ಕೆನಡಾದ ಸಂಸತ್ತಿನಲ್ಲಿ ನಾಝಿ ಸೈನಿಕನನ್ನು ಗೌರವಿಸಿದ್ದರಿಂದ ಅಧ್ಯಕ್ಷರ ರಾಜೀನಾಮೆ

ಒಟಾವಾ (ಕೆನಡಾ) – ಸಂಸತ್ತಿನಲ್ಲಿ ಹಿಟ್ಲರ್‌ನ ನಾಜಿ ಸೈನಿಕನನ್ನು ಪ್ರಧಾನಿ ಟ್ರುಡೊ ಕೆನಡಾದ ಸಂಸತ್ತಿನ ಗೌರವಿಸಿದ್ದರಿಂದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಾಜಿ ಸೈನಿಕನನ್ನು ಗೌರವಿಸಿದ್ದರಿಂದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರನ್ನು ಟೀಕಿಸಿದ ನಂತರ ಸಂಸತ್ತಿನ ಅಧ್ಯಕ್ಷ ಆಂಥೋನಿ ರೋಟಾ ಕ್ಷಮೆಯಾಚಿಸಿದರು; ಆದರೆ ಆ ನಂತರವೂ ವಿಷಯ ಇತ್ಯರ್ಥವಾಗದ ಕಾರಣ ರೋಟಾ ರಾಜೀನಾಮೆ ನೀಡಬೇಕಾಯಿತು.

ಆಂಟನಿ ರೋಟಾ ಅವರು ಸಂಸತ್ತಿನಲ್ಲಿ ರಾಜೀನಾಮೆ ಸಲ್ಲಿಸುವಾಗ, “ನನ್ನಿಂದಾದ ತಪ್ಪಿಗೆ ಖೇದವಿದೆ” ಆದ್ದರಿಂದ ನಾನು ಸಂಸತ್ತಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 98 ವರ್ಷದ ಯಾರೋಸ್ಲಾವ್ ಹುಂಕಾ ಅವರು ನಾಜಿ ಸೈನ್ಯದೊಂದಿಗೆ ಸಂಬಂಧ ಹೊಂದಿದ್ದಾರೆಂದು ನನಗೆ ತಿಳಿದಿರಲಿಲ್ಲ. ಹಾಗಾಗಿ ತಪ್ಪಾಗಿ ಅವರನ್ನು ಸಂಸತ್ತಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ ಎಂದು ಹೇಳಿದರು.