|
ಕುಷಿನಗರ (ಉತ್ತರಪ್ರದೇಶ) – ಜಿಲ್ಲೆಯಲ್ಲಿ ಒಂದು ಚಲಿಸುವ ವಾಹನದಲ್ಲಿ ಮೂವರು ಕಾಮುಕರಿಂದ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಮೇಲುಸೆರಗು ಎಳೆದು, ಆಕೆಯನ್ನು ರಸ್ತೆಯಲ್ಲಿ ದರದರ ಎಳೆಯುತ್ತಾ ಒಂದು ವಾಹನದಲ್ಲಿ ಕುಡಿಸಲಾಯಿತು. ಚಲಿಸುವ ವಾಹನದಲ್ಲಿ ಆಕೆಯ ಮೇಲೆ ಬಲಾತ್ಕಾರ ಮಾಡಲಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ಪೊಲೀಸರು ಕಯಮುದ್ದಿನ್, ಜಹಾಂಗೀರ್ ಮತ್ತು ಸಿಕಂದರ್ ಇವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತೆ ಮತ್ತು ಬಲತ್ಕಾರಿ ಒಂದೆ ಸಮುದಾಯದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
#SP_KSN@dhawalips
के निर्देशन में थाना कप्तानगंज पुलिस द्वारा सामूहिक दुष्कर्म आदि के मुकदमे में वांछित तीन अभियुक्तों को किया गया गिरफ्तार- #UPPolice pic.twitter.com/ioAFtL6SYK— Kushinagar Police (@kushinagarpol) September 25, 2023
ಸಂತ್ರಸ್ತೆಯ ತಂದೆ, ಸಪ್ಟೆಂಬರ್ ೯ ರಂದು ಅವರ ಮಗಳ ಮೇಲೆ ಬಲಾತ್ಕಾರ ಮಾಡಲಾಗಿದೆ; ಆದರೆ ಅವರು ಪೊಲೀಸರಿಗೆ ಎರಡು ಬಾರಿ ದೂರು ನೀಡಿದರು ಕೂಡ ಬಲಾತ್ಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೊನೆಗೆ ಸಪ್ಟೆಂಬರ್ ೨೪ ರಂದು ಪೊಲೀಸರು ಈ ಘಟನೆಯ ಬಗ್ಗೆ ಗಮನಹರಿಸಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಕುಷಿನಗರ ಜಿಲ್ಲೆಯ ಪೊಲೀಸ ಅಧಿಕಾರಿ ಧವಲ ಜಯಸ್ವಾಲ ಇವರು ಕತ್ತಾನಗಂಜ ಪೊಲೀಸ್ ಠಾಣೆಯ ಅಧಿಕಾರಿ ವಿನಯಕುಮಾರ ಸಿಂಹ, ಪೊಲೀಸ ಉಪ ಅಧಿಕಾರಿ ಮಂಗೇಶ ಮಿಶ್ರಾ ಮತ್ತು ಮಹಿಳಾ ಸಿಪಾಯಿ ಅಂತಿಮ ಸಿಂಹ ಇವರನ್ನು ಅಮಾನತುಗೊಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿಕೊಲ್ಲುವ ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ? ಜನರ ಸೂಕ್ಷ್ಮ ಸಮಸ್ಯೆಯ ಕಡೆಗೆ ದುರ್ಲಕ್ಷ ಮಾಡುವ ಇಂತಹ ಪೊಲೀಸರನ್ನು ವಜಾಗೊಳಿಸುವುದಕ್ಕಾಗಿ ಉತ್ತರ ಪ್ರದೇಶ ಸರಕಾರದಿಂದ ಪ್ರಯತ್ನವಾಗಬೇಕು. |