಗಳನ್ನು ಹಚ್ಚಲಾಗಿದೆ. ಈ ಫಲಕದ ಮೇಲೆ ಈ ಅಧಿಕಾರಿಗಳ ಛಾಯಾಚಿತ್ರವನ್ನೂ ಹಾಕಲಾಗಿದೆ. `ಈ ಅಧಿಕಾರಿಗಳು ನಿಜ್ಜರನ ಹತ್ಯೆಯಲ್ಲಿ ಸಹಭಾಗಿಯಾಗಿದ್ದರು’ ಎಂದು ಹೇಳಲಾಗುತ್ತಿದೆ. ಈ ಗುರುದ್ವಾರದ ಹೊರಗಡೆಯೇ ನಿಜ್ಜರನ ಹತ್ಯೆ ಮಾಡಲಾಗಿತ್ತು.

ಫಲಕವನ್ನು ತೆಗೆಯುವ ಬಗ್ಗೆ ದೂರು ನೀಡಲಾದಾಗ ಸರಕಾರವು ಅದನ್ನು ತೆಗೆಯಲು ಆದೇಶಿಸಿತ್ತು. ಆದರೂ ಕೇವಲ ಒಂದು ಪ್ರವೇಶದ್ವಾರದ ಬಳಿ ಇದ್ದ ಫಲಕವನ್ನು ತೆಗೆಯಲಾಗಿದ್ದು ಇನ್ನೊಂದು ಪ್ರವೇಶದ್ವಾರದ ಬಳಿ ಹಾಕಲಾಗಿದ್ದ ಫಲಕವು ಹಾಗೆಯೇ ಇದೆ. ಕೆನಡಾವು ನಿಜ್ಜರನ ಹತ್ಯೆಯ ಆರೋಪವನ್ನು ಭಾರತದ ಮೇಲೆ ಹೊರಿಸುತ್ತ ಭಾರತೀಯ ಅಧಿಕಾರಿಯಾದ ಪವನ ರಾಯರವರಿಗೆ ಕೆನಡಾ ಬಿಟ್ಟು ಹೋಗಲು ಹೇಳಿತ್ತು. ಇದರಿಂದಾಗಿ ಎರಡೂ ದೇಶಗಳ ನಡುವೆ ವಿವಾದ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಇದರಿಂದ ಕೆನಡಾದಲ್ಲಿ ಇನ್ನೊಂದು ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಅನಿಸುತ್ತದೆ !

ಕೆನಡಾವನ್ನು ಅಲ್ಲಿನ ಸರಕಾರ ನಡೆಸುತ್ತದೆಯೇ ಅಥವಾ ಖಾಲಿಸ್ತಾನಿಗಳು ನಡೆಸುತ್ತಾರೆ ?