ಈ ವಿಡಿಯೋಯ ಮೂಲಕ ಸ್ವಾತಂತ್ಯ್ರ ನಂತರದ ಕಾಲದಲ್ಲಿ ಹಿಂದೂಗಳ ವಿರುದ್ಧ ಕೋಮುವಾದಿ ಮತ್ತು ತಥಾಕಥಿತ ಜಾತ್ಯಾತೀತರು ಇವರು ರೂಪಿಸಿರುವ ಷಡ್ಯಂತ್ರವನ್ನು ಬಹಿರಂಗಪಡಿಸಲಿದೆ !
(‘ಆಫ್ಟರಮ್ಯಾಥ್’ ಅಂದರೆ ಒಂದು ಅನುಚಿತ ಘಟನೆಯಿಂದಾದ ಕೆಟ್ಟ ಪರಿಣಾಮ)
ನವದೆಹಲಿ – ‘ಪ್ರಾಚ್ಯಂ’ ಹೆಸರಿನ ಜನಪ್ರಿಯ ಯುಟ್ಯೂಬ್ ಚಾನೆಲ್ ನ ‘ಸಾಹೆಬ(ಭಾಗ 2) – ದ ಆಫ್ಟರಮ್ಯಾಥ್’ ಈ ವಿಡಿಯೊ ಸಪ್ಟೆಂಬರ್ 28 ರಂದು ಯುಟ್ಯೂಬ್ ನಲ್ಲಿ ಪ್ರಸಾರವಾಗಲಿದೆ. ಈ ವಿಡಿಯೋವನ್ನು ಹಿಂದೂಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ವಿಡಿಯೋ ಸ್ವಾತಂತ್ಯ್ರ ನಂತರದ ಕಾಲದಲ್ಲಿ ಕೋಮುವಾದಿ ಮತ್ತು ತಥಾಕಥಿತ ಜಾತ್ಯಾತೀತರು ಹಿಂದೂಗಳ ವಿರುದ್ಧ ರೂಪಿಸಿರುವ ಷಡ್ಯಂತ್ರವನ್ನು ಬಹಿರಂಗಪಡಿಸಲಿದೆ. ಈ ಕುರಿತು ‘ಪ್ರಾಚ್ಯಂ’ ನಿಂದ ಕಳೆದ ೨ ವಾರಗಳಿಂದ ಜನಜಾಗೃತಿ ಮಾಡಲಾಗುತ್ತಿದೆ. ಕಳೆದ ವರ್ಷ ಈ ವಿಡಿಯೋದ ಮೊದಲ ಭಾಗ ಪ್ರದರ್ಶನಗೊಂಡಿತ್ತು. ಅದರಲ್ಲಿ ‘ಮುಸಲ್ಮಾನ ಆಕ್ರಮಣಕಾರಿ ಮತ್ತು ಅದರ ನಂತರ ಬ್ರಿಟಿಷರು ಹಿಂದುಗಳ ಮೇಲೆ ಯಾವ ರೀತಿ ದೌರ್ಜನ್ಯ ಮಾಡಿದರು ?’, ಇದು ತೋರಿಸಲಾಗಿತ್ತು. ಬ್ರಿಟಿಷರು ಹಿಂದೂಗಳಲ್ಲಿನ ‘ಹಿಂದುತ್ವ’ ಯಾವ ರೀತಿ ಮುಗಿಸುವ ಶತ ಪ್ರಯತ್ನ ಮಾಡಿದ್ದರು ಮತ್ತು ಇಂದು ಯಾರು ಹಿಂದೂ ಕಾಣುತ್ತಿದ್ದಾರೆ, ಅವರು ಬ್ರಿಟಿಷ ವಿಚಾರಧಾರೆಯ ‘ಬ್ರೌನ್ ಸಾಹೇಬ’ರಾಗಿದ್ದಾರೆ. ಇದರ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಈ ವಿಡಿಯೋ ಹಿಂದೂಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಅದಕ್ಕೆ ೨೦ ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ.
(ಸೌಜನ್ಯ – Prachyam)