ಭಾರತದ ನಂತರ ಈಗ ಬ್ರಿಟನ್ ನಿಂದ ಖಲಿಸ್ತಾನಿಗಳ ಮೇಲೆ ಕ್ರಮ !

ಬ್ರಿಟನ್ ೧೨ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದರೇ ೪೦ ಜನರ ವಿಸಾ ರದ್ದು !

ಲಂಡನ್ (ಬ್ರಿಟನ್) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಸಂದರ್ಭದಲ್ಲಿ ಕೆನಡಾದಿಂದ ಭಾರತದ ಮೇಲೆ ಮಾಡಿರುವ ಆರೋಪದ ನಂತರ ಭಾರತದ ಎನ್.ಐ.ಎ. ಇಂದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅಲ್ಲಿ ಬ್ರಿಟನ್ ಕೂಡ ಕಠಿಣ ನಿಲುವನ್ನು ವಹಿಸಿದೆ. ಬ್ರಿಟನ್ ಪ್ರಧಾನಮಂತ್ರಿ ಋಷಿ ಸುನಾಕ್ ಇವರ ಆದೇಶದಂತೆ ಸಿದ್ಧಗೊಳಿಸಲಾದ ವಿಶೇಷ ಕಾರ್ಯಪಡೆ (ಸ್ಪೆಷಲ್ ಟಾಸ್ಕ್ ಫೋರ್ಸ್) ದಿಂದ ೧೨ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದೆ. ಹಾಗೂ ೪೦ ಕ್ಕು ಹೆಚ್ಚಿನ ಖಲಿಸ್ತಾನಿಗಳ ವಿಸಾ ರದ್ದುಪಡಿಸಲಾಗಿದೆ. ಭಾರತದ ರಾಷ್ಟ್ರೀಯ ತನಿಖಾ ದಳದಿಂದ ಖಲಿಸ್ತಾನಿಗಳ ವಿರುದ್ಧ ಆರೋಪ ಪತ್ರ ದಾಖಲಿಸಲಾಗಿದೆ. ಆದ್ದರಿಂದ ಕೆನಡಾದಲ್ಲಿ ವಾಸಿಸುತ್ತಿರುವ ಖಲಿಸ್ತಾನಿಗಳ ವಿರುದ್ಧ ಮುಂಬರುವ ಕಾಲದಲ್ಲಿ ಕ್ರಮ ಕೈಗೊಳ್ಳಲೇ ಬೇಕಾಗುವುದು, ಎಂದು ವಿದೇಶಾಂಗ ಸಂಬಂಧದ ತಜ್ಞರಿಂದ ಹೇಳಲಾಗುತ್ತಿದೆ.

(ಸೌಜನ್ಯ – ZeeNews)

ಸಂಪಾದಕೀಯ ನಿಲುವು

ಇದು ಭಾರತದ ವಿದೇಶಾಂಗ ನೀತಿಯ ವಿಜಯವಾಗಿದೆ. ಭಾರತವು ಇದೇ ರೀತಿ ಆಕ್ರಮಣಕಾರಿ ನೀತಿ ಅನುಸರಿಸಿ ಖಲಿಸ್ತಾನಿಗಳಿಗೆ ಆಶ್ರಯ ನೀಡುವ ದೇಶಗಳ ಮೇಲೆ ಒತ್ತಡ ಹೇರಿದರೆ ಖಲಿಸ್ತಾನಿಗಳ ಮೇಲೆ ಅಂಕುಶವಿಡಲು ಭಾರತಕ್ಕೆ ಸಾಧ್ಯವಾಗುವುದು.