|
ಆಝಮಗಡ್ (ಉತ್ತರಪ್ರದೇಶ) – ಜಿಲ್ಲೆಯ ಮೆಹರಾಜಪುರ ಪ್ರದೇಶದಲ್ಲಿನ ಲಾಲಮೌ ಗ್ರಾಮದಲ್ಲಿನ ಹಿಂದುಗಳ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸಲ್ಮಾನ್ ಮತ್ತು ತ್ರಿಭುವನ ರಾಮ ಈ ಕ್ರೈಸ್ತರು ಪ್ರಾರ್ಥನಾ ಸಭೆ ಆಯೋಜಿಸಿದ್ದರು. ಸಭೆಗಾಗಿ ಧ್ವನಿವರ್ಧಕ ವ್ಯವಸ್ಥೆ ಕೂಡ ಮಾಡಲಾಗಿತ್ತು. ಗ್ರಾಮದಲ್ಲಿನ ರವೀಂದ್ರ ರಾಮ ಎಂಬ ಹಿಂದೂವಿನಿಂದ ಈ ಸಂದರ್ಭದಲ್ಲಿ ಇಬ್ಬರು ಕ್ರೈಸ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತ್ವರಿತವಾಗಿ ಸಲ್ಮಾನ ಮತ್ತು ತ್ರಿಭುವನ ರಾಮ ಇವರನ್ನು ಬಂಧಿಸಿದರು. ಈ ಸಮಯದಲ್ಲಿ ಅವರಿಂದ ಬೈಬಲ್ಲಿನ ೧೦ ಪ್ರತಿಗಳು, ೧ ಬೈಕ್ ಮತ್ತು ಧ್ವನಿವರ್ಧಕ ವ್ಯವಸ್ಥೆ ವಶಪಡಿಸಿಕೊಳ್ಳಲಾಯಿತು.
➡️ ऑपरेशन त्रिनेत्र से होगी गांव की निगरानी, अपराध पर लगेगा अंकुश.#मेंहनाजपुर धर्म परिवर्तन करा रहे 2 आरोपित गिरफ्तार।#सरायमीर #बरदह ट्रक से नौ प्रतिबंधित मवेशी बरामद, 3 तस्कर गिरफ्तार।#UPPolice#adgzonevaranasi#digazamgarh#UPPInNews pic.twitter.com/gVp806TShD
— AZAMGARH POLICE (@azamgarhpolice) September 26, 2023
ರವೀಂದ್ರ ರಾಮರು ದೂರಿನಲ್ಲಿ, ಇಬ್ಬರೂ ಕೂಡ ‘ಗ್ರಾಮದಲ್ಲಿನ ಹಿಂದೂಗಳಿಗೆ ಕ್ರೈಸ್ತ ಧರ್ಮ ಸ್ವೀಕರಿಸುವುದಕ್ಕಾಗಿ’ ಆಮಿಷ ಒಡ್ಡುತ್ತಿದ್ದರು ಮತ್ತು ಮತಾಂತರಗೊಳ್ಳೂವುದಕ್ಕಾಗಿ ಒತ್ತಡ ಹೇರುತ್ತಿದ್ದರು. ಸಪ್ಟೆಂಬರ್ ೨೪ ರಂದು ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರದ ಷಡ್ಯಂತ್ರ ರಚಿಸಲಾಗಿತ್ತು. ಹಿಂದುಗಳಿಗೆ ಹಣದ ಆಮಿಷ ನೀಡುವುದರ ಜೊತೆಗೆ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ನೀಡುವ ಆಶ್ವಾಸನೆ ನೀಡಲಾಗಿತ್ತು. ಪ್ರಾರ್ಥನಾ ಸಭೆಯ ಆಯೋಜನೆಯ ಅನುಮತಿ ಪಡೆದಿರಲಿಲ್ಲ. ಪೊಲೀಸರು ಸಲಮಾನ ಮತ್ತು ತ್ರಿಭುವನ ರಾಮ ಇವರ ವಿರುದ್ಧ ಉತ್ತರಪ್ರದೇಶ ‘ಮತಾಂತರ ವಿರೋಧಿ ಕಾನೂನಿನ ಕಲಂ ೨೦೨೧’ ರ ಅಡಿಯಲ್ಲಿ ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಕ್ರೈಸ್ತರು ಮತ್ತು ಮುಸಲ್ಮಾನರು ಹಿಂದುಗಳಿಗೆ ಆಮಿಷ ಒಡ್ಡಿ ಅಥವಾ ಬಲವಂತವಾಗಿ ಅವರ ಮತಾಂತರ ಮಾಡುತ್ತಾರೆ. ಹಿಂದೂಗಳು ಹೀಗೆ ಎಂದೂ ಮಾಡುವುದಿಲ್ಲ. ಆದರೂ ಕೂಡ ಪ್ರಗತಿ (ಅಧೋಗತಿ) ಪರರು ಮತ್ತು ಹಿಂದೂದ್ವೇಷಿಗಳು ಯಾವಾಗಲೂ ಹಿಂದುಗಳನ್ನೇ ಆಸಹಿಷ್ಣು ಎಂದು ಹೇಳಲಾಗುತ್ತದೆ, ಇದನ್ನು ತಿಳಿಯಿರಿ ! |